More

    ಪ್ಲಾಸ್ಮಾ ದಾನ ಮಾಡಿ 350 ಮಂದಿ ಕರೊನಾ ಸೋಂಕಿತರ ಜೀವ ಉಳಿಸಿದ ಪೊಲೀಸರು

    ನವದೆಹಲಿ: ಕರೊನಾ ಸೋಂಕಿತರಿಗೆ ನೀಡಲಾಗುವ ಪ್ಲಾಸ್ಮಾ ಚಿಕಿತ್ಸೆ ಬಗ್ಗೆ ಅನೇಕ ಪರ-ವಿರೋಧಗಳು ನಡೆಯುತ್ತಲೇ ಇವೆ. ಆದರೆ ಈ ನಡುವೆಯೇ ಅತ್ಯಂಥ ಶ್ಲಾಘನಾರ್ಹ ಕಾರ್ಯವೊಂದನ್ನು ದೆಹಲಿ ಪೊಲೀಸರು ಮಾಡಿದ್ದಾರೆ.

    ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವವನ್ನು ಪೊಲೀಸರು ಉಳಿಸಿದ್ದಾರೆ. ಕರೊನಾ ಸೋಂಕಿನಿಂದ ಗುಣ ಮುಖರಾದವರ ದೇಹದಲ್ಲಿ ಕರೊನಾ ವೈರಸ್‌ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ. ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸಲಾಗುತ್ತದೆ. ಕರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಲು ಅರ್ಹರು. ಇದೇ ಪ್ಲಾಸ್ಮಾ ಥೆರಪಿ.

    ಮನುಷ್ಯರ ದೇಹದಲ್ಲಿ ದೇಹನಿರೋಧಕ ಶಕ್ತಿ ಹೆಚ್ಚಿಗೆ ಇದ್ದಷ್ಟು ಯಾವುದೇ ವೈರಸ್‌ಗಳು ಸುಲಭದಲ್ಲಿ ಅಟ್ಯಾಕ್‌ ಮಾಡುವುದಿಲ್ಲ. ಕರೊನಾ ವೈರಸ್‌ ಕೂಡ ಇದರಿಂದ ಹೊರತಾಗಿಲ್ಲ. ರೋಗವನ್ನು ಉಂಟು ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕರೊನಾ ವೈರಸ್‌ನಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ ಎನ್ನುತ್ತಾರೆ ವೈದ್ಯರು.

    ಇದನ್ನೂ ಓದಿ: ಅನಾಥ ಮನೆ, ಘೋರ ನಿಃಶ್ಶಬ್ದ… ಪತ್ನಿ-ಮಕ್ಕಳ ನೆನೆದು ಕಣ್ಣೀರಾದ ಜೋ ಬೈಡೆನ್​

    ಅಂಥ ವ್ಯಕ್ತಿಗಳ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದು, ಅದನ್ನು ಸೋಂಕಿತರ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಲು ಅವಕಾಶವಿದೆ. ಒಬ್ಬ ರೋಗಿಗೆ ಒಂದು ಡೋಸ್ ಸಾಕಾಗುತ್ತದೆ. ಹೀಗಾಗಿ ಗುಣಮುಖರಾದವರು ಒಬ್ಬರೇ ಇಬ್ಬರು ಸೋಂಕಿತರಿಗೆ ಪ್ರತಿರೋಧ ಕಣಗಳನ್ನು ನೀಡಿ ಮೂವರನ್ನು ಗುಣಪಡಿಸಬಹುದಾಗಿದೆ.

    ಇಂಥ ವಿಶೇಷತೆಯುಳ್ಳ ಪ್ಲಾಸ್ಮಾ ಥೆರಪಿಗೆ ಮುಂದಾದ ಸೋಂಕಿತ ಪೊಲೀಸರು 350 ಮಂದಿ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    42 ವರ್ಷದ ಮುಖ್ಯ ಕಾನ್ಸ್​ಟೆಬಲ್​ ಕೃಷ್ಣನ್ ಕುಮಾರ್ ಸದ್ಯ ನೈರುತ್ಯ ಜಿಲ್ಲೆಯ ಕಾಪಶೇರಾ ಗಡಿಗೆ ನಿಯೋಜಿಸಲಾಗಿದೆ. ಸುಮಾರು 1 ತಿಂಗಳ ಕಾಲ ವೆಂಟಿಲೇಟರ್​ನಲ್ಲಿದ್ದ ಅವರಿಗೆ ಬದುಕುವ ಭರವಸೆಯೇ ಇರಲಿಲ್ಲ. ಆದರೆ ಅವರು ಚೇತರಿಸಿಕೊಂಡ ನಂತರ ಪ್ಲಾಸ್ಮಾ ದಾನಕ್ಕೆ ಪ್ರೇರಣೆ ಸಿಕ್ಕು ಅವರು ದಾನ ಮಾಡಿದ್ದಾರೆ. ಐದು ಬಾರಿ ಪ್ಲಾಸ್ಮಾ ದಾನ ಮಾಡಿರುವ ಕುಮಾರ್ 15 ಮಂದಿ ಜೀವ ಉಳಿಸಿದ್ದಾರೆ.

    ನವೆಂಬರ್ 23ರ ವರೆಗೂ ದೆಹಲಿಯ 323 ಪೊಲೀಸ್ ಸಿಬ್ಬಂದಿ ಪ್ಲಾಸ್ಮಾ ದಾನ ಮಾಡಿದ್ದು, ಅದರಲ್ಲಿ 87 ಮಂದಿ ಸಹೋದ್ಯೋಗಿಗಳಿಗೆ ದಾನ ಮಾಡಿದ್ದಾರೆ. 107 ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿದ್ದು ಉಳಿದಂತೆ 134 ಮಂದಿ ಹೊರಗಿನವರಿಗೆ ದಾನ ಮಾಡಿರುವುದಾಗಿ ಹೇಳಲಾಗಿದೆ.

    ಆಗ್ನೇಯ ಜಿಲ್ಲೆಯ ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ತರಬೇತಿ ಕಾಲೇಜಿನ ಒಬ್ಬರು ತಲಾ ಮೂರು ಬಾರಿ ಪ್ಲಾಸ್ಮಾ ದಾನ ಮಾಡಿದ್ದರೆ, ಆಗ್ನೇಯ ಜಿಲ್ಲೆಯ ಎಂಟು ಪೊಲೀಸ್ ಸಿಬ್ಬಂದಿ ಎರಡು ಪ್ಲಾಸ್ಮಾ ದಾನ ಮಾಡಿದ್ದಾರೆ.
    81.346 ಪೊಲಿಸ್​ ಸಿಬ್ಬಂದಿಯಲ್ಲಿ ದೆಹಲಿಯ 6,937 ಸಿಬ್ಬಂದಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಅದರಲ್ಲಿ 26 ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಹೊಟ್ಟೆನೋವಿನಿಂದ ಕುಸಿದೆ, ಮಗು ಕಳೆದುಕೊಳ್ಳುತ್ತಿರುವ ಅರಿವಾಯ್ತು- ರಾಜಕುಮಾರಿ ಬಿಚ್ಚಿಟ್ಟ ನೋವಿನ ಘಟನೆ

    ಮಗು ಸತ್ತು ಹೋಯಿತು ಎಂದು ಸುಳ್ಳು ಹೇಳಿದ ಈ ತಂದೆ ಮಾಡಿದ್ದು ಪಾಪದ ಕೆಲಸ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts