More

    ಚಳಿಗಾಲ ಕಾಲಿಟ್ಟರೆ ಈ ಗ್ರಾಮದ ಬಣ್ಣವೇ ಬದಲಾಗುತ್ತೆ!

    ಕೋಯಿಕ್ಕೋಡ್ (ಕೇರಳ): ಒಂದೊಂದು ಕಾಲದಲ್ಲಿಯೂ ಪ್ರಕೃತಿಯದ್ದು ಒಂದೊಂದು ವಿಸ್ಮಯ. ಬಿರುಬಿಸಿಲಿನಲ್ಲಿಯೂ ಕೆಲವೊಂದು ಮರದಲ್ಲಿ ಹೂವು ನಳನಳಿಸಿದರೆ, ಮಳೆ, ಚಳಿಗಾಲದಲ್ಲಿ ಇನ್ನಾವುದೋ ಹೂವುಗಳ ರಾಶಿ ರಾಶಿ… ಒಟ್ಟಿನಲ್ಲಿ ಮನುಷ್ಯನ ಊಹೆಗೂ ನಿಲುಕದ್ದ ವಿಚಿತ್ರಗಳು ಪ್ರಕೃತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ.

    ಅಂಥದ್ದೇ ಒಂದು ವಿಚಿತ್ರ ಸಂಭವಿಸುತ್ತಿರುವುದು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅವಲಪಂಡಿ ಎಂಬ ಹಳ್ಳಿಯೊಂದರಲ್ಲಿ. ಚಳಿಗಾಲ ಶುರುವಾಯಿತೆಂದರೆ ಈ ಗ್ರಾಮ ಪೂರ್ತಿ ಗುಲಾಬಿ ಬಣ್ಣದಿಂದ ನಳನಳಿಸುತ್ತದೆ, ಸಂಪೂರ್ಣ ಗ್ರಾಮದ ಚಿತ್ರಣವೇ ಬದಲಾಗಿಬಿಡುತ್ತದೆ.

    ಇಂಥದ್ದೊಂದು ವಿಸ್ಮಯ ಈಗಲೂ ನಡೆಯುತ್ತಿದೆ. ಇದೀಗ ಚಳಿಗಾಲ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ವಿಶೇಷತೆಯನ್ನು ಅಲ್ಲಿ ನೋಡಬಹಾಗಿದೆ. ಅಷ್ಟಕ್ಕೂ, ಗ್ರಾಮದ ಬಣ್ಣ ಬದಲಾಗಲು ಕಾರಣ, ಇಡೀ ಗ್ರಾಮದ ತುಂಬ ಹರಡಿರುವ ಹೂವಿನಿಂದಾಗಿ.

    ಕಣ್ಣು ಹಾಯಿಸಿದಲ್ಲೆಲ್ಲಾ ಈ ಹೂವೀಗ ಅರಳಿ ನಿಂತು ಗ್ರಾಮದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಹೆಚ್ಚಾಗಿ ನೀರಿನಿಂದ ಕೂಡಿರುವ ಈ ಗ್ರಾಮದಲ್ಲಿ ನೀರಿನ ಮೇಲೆ ಈ ಹೂವುಗಳು ಬೆಳೆಯುತ್ತವೆ. ಕಾಬೊಂಬಾ ಫರ್ಕಾಟಾ ಎಂಬ ಜಾತಿಗೆ ಸೇರಿದ ಮುಲ್ಲನ್​ ಪಾಯಲ್​ ಸಸ್ಯರಾಶಿಯಿಂದಾಗಿ ಇಡೀ ಗ್ರಾಮವೇ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ.

    ಈ ಹೂವುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಕಾರಣ, ಇಂಥದ್ದೊಂದು ವಿಶೇಷ ಗ್ರಾಮ ಇರುವುದು ಜಗತ್ತಿನ ಮೂಲೆ ಮೂಲೆಯಲ್ಲಿ ಇರುವ ಜನರಿಗೆ ತಿಳಿಯುತ್ತಿದೆ. ಈ ಗ್ರಾಮವನ್ನು ನೋಡಲು ಜನ ಉತ್ಸುಕರಾಗಿದ್ದಾರೆ.

    ಗ್ರಾಮಸ್ಥರು ಈ ಹೂವುಗಳನ್ನು ಮಾರಿ ಚಳಿಗಾಲದ ಸಮಯದಲ್ಲಿ ಆದಾಯ ಗಳಿಸುತ್ತಿದ್ದಾರೆ.
    ಆದರೆ ಒಂದೇ ಒಂದು ನೋವಿನ ಸಂಗತಿ ಎಂದರೆ ಈ ಹೂವುಗಳು, ಗಿಡಗಳು ಜಲಮೂಲಗಳಿಗೆ ಅಪಾಯ ತಂದೊಡ್ಡುತ್ತವೆಯಂತೆ. ಈ ಕುರಿತು ಸಸ್ಯಶಾಸ್ತ್ರಜ್ಞ ಡಾ.ಪಿ. ದಿಲೀಪ್​ ಮಾತನಾಡಿದ್ದಾರೆ. ಈ ಹೂವುಗಳು ನೋಡಲು ಸುಂದರವಾಗಿರಬಹುದು ಆದರೆ…ಜಲಮೂಲಗಳಿಗೆ ಅಪಾಯ ತಂದೊಡ್ಡಲಿವೆ ಎಂದು ಅವರು ಹೇಳುತ್ತಾರೆ.

    ಟ್ರಂಪ್​ ತೆಗೆದುಕೊಂಡ್ರು ಮಹತ್ವದ ನಿರ್ಧಾರ- ಅಮೆರಿಕದಲ್ಲಿ ಶುರುವಾಗಲಿದೆ ಹೊಸ ಪರ್ವ

    ‘ಊಟ ಮಾಡಿದ್ದು ದಲಿತರ ಮನೆಯಲ್ಲೇ… ಆದ್ರೆ ಅಡುಗೆ ಮಾಡಿದ್ದು ಮಾತ್ರ ಬ್ರಾಹ್ಮಣರು’

    ಪ್ರಧಾನಿ ಮೋದಿ ವಿರುದ್ಧ ಕೋರ್ಟ್​ಗೆ ಹೋಗಿದ್ದ ಯೋಧ: ಹೊರಬಿತ್ತು ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts