More

    ಪ್ಯಾನ್‌ ಕಾರ್ಡ್‌ಗೆ ಕನ್ನ ಹಾಕಿ ಐದು ಲಕ್ಷ ವಂಚನೆ! ಟೆಕ್ಕಿ ಕಕ್ಕಾಬಿಕ್ಕಿ…

    ಪುಣೆ: ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬನ ಪ್ಯಾನ್‌ ಕಾರ್ಡ್‌ಗೆ ಕನ್ನ ಹಾಕಿ ಬ್ಯಾಂಕ್‌ನಿಂದ ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ವಂಚಕರು, ಐದು ಲಕ್ಷ ರೂಪಾಯಿ ಲಪಟಾಯಿಸಿರುವ ಘಟನೆಯ ಪುಣೆಯ ಹಿಂಜೇವಾಡಿಯಲ್ಲಿ ನಡೆದಿದೆ.

    ಹಿಂಜೇವಾಡಿಯ 40 ವರ್ಷದ ಸಾಫ್ಟ್‌ವೇರ್ ಪ್ರೋಗ್ರಾಂ ಇಂಜಿನಿಯರ್ ಲೋಕೇಶ್‌ ಎನ್ನುವವರು ಈ ಮೋಸಕ್ಕೆ ಬಲಿಯಾದವರು. ಸೆಪ್ಟೆಂಬರ್ ಮತ್ತು ಡಿಸೆಂಬರ್ 2019ರ ನಡುವೆ ಐದು ಲಕ್ಷ ರೂಪಾಯಿಗಳ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದೆ.

    ಈ ಘಟನೆ ನಡೆದು ವರ್ಷವಾಗುತ್ತ ಬಂದಿದೆ. ಆದರೆ ತಾವು ಮೋಸ ಹೋಗಿರುವುದು ಟೆಕಿಗೆ ಇದೀಗ ಬೆಳಕಿಗೆ ಬಂದಿದೆ.

    ರಾಷ್ಟ್ರೀಕೃತ ಹಣಕಾಸು ಸಂಸ್ಥೆಯೊಂದರಲ್ಲಿ ಖಾತೆ ತೆರೆದಿರುವ ಲೋಕೇಶ್‌ ಅವರು ಈ ವಂಚನೆಗೆ ಒಳಗಾಗಿದ್ದಾರೆ. ಕಳೆದ ವಾರ ಇವರಿಗೆ ಸಂಸ್ಥೆಯಿಂದ ಹಣವನ್ನು ಮರುಪಾವತಿಸುವಂತೆ ಕರೆ ಬಂದಿದೆ. ಕರೆಯನ್ನು ಕೇಳಿ ಲೋಕೇಶ್ ದಂಗಾಗಿ ಹೋಗಿದ್ದಾರೆ. ತಾವು ಕ್ರೆಡಿಟ್‌ ಕಾರ್ಡ್‌ಗೆ ಅಪ್ಲೈ ಮಾಡಿಯೇ ಇಲ್ಲ. ಇದನ್ನು ಅದನ್ನು ಬಳಸಿ ಸಾಮಗ್ರಿ ಖರೀದಿ ಮಾಡಿರುವ ಮಾತೆಲ್ಲಿ ಎಂದಿದ್ದಾರೆ.

    ನಂತರ ಪರಿಶೀಲನೆ ಮಾಡಿದಾಗ ಪ್ಯಾನ್‌ ಕಾರ್ಡ್‌ ಬಳಸಿ ಲೋಕೇಶ್‌ ಅವರ ಹೆಸರಿನಲ್ಲಿ ಕ್ರೆಡಿಟ್‌ ಕಾರ್ಡ್‌ ಖರೀದಿ ಮಾಡಿರುವುದು ತಿಳಿದುಬಂದಿದೆ. ಇದೀಗ ಸಂಸ್ಥೆಯ ವಿರುದ್ಧ ಲೋಕೇಶ್‌ ದೂರು ದಾಖಲು ಮಾಡಿದ್ದಾರೆ.

    ಇದನ್ನೂ ಓದಿ: ವೈದ್ಯೆ, ಉಪನ್ಯಾಸಕ ಸೇರಿ ಮನೆಯಲ್ಲಿ ನಾಲ್ವರ ಶವ- ಸಾವಿನ ಹಿಂದೆ ಹತ್ತಾರು ಪ್ರಶ್ನೆ

    ತಾವು ಖುದ್ದು ಹಾಜರು ಇಲ್ಲದಿದ್ದರೂ, ಪ್ಯಾನ್‌ ಕಾರ್ಡ್‌ ಒಂದನ್ನೇ ಇಟ್ಟುಕೊಂಡು ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೇ ಕಾರ್ಡ್‌ ನೀಡಿರುವ ಬ್ಯಾಂಕ್‌ ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕೇಶ್‌ ದೂರು ದಾಖಲಿಸಿದ್ದಾರೆ.

    ಯಾವುದೇ ದಾಖಲೆಗಳನ್ನು ಕೇಳದೇ ಕೇವಲ ಪ್ಯಾನ್‌ ಕಾರ್ಡ್‌ ಆಧಾರದ ಮೇಲೆ ಕ್ರೆಡಿಟ್‌ ಕಾರ್ಡ್‌ ನೀಡಿರುವುದು ಹಣಕಾಸು ಸಂಸ್ಥೆ ಮಾಡಿರುವ ತಪ್ಪು ಎಂದು ದೂರಿದ್ದಾರೆ. ಈ ಕುರಿತು ತಾವು ತನಿಖೆ ಕೈಗೊಂಡಿರುವುದಾಗಿ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕ್ ಮುಗ್ಲಿಕರ್ ಹೇಳಿದ್ದಾರೆ.

    ಚಾಮರಾಜನಗರದ ಮೊದಲ ಬಿಜೆಪಿ ಶಾಸಕ ಗುರುಸ್ವಾಮಿ ಕರೊನಾದಿಂದ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts