More

    ಯುದ್ಧ ಪೀಡಿತ ಇಸ್ರೇಲ್​ನಲ್ಲಿ ಸಿಲುಕಿದ ಕನ್ನಡತಿ: ಪಾಲಕರ ಮನದಲ್ಲಿ ಕವಿದ ಆತಂಕದ ಕಾರ್ಮೋಡ

    ಬಾಗಲಕೋಟೆ: ಯುದ್ಧ ಪೀಡಿತ ಇಸ್ರೇಲ್​ನಲ್ಲಿ ಬಾಗಲಕೋಟೆಯ ರಬಕವಿ ಪಟ್ಟಣದ ಸಾಫ್ಟ್​ವೇರ್​ ಇಂಜಿನಿಯರ್ ಪೂಜಾ ಉಮದಿ ಅವರು ಸಿಲುಕಿದ್ದು, ಅವರ ಕುಟುಂಬ ಆತಂಕದಲ್ಲಿ​ ಮುಳುಗಿದೆ.

    ಟಿಸಿಎಸ್ ಕಂಪನಿಯಿಂದ ಎರಡು ವರ್ಷದ ಅವಧಿಗೆ ಪೂಜಾ ಇಸ್ರೇಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರ ಗಂಪು ಇಸ್ರೇಲ್​ ಮೇಲೆ ದಾಳಿ ಮಾಡಿದಾಗಿನಿಂದ ಇಸ್ರೇಲ್​-ಹಮಾಸ್​ ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೇ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆಕೊಂಡಿದ್ದಾರೆ. ಜೀವ ಕಳೆದುಕೊಂಡವರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ.

    ಪೂಜಾ ಉಮದಿ ಕೂಡ ಇಸ್ರೇಲ್​ನಲ್ಲಿ ಇರುವುದರಿಂದ ಸಹಜವಾಗಿಯೇ ಅವರ ತಂದೆ ಸಂಗಪ್ಪ ಮತ್ತು ತಾಯಿ ನಿರ್ಮಲಾ ಆತಂಕ ಉಂಟಾಗಿದೆ. ಮಗಳ ಬರುವಿಕೆಗಾಗಿ ಕುಟುಂಬ ಕಾದು ಕುಳಿತಿದೆ. ಸಂಘರ್ಷ ನಡೆಯುತ್ತಿರುವ ಗಾಜಾಪಟ್ಟಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿ ಪೂಜಾ ನೆಲೆಸಿದ್ದಾರೆ. ಸೈರನ್ ಆದ ತಕ್ಷಣ ಬಂಕರ್​ನಲ್ಲಿ ಹೋಗುತ್ತಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ಇದೆ.

    ಇದನ್ನೂ ಓದಿ: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಖಾತೆಯಿಂದಲೇ 2.50 ಲಕ್ಷ ರೂ. ವಂಚನೆ

    ಸುರಕ್ಷವಾಗಿ ಇರುವುದಾಗಿ ಮಗಳು ಹೇಳುತ್ತಿದ್ದಾಳೆ. ಆದರೆ, ನಮಗೆ ಆತಂಕ ಕಡಿಮೆ ಆಗುತ್ತಿಲ್ಲ. ಒಬ್ಬಳೇ ಮಗಳು ಮತ್ತು ಒಬ್ಬ ಮಗನಿದ್ದಾನೆ. ಮಗ ಬೆಂಗಳೂರಲ್ಲಿ ಇದ್ದಾನೆ. ಮಗಳು ಪೂಜಾ ಒಂದುವರೆ ವರ್ಷದ ಹಿಂದೆ ಇಸ್ರೇಲ್​ಗೆ ಹೋಗಿದ್ದಾಳೆ. ಇಬ್ಬರನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದೇವೆ. ಭಾರತ ಸರ್ಕಾರ ಆದಷ್ಟು ಬೇಗ ನಮ್ಮವರನ್ನು ದೇಶಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರಬೇಕು ಎಂದು ಕುಟುಂಬ ಮನವಿ ಮಾಡಿದೆ.

    ನಮ್ಮ ಮಗಳ ಸೇರಿ ಅಲ್ಲಿ ಮೂವರು ಭಾರತೀಯರು ಇದ್ದಾರೆ ಎಂದು ಪೂಜಾ ತಾಯಿ ನಿರ್ಮಲಾ ಮಾಹಿತಿ ನೀಡಿದರು. ನಮ ಮಗಳು ಬೇಗ ಮನೆಗೆ ಬರಲಿ ಹೀಗಾಗಿ, ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಪೂಜಾ ತಂದೆ ಸಂಗಪ್ಪ ಮಾಧ್ಯಮಗಳ ಮುಂದೆ ಮನವಿ ಮಾಡಿದರು.

    ಸಾರ್ವಜನಿಕರ ಗಮನಕ್ಕೆ: ಅ. 12ರಂದು ರಾಜ್ಯದ ಪ್ರತಿಯೊಬ್ಬರ ಮೊಬೈಲ್​ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್​!

    ಸಂಸದರ ಉಳಿತಾಯ ಖಾತೆಯಿಂದ 99,999 ರೂ. ಎಗರಿಸಿದ್ರು!; ಬ್ಯಾಂಕ್ ಬಗ್ಗೆ ಕೇಂದ್ರದ ಮಾಜಿ ಸಚಿವರ ಅಸಮಾಧಾನ

    ಪ್ರದೀಪ್​ ಈಶ್ವರ್​ ಬಿಗ್​ಬಾಸ್​ ವಿವಾದ; ಡಿ.ಕೆ. ಶಿವಕುಮಾರ್​ ಹೇಳಿದ್ದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts