More

    ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​

    ಇಸ್ಲಾಮಾಬಾದ್‌: ಮಹಾನ್​ ಭಯೋತ್ಪಾದಕರನ್ನು ತನ್ನ ನೆಲದಲ್ಲಿ ಬಚ್ಚಿಟ್ಟುಕೊಂಡು, ಉಗ್ರರಿಗೆ ಶರಣು ನೀಡುತ್ತಿರುವ ಪಾಕಿಸ್ತಾನಕ್ಕೆ ಇದೀಗ ಭಾರಿ ನಡುಕ ಉಂಟಾಗಿದೆ. ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ ಎನ್ನುತ್ತಿದೆ.

    ಹೌದು. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ ಹೊತ್ತು, ಬೂದು ಪಟ್ಟಿಯಲ್ಲಿರುವ ಪಾಕಿಸ್ತಾನ ಈಗ ವಿನಾಶದ ಅಂಚಿನತ್ತ ಸರಿದಿದೆ. ಅದರಿಂದ ಹೊರಬರಲು ಹೆಣಗಾಡುತ್ತಿದೆ. ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಣಿಡುವ ಹಣಕಾಸು ನಿಗಾ ಕಾರ್ಯಪಡೆ (ಎಫ್​ಎಟಿಎಫ್​) ಪ್ಯಾರಿಸ್‌ನಲ್ಲಿ ಅ.21-23ರವರೆಗೆ ಸಭೆ ಸೇರಲಿದೆ. ಒಂದು ವೇಳೆ ಈ ಸಭೆಯಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಹೊರಕ್ಕಿಡಬೇಕೆ, ಬೇಡವೇ ಎಂಬ ಬಗ್ಗೆ ತೀರ್ಮಾನ ಆಗಲಿದೆ. ಒಂದು ವೇಳೆ ಇಲ್ಲೇನಾದರೂ ಪಾಕಿಸ್ತಾನದ ವಿರುದ್ಧ ಬಹುಮತಗಳು ಬಂದರೆ, ಪಾಕ್​ನ ಭವಿಷ್ಯ ಅಧೋಗತಿಗೆ ಇಳಿಯಲಿದೆ.

    ಏನಿದು ಬೂದುಪಟ್ಟಿ? ಅಷ್ಟಕ್ಕೂ ಏನಿದು ಬೂದು ಪಟ್ಟಿ ಎಂದು ನೋಡುವುದಾದರೆ, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು, ಇತರ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಧಕ್ಕೆ ತರುವುದನ್ನು ನಿಗ್ರಹಿಸಲು 1989ರಲ್ಲಿ ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಸ್ಥೆ ಎಫ್ಎಟಿಎಫ್.

    ಎಫ್ಎಟಿಎಫ್ ನಿಯಮ ಪ್ರಕಾರ, ಉಗ್ರರಿಗೆ ಹಣಕಾಸಿನ ನೆರವು ನೀಡುವ ರಾಷ್ಟ್ರಗಳನ್ನು ಬೂದು ಪಟ್ಟಿಗೆ ಸೇರಿಸಲಾಗುತ್ತದೆ. ಈ ಮೂಲಕ ಇನ್ನುಮುಂದೆ ಆ ರೀತಿ ಮಾಡದಂತೆ ಬಲವಾದ ಎಚ್ಚರಿಕೆಯನ್ನು ದೇಶಕ್ಕೆ ನೀಡಲಾಗುತ್ತದೆ, ತನ್ನನ್ನು ತಿದ್ದುಕೊಂಡು ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದಾಗಲೇ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸಲಾಗಿದೆ. ಒಂದು ವೇಳೆ ಅದು ತಿದ್ದಿಕೊಳ್ಳದೇ ಹೋದರೆ ಅಂತಿಮವಾಗಿ ಬ್ಲ್ಯಾಕ್​ಲಿಸ್ಟ್​ಗೆ ಅಂದರೆ ಅಂಥ ರಾಷ್ಟ್ರವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

    ಇದನ್ನೂ ಓದಿ: ಕಂದಮ್ಮನ ಮೇಲೆ ಅತ್ಯಾಚಾರ: ಓಡಿಹೋಗುತ್ತಿದ್ದನ ಮೇಲೆ ಗುಂಡು ಹಾರಿಸಿದ ಪೊಲೀಸರು

    ಹೀಗೆ ಯಾವುದೇ ರಾಷ್ಟ್ರ ಕಪ್ಪುಪಟ್ಟಿಗೆ ಹೋದರೆ ಆ ದೇಶ ಅಧೋಗತಿಗೆ ಇಳಿದಂತೆಯೇ. ಏಕೆಂದರೆ ಅಂಥ ರಾಷ್ಟ್ರಗಳಿಗೆ ಯಾವುದೇ ದೇಶಗಳಿಂದ ಯಾವುದೇ ರೀತಿಯ ಸಹಾಯ ಸಹಕಾರಗಳು ದೊರಕುವುದಿಲ್ಲ.

    ಟ್ರಂಪ್​ಗೆ ಮೊರೆ: ಇದರಿಂದ ಭಯಭೀತವಾಗಿರುವ ಪಾಕಿಸ್ತಾನ, ಲಾಬಿಯ ದಾರಿ ಹಿಡಿದಿದೆ. 21ರಿಂದ 23ರ ವರೆಗೆ ನಡೆಯಲಿರುವ ಸಭೆಯಲ್ಲಿ ಪಾಕ್​ ಪರ ಬಹುಮತ ಬಂದರೆ, ಅದನ್ನು ಬೂದುಪಟ್ಟಿಯಿಂದ ಹೊರಕ್ಕೆ ಇಡಲಾಗುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ. ಪಾಕಿಸ್ತಾನ ಸೇರಿದಂತೆ 39 ಸದಸ್ಯ ರಾಷ್ಟ್ರಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಇವುಗಳಲ್ಲಿ ಕನಿಷ್ಠ 12 ರಾಷ್ಟ್ರಗಳು ಬೆಂಬಲಿಸಿದರಷ್ಟೇ ಪಾಕ್‌ “ಬೂದು ಪಟ್ಟಿ’ಯಿಂದ ಹೊರಬರಲಿದೆ.

    ಆದರೆ ಪಾಕ್‌ ಉಗ್ರರ ತವರು ಎನ್ನುವ ಕಾರಣದಿಂದ ಚೀನಾ, ಸೌದಿಯನ್ನು ಧಿಕ್ಕರಿಸುತ್ತಿರುವ ಟರ್ಕಿ, ಇಮ್ರಾನ್‌ ಖಾನ್‌ ಆಪ್ತರಾಷ್ಟ್ರ ಮಲೇಷಿಯಾ ಬಿಟ್ಟರೆ ಮಿಕ್ಕವರಾರೂ ತನಗೆ ಮತ ಚಲಾಯಿಸುವುದಿಲ್ಲ ಎನ್ನುವುದು ಪಾಕಿಸ್ತಾನಕ್ಕೆ ತಿಳಿದಿದೆ. ಆದ್ದರಿಂದ ಕನಿಷ್ಠ 12 ಮತ ಪಡೆಯುವುದು ಕನಸಿನ ಮಾತು ಎನ್ನುವುದು ಗೊತ್ತಾಗಿದೆ.

    ಇದಾಗಲೇ, ಉಗ್ರರಿಗೆ ನೆರವಾದ ಕಾರಣಕ್ಕೆ ಇಸ್ಲಾಮಾಬಾದ್‌ ಅನ್ನು ಟ್ರಂಪ್‌ ಆಡಳಿತ ಯಾವತ್ತೋ ದೂರ ಇಟ್ಟಿದೆ. ಆದರೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಪುಸಲಾಯಿಸುವ ಕಾರ್ಯಕ್ಕೆ ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದೆ.

    ಹ್ಯೂಸ್ಟನ್‌ನ ಹೆಸರಾಂತ ಲಾಬಿ ಏಜೆನ್ಸಿ ಎಂದೇ ಗುರುತಿಸಿಕೊಂಡಿರುವ ‘ಲಿಂಡೆನ್‌ ಸ್ಟ್ರಾಟೆಜೀಸ್‌’ಗೆ ತನ್ನ ಸಾಚಾತನದ ಪರ ವಕಾಲತ್ತು ವಹಿಸಲು, ಟ್ರಂಪ್‌ ಸರ್ಕಾರಕ್ಕೆ ಸುಳ್ಳು ಮಾಹಿತಿಗಳ ಮೂಲಕ ಮನವೊಲಿಸುವ ಹೊಣೆ ವಹಿಸಿದೆ ಎನ್ನಲಾಗಿದೆ.

    ತಾಲಿಬಾನ್‌, ಹಖ್ಖಾನಿ, ಅಲ್‌ ಕಾಯಿದಾ ಮತ್ತು ದಾಯೇಶ್‌- ಈ ಜಾಗತಿಕ ಉಗ್ರ ಸಂಘಟನೆಗಳ ಮೂಲ ತನ್ನದಲ್ಲ, ಬದಲಿಗೆ ಅದು ಅಫ್ಘಾನಿಸ್ಥಾನದ್ದು, ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ ಪಂಜಾಬ್‌ ಪ್ರಾಂತ್ಯದಲ್ಲಿ ಹಾಸಿಗೆ ಹಿಡಿದಿದ್ದಾನೆ, ಎಫ್ಎಟಿಎಫ್ ಈ ಹಿಂದೆ ಗುರುತಿಸಿದ್ದ 4 ಉಗ್ರರು, ಇಬ್ಬರು ಹಿರಿಯ ಮುಖ್ಯಸ್ಥರನ್ನು ಪಾಕ್‌ ಈಗಾಗಲೇ ಶಿಕ್ಷೆಗೊಳಪಡಿಸಲಾಗಿದೆ, ಬಹವಾಲ್ಪುರ ಮೂಲದ ಜೆಇಎಂ ಉಗ್ರ ಸಂಘಟನೆ ಅಫ್ಘಾನ್‌ ಮೂಲದ ಕಾರ್ಯಾಚರಣೆ ಮಾದರಿ ಹೊಂದಿದೆ. ಇದರ ಮುಖಂಡರು ಪಾಕಿಸ್ತಾನಕ್ಕೆ ಸೇರಿಲ್ಲ ಎಂದೆಲ್ಲಾ ಹೇಳುವ ಮೂಲಕ ತನ್ನ ಸಾಚಾತನವನ್ನು ದೊಡ್ಡಣ್ಣನ ಮುಂದೆ ಇಡಲು ಪಾಕಿಸ್ತಾನ ಬಯಸಿದೆ ಎಂಬ ಮಾಹಿತಿ ಸಿಕ್ಕಿದೆ.

    ಪ್ರಿಯ ಸೋನಿಯಾಜಿ… ಕೆಲಸ ಮಾಡುವವರಿಗೆ ಬೆಲೆಯೇ ಇಲ್ಲದೆಡೆ ನಾನಿರಲಾರೆ- ‘ಕೈ’ಗೆ ಖುಷ್ಬೂ ಬೈಬೈ!

    ಕೆ.ಕಲ್ಯಾಣ್​ ಕುಟುಂಬಸ್ಥರಿಂದ ಆಸ್ತಿ ಕಬಳಿಕೆ: ವಾಲಿಯ ಆರು ಕೋಟಿ ರೂ ಆಸ್ತಿ ಜಪ್ತಿ

    ನಾಯಿಗಳೊಂದಿಗೆ ವಾಕಿಂಗ್​ ಹೋದಾಕೆ 4 ದಿನ ಪೊದೆಯಲ್ಲಿ ಅಡಗಿ ಕುಳಿತಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts