More

    ಒಂದು ರೂಪಾಯಿ ಕೊಟ್ರೆ ಸಾಕು… ವಕೀಲರು, ಸರ್ಕಾರಿ ನೌಕರರಿಗೆ ಇಲ್ಲಿ ಸಿಗಲಿದೆ ಮನೆ! ಏನಿದು ಯೋಜನೆ?

    ಲಖನೌ: ಶೀಘ್ರದಲ್ಲಿಯೇ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್‌ ನೀಡಿದೆ. ಅದೇನೆಂದರೆ, ಸರ್ಕಾರಿ ನೌಕರರು ಮತ್ತು ವಕೀಲರು ಕೇವಲ ಒಂದು ರೂಪಾಯಿ ಪಾವತಿಸಿದರೆ ಸಾಕು, ಉತ್ತರ ಪ್ರದೇಶದಲ್ಲಿ ಅವರಿಗೆ ಮನೆಯನ್ನು ಮಂಜೂರು ಮಾಡುವುದಾಗಿ ಸರ್ಕಾರ ಘೋಷಿಸಿದೆ.

    ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರು ಮತ್ತು ವಕೀಲರು ಈ ಪ್ರಯೋಜನ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರ ಸಂಬಳ ಕಡಿಮೆಯಿದ್ದು, ಹಲವು ವಕೀಲರು ಕೂಡ ಸಮಸ್ಯೆಯಲ್ಲಿ ಇರುವ ಕಾರಣ, ಅವರಿಗೆ ಈ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಚುನಾವಣಾ ಸಮಯದಲ್ಲೇ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ.

    ಈಗ ತಿಳಿಸಿರುವ ಪ್ರಕಾರ, ಈ ಯೋಜನೆಯ ಅನ್ವಯ ಮನೆಯನ್ನು ಖರೀದಿಸಲು ಇಚ್ಛಿಸುವ ಸರ್ಕಾರಿ ನೌಕರರು ಹಾಗೂ ವಕೀಲರು ಮೊದಲು ಭೂಮಿ ಶುಲ್ಕವಾಗಿ 1 ರೂಪಾಯಿ ನೀಡಬೇಕಾಗುತ್ತದೆ. ಒಂದು ರೂಪಾಯಿ ನೀಡಿ ಮನೆಯನ್ನು ಮೊದಲು ಬುಕ್ಕಿಂಗ್‌ ಮಾಡಿಕೊಳ್ಳಬಹುದು. ನಂತರ ಈ ಮನೆಯನ್ನು 10 ವರ್ಷಗಳವರೆಗೆ ಮಾರಾಟ ಮಾಡುವಂತಿಲ್ಲ ಎಂಬ ಷರತ್ತಿನೊಂದಿಗೆ ಮನೆ ನೀಡಲಾಗುತ್ತದೆ.

    ಸದ್ಯ ಇದಿನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಯೋಜನೆ ಜಾರಿಗೊಳಿಸಲಾಗುವುದು ಅಧಿಕಾರಿಗಳು ಹೇಳೀದ್ದಾರೆ. ಸದ್ಯ ಹಿರಿಯ ಅಧಿಕಾರಿಗಳು ಕರಡು ಪ್ರತಿಯನ್ನು ತಯಾರಿಸಿದ್ದಾರೆ. ಇದಕ್ಕೆ ಉನ್ನತ ಮಟ್ಟದಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಯೋಜನೆ ಜಾರಿಯಾಗಲಿದೆ ಎನ್ನಲಾಗಿದೆ.

    VIDEO: ಕುಳಿತೇ ಜನಗಣಮನ ಎಂದರು, ದಿಢೀರ್‌ ಎದ್ದು ಇನ್ನೊಂದು ಪ್ಯಾರಾದೊಂದಿಗೆ ಮುಗಿಸಿಯೇ ಬಿಟ್ಟರು! ದೀದೀ ವಿರುದ್ಧ ಕೇಸ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts