More

    VIDEO: ಕುಳಿತೇ ಜನಗಣಮನ ಎಂದರು, ದಿಢೀರ್‌ ಎದ್ದು ಇನ್ನೊಂದು ಪ್ಯಾರಾದೊಂದಿಗೆ ಮುಗಿಸಿಯೇ ಬಿಟ್ಟರು! ದೀದೀ ವಿರುದ್ಧ ಕೇಸ್‌…

    ಮುಂಬೈ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಕೇಸ್‌ ದಾಖಲು ಮಾಡಿದೆ.

    ಮುಂಬೈನಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಯ ವೇಳೆ ಅರ್ಧಬಂರ್ಧ ರಾಷ್ಟ್ರಗೀತೆಯನ್ನು ಹೇಳಿ ಜೈ ಮಹಾರಾಷ್ಟ್ರ ಎನ್ನುವ ಮೂಲಕ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖ್ಯಮಂತ್ರಿಯಾಗಿ ಈ ರೀತಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದು ಎಂದಿಗೂ ಸಹಿಸಲಾಗದು ಎಂದಿರುವ ಬಿಜೆಪಿ ಅವರ ವಿರುದ್ಧ ಕೇಸ್‌ ದಾಖಲು ಮಾಡಿದೆ.

    ವೈರಲ್‌ ಆಗಿರುವ ವಿಡಿಯೋದಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಕುಳಿತಲ್ಲಿನಿಂದಲೇ ಜನಗಣಮನ ಎಂದು ಏಕಾಏಕಿ ಶುರು ಮಾಡಿದ ಮಮತಾ, ಒಂದೆರಡು ಸಾಲು ಹೇಳುತ್ತಲೇ ಎದ್ದುನಿಂತರು. ಅವರ ಜತೆ ಅಲ್ಲಿದ್ದವರು ಎಲ್ಲರೂ ಎದ್ದುನಿಂತರು, ನಂತರ ಮುಂದಿನ ಒಂದು ಪ್ಯಾರಾ ರಾಷ್ಟ್ರಗೀತೆ ಹೇಳಿ ಜೈಮಹಾರಾಷ್ಟ್ರ ಎಂದು ನಿಲ್ಲಿಸಿಯೇ ಬಿಟ್ಟರು.

    ಈ ವಿಡಿಯೋ ಅನ್ನು ಶೇರ್‌ ಮಾಡಿಕೊಂಡು ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕವು ’ಮುಖ್ಯಮಂತ್ರಿಯಾಗಿ ಮಮತಾ ಅವರು, ಬಂಗಾಳದ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ದೇಶವನ್ನು ಅವಮಾನಿಸಿದ್ದಾರೆ’ ಎಂದು ಹೇಳಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದ ಅಧ್ಯಕ್ಷ ಡಾ.ಸುಕಾಂತ ಮಜುಂದಾರ್, ಬಂಗಾಳ ಸಿಎಂ ಮಮತಾ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿದ್ದು, ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಅವರಿಗೆ ಸರಿಯಾದ ರಾಷ್ಟ್ರಗೀತೆ ಶಿಷ್ಟಾಚಾರ ತಿಳಿದಿಲ್ಲವೇ ಅಥವಾ ತಿಳಿದೂ ಅವಮಾನಿಸುತ್ತಿದ್ದಾರಾ ಎಂದು ಪ್ರಶ್ನಿಸಿದರೆ, ಮಹಾರಾಷ್ಟ್ರದ ಬಿಜೆಪಿ ನಾಯಕ ಪ್ರತೀಕ್ ಕರ್ಪೆ ಮಮತಾ ಕುಳಿತ ಭಂಗಿಯಲ್ಲಿ ರಾಷ್ಟ್ರಗೀತೆ ಆರಂಭಿಸಿದಾಗ ಅಲ್ಲಿದ್ದ ಬುದ್ಧಿಜೀವಿಗಳು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಜಾಲತಾಣದಲ್ಲಿ ಕೂಡ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಘಟನೆಯ ಬಗ್ಗೆ ಟಿಎಂಸಿಯ ಯಾವೊಬ್ಬ ನಾಯಕರೂ ಈವರೆಗೆ ಪ್ರತಿಕ್ರಿಯಿಸಿಲ್ಲ.

    ಇಲ್ಲಿದೆ ನೋಡಿ ಮಮತಾ ಬ್ಯಾನರ್ಜಿ ಅವರ ವೈರಲ್‌ ವಿಡಿಯೋ:

    ಮಹಿಳೆಯಾಗಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೆಬಲ್‌ ಇನ್ನು ಮುಂದೆ ಪುರುಷ: ಗೃಹ ಇಲಾಖೆಯಿಂದ ಅಪರೂಪದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts