More

    ‘ವರ್ಷದ ಆರು ತಿಂಗಳು ವಿದೇಶದಲ್ಲಿದ್ರೆ ಇಲ್ಲಿ ರಾಜಕಾರಣ ಹೇಗೆ ಮಾಡ್ತೀರಾ? ಇಂಥವರಿಗೆ ನಾವು ಸಹಾಯ ಮಾಡೋದಿಲ್ಲ’

    ಮುಂಬೈ: ಸಂಸದ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿಯೇ ಇದ್ದರೆ ರಾಜಕಾರಣ ಹೇಗೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ರಾಜಕಾರಣ ಮಾಡೋದಿದ್ರೆ ಭಾರತದಲ್ಲೇ ಇರಿ, ವಿದೇಶಕ್ಕೆ ಹೋಗುತ್ತಿದ್ದರೆ ಇಲ್ಲಿಯ ರಾಜಕಾರಣ ಮಾಡೋದು ಹೇಗೆ ಎಂದು ಕಿಡಿಕಾರಿದ್ದಾರೆ.

    ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪರ್ಯಾಯ ವ್ಯವಸ್ಥೆ ಬೇಕು. ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನವನ್ನು ದೀದೀ ವ್ಯಕ್ತಪಡಿಸಿದ್ದಾರೆ.
    ನಗರದಲ್ಲಿ ನಡೆದ ಪತ್ರಕರ್ತರು, ಕಲಾವಿದರು ಮತ್ತು ನಾಗರಿಕ ಸಂಘಟನೆಗಳ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

    ಮುಂದಿನ ದಿನಗಳಲ್ಲಿ ಸಂಯುಕ್ತ ಪ್ರಗತಿಶೀಲ ಮೈತ್ರಿಕೂಟ ಎನ್ನುವುದು ಇರುವುದಿಲ್ಲ. ಯುಪಿಎ ಎನ್ನುವುದು ಇತಿಹಾಸವಾಗಿದೆ. ಯುಪಿಎ ಎಂದರೇನು? ಅದು ಎಲ್ಲಿದೆ? ಎಂದ ದೀದಿ, ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದರು.

    ಮಮತಾ ಬ್ಯಾನರ್ಜಿ ಶಿವಸೇನೆಯ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿಯಲ್ಲಿರುವ ಕಾರಣ ಅವರ ಭೇಟಿ ಸಾಧ್ಯವಾಗಲಿಲ್ಲ.

    ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ನಂತರ ಈ ಬಗ್ಗೆ ಫೋಟೋಗಳ ಜತೆ ಅನಿಸಿಕೆ ಹಂಚಿಕೊಂಡು ಟ್ವೀಟ್ ಮಾಡಿರುವ ಶರದ್ ಪವಾರ್, ನನ್ನ ಮುಂಬೈ ನಿವಾಸದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದೆ. ನಮ್ಮ ಮೈತ್ರಿಯನ್ನು ಬಲಪಡಿಸಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಬದ್ಧತೆ ಪ್ರದರ್ಶಿಸಬೇಕು ಎಂಬ ಬಗ್ಗೆ ಇಬ್ಬರಲ್ಲೂ ಸಹಮತವಿತ್ತು ಎಂದು ಹೇಳಿದ್ದಾರೆ.

    ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಗರ್ಭಿಣಿ ಹೆಂಡತಿ ಸೇರಿದಂತೆ ಮೂವರ ಕೊಲೆ ಮಾಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts