More

    ಒಲಿಂಪಿಕ್​ ಕ್ರೀಡಾಪಟುಗಳಿಗೆ ಯೋಗಿ ಸರ್ಕಾರದಿಂದ ಬಂಪರ್​: ಕೋಟಿಕೋಟಿ ಮೊತ್ತದ ಬಹುಮಾನ ಘೋಷಣೆ

    ಲಖನೌ: ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಬಂಪರ್​ ಬಹುಮಾನ ಘೋಷಿಸಿದೆ. ಇದೇ 23 ರಿಂದ ಟೋಕಿಯೋದಲ್ಲಿ ಒಲಿಂಪಿಕ್ಸ್‌ ಶುರುವಾಗಲಿದೆ.

    ಒಲಿಂಪಿಕ್ಸ್​ ಕ್ರೀಡೆಯಲ್ಲಿ ಉತ್ತರ ಪ್ರದೇಶದಿಂದ ಭಾಗವಹಿಸುವ ಕ್ರೀಡಾಪಟುಗಳಿಗೆ ವಿವಿಧ ರೀತಿಯಲ್ಲಿ ಬಹುಮಾನಗಳನ್ನು ಸರ್ಕಾರ ಘೋಷಿಸಿದೆ.

    ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂಪಾಯಿ, ತಂಡದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂಪಾಯಿ, ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಸರ್ಕಾರ ಘೋಷಿಸಿದೆ.

    ಒಲಿಂಪಿಕ್ಸ್​ ಕ್ರೀಡೆಯು ಕಳೆದ ವರ್ಷ ನಡೆಯಬೇಕಿತ್ತು. ಆದರೆ ಕರೊನಾದಿಂದಾಗಿ ಅದನ್ನು ಮುಂದೂಡಲಾಗಿದ್ದು, ಇದೇ 23ರಿಂದ ಟೊಕಿಯೊದಲ್ಲಿ ನಡೆಯಲಿದೆ. ಇದು ಆಗಸ್ಟ್​ 8ರವರೆಗೆ ನಡೆಯಲಿದೆ. ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು 126 ಕ್ರೀಡಾಪಟುಗಳು ಪ್ರಯಾಣ ಬೆಳೆಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಬಾಕ್ಸಿಂಗ್ ಶ್ರೇಷ್ಠ ಮೇರಿ ಕೋಮ್ ಮತ್ತು ಭಾರತೀಯ ಪುರುಷರ ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ಅನಿಶ್ಚಿತ ಧ್ವಜ ಪಾಲ್ಗೊಳ್ಳಲಿದ್ದು, ಸಮಾರೋಪ ಸಮಾರಂಭದಲ್ಲಿ ಕುಸ್ತಿ ತಾರೆ ಭಜರಂಗ್ ಪುನಿಯಾ ಧ್ವಜ ಭಾಗವಹಿಸಲಿದ್ದಾರೆ.

    ಬ್ಯಾಂಕ್​ನಲ್ಲಿ ಉದ್ಯೋಗಕ್ಕೆ ಕಾಯುತ್ತಿರುವಿರಾ? ಐಬಿಪಿಎಸ್​ನಿಂದ 5,830 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ಗರಿಷ್ಠ ಎರಡು ಮಕ್ಕಳಿದ್ದರೆ ಮಾತ್ರ ಸೌಲಭ್ಯ: ರಾಜ್ಯದಲ್ಲೂ ನಿಯಮ- ಸಿಟಿ ರವಿ ಸಿಡಿಸಿದರು ಬಾಂಬ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts