More

    ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?

    ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?ನನ್ನ ಹೆಂಡತಿ ಮೂರು ವರ್ಷಗಳ ಹಿಂದೆ ಅವಳ ಪ್ರಿಯಕರನಿಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಸಿದ ಸಂದೇಶಗಳ ಮೂಲಕ ಅವಳಿಗೆ ಇರುವ ಅನೈತಿಕ ಸಂಬಂಧ ನನಗೆ ತಿಳಿದಿದೆ. ಆದರೆ ಅವಳು ನನಗೆ ಸಂಬಂಧಿ ಆದುದರಿಂದ ಈ ವಿಷಯವನ್ನು ಎತ್ತದೇ ಹಾಗೇ ಸುಮ್ಮನಿದ್ದೇನೆ. ಆಮೇಲೆ ನಮಗೆ ಎರಡು ಮಕ್ಕಳೂ ಆಗಿದ್ದಾರೆ. ಮೊದಲು ತನ್ನ ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೇಳುವ ಮನೋಭಾವ ಇತ್ತು. ಈಗ ತನ್ನ ತಪ್ಪೇ ಇಲ್ಲ. ನನಗೇ ಅನುಮಾನ ಜಾಸ್ತಿ ಎನ್ನುವಂತೆ ಆಡುತ್ತಿದ್ದಾಳೆ. ನನ್ನ ಹತ್ತಿರ ಯಾವ ಪುರಾವೆಯೂ ಇಲ್ಲ.

    ನನಗೆ ಈಗ ಜೀವನ ಜುಗುಪ್ಸೆ ಆಗಿದೆ. ಸಾಯಬೇಕು ಎನ್ನಿಸುತ್ತಿದೆ. ಈಗ ಅವಳ ಅನೈತಿಕ ಸಂಬಂಧವನ್ನು ಹೇಗೆ ಸಾಬೀತು ಪಡಿಸಿ ನಾನು ಅವಳಿಂದ ವಿಚ್ಛೇದನ ಪಡೆಯಬಹುದು ಎಂದು ತಿಳಿಸಿ.

    ಉತ್ತರ: ನಿಮ್ಮ ಹೆಂಡತಿಯ ಮೇಲೆ ಅನುಮಾನದ ಆಧಾರದ ಮೇಲೆ , ವಾಟ್ಸ್​ಆ್ಯಪ್‌ ಸಂದೇಶಗಳ ಮೇಲಿನ ಆಧಾರದಿಂದ ನೀವು ವಿಚ್ಛೇದನ ಪಡೆಯಲು ಆಗುವುದಿಲ್ಲ. ಬೇರೆ ವ್ಯಕ್ತಿಗಳ ಜತೆ ಪತಿಗೆ, ಅಥವಾ ಪತ್ನಿಗೆ ವಿವಾಹೇತರ ಸಂಬಂಧ ಇದ್ದು , ಅದರ ಬಗ್ಗೆ ಪುರಾವೆ ಇದ್ದರೆ ಅದು ಬೇರೆಯ ವಿಷಯ. ಆಗ ಆ ಅಂಶ ಕ್ರೂರತೆಯ ಅಂಶವಾಗಿ ವಿಚ್ಛೇದನ ಪಡೆಯಲು ಸಹಾಯಕಾರಿ ಆಗುತ್ತದೆ. ನಿಮ್ಮ ವಿಷಯದಲ್ಲಿ ನಿಮ್ಮ ಹತ್ತಿರ ಪುರಾವೆಯೂ ಇಲ್ಲ. ಅನೈತಿಕ ಸಂಬಂಧವನ್ನು ಸಾಬೀತು ಪಡಿಸುವುದು ಬಹಳ ಕಷ್ಟ. ಮೇಲಾಗಿ ನಿಮಗೆ ವಿಷಯ ತಿಳಿದ ಮೇಲೆ ಮತ್ತೆ ಮಕ್ಕಳೂ ಆಗಿದ್ದಾರೆ. ಕ್ರೂರತೆಯ ಅಂಶವನ್ನು ಒಂದು ಸಲ ಮನ್ನಿಸಿದ ಮೇಲೆ ಮತ್ತೆ ಮೇಲೆ ತೆಗೆಯುವಂತಿಲ್ಲ.

    ಆಗಿರುವುದನ್ನು ಮರೆತು ನೀವಿಬ್ಬರೂ ಯಾರಾದರೂ ವಿವಾಹ ಸಂಧಾನಕಾರರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಸಂಧಾನಕಾರರು ನಿಮ್ಮ ಪತ್ನಿಗೂ ಸೂಕ್ತ ಸಲಹೆ ಕೊಡುತ್ತಾರೆ. ಮುಂದಿನ ಜೀವನವನ್ನು ಚೆನ್ನಾಗಿ ನಡೆಸಿ. ಒಂದು ವೇಳೆ ವಿಚ್ಛೇದನ ಪಡೆದು ಮುಂದೆ ಯಾರನ್ನಾದರೂ ಮದುವೆ ಆದರೆ, ಆಕೆಯೂ ವಿಚ್ಛೇದಿತಳೇ ಆದರೆ, ಆಗ ಅಕೆ ಮತ್ತೊಬ್ಬ ವ್ಯಕ್ತಿಯ ಜೊತೆ ಇದ್ದವಳು ಎನ್ನುವುದನ್ನು ತಿಳಿದೂ ನೀವು ಮದುವೆ ಆಗುವುದಿಲ್ಲವೇ. ಹಾಗೇ ಈ ವಿಷಯದಲ್ಲೂ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ. ಈ ರೀತಿಯ ವಿಷಯಗಳಿಗೆ ಜುಗುಪ್ಸೆ ಪಟ್ಟುಕೊಂಡು ಸಾಯುವ ಬಗ್ಗೆ ಯೋಚಿಸುವುದು ಹುಚ್ಚುತನ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಆದಾಯ ಇಲ್ಲದಿದ್ರೂ, ಹೆಂಡ್ತಿದೇ ತಪ್ಪಿನಿಂದ ಡಿವೋರ್ಸ್​ ಕೊಟ್ರೂ ಜೀವನಾಂಶ ಕೊಡಲೇಬೇಕಾ?

    ತಾಯಿ, ಅಣ್ಣ ಸೇರಿ ಮೋಸದಿಂದ ಹೊಲ ಮಾರಿದ್ದಾರೆ- ಅಮ್ಮ ತೀರಿಕೊಂಡಿದ್ದಾರೆ: ನನ್ನ ಆಸ್ತಿ ಹೇಗೆ ಪಡೆಯಲಿ?

    ಪತ್ನಿಗೆ ಜೀವನಾಂಶ ನೀಡಬೇಕೆಂದು ಕೋರ್ಟ್‌ ಆದೇಶಿಸಿದ ಮೇಲೂ ದಂಪತಿ ಒಟ್ಟಿಗೇ ಇರಬಹುದು

    ಹುಡುಗನೊಬ್ಬ ನನಗಾಗಿ ಕಾಯ್ತಿದ್ದಾನೆ, ಪತಿಯಿಂದ ಡಿವೋರ್ಸ್‌ ಪಡೆದ ತಕ್ಷಣವೇ ಮದ್ವೆಯಾಗಬಹುದಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts