More

    ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ವಿಲ್​ ಮಾಡುವಾಗ ಇದು ತಿಳಿದಿರಲಿ…

    ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿ ವಿಲ್​ ಮಾಡುವಾಗ ಇದು ತಿಳಿದಿರಲಿ...

    ಪ್ರಶ್ನೆ: ನಾನೊಬ್ಬ ನಿವೃತ್ತ ರೈಲ್ವೇ ನೌಕರ. ನನಗೆ ತೊಂಬತ್ತು ವರ್ಷ ವಯಸ್ಸಾಗಿದೆ. ನನಗೆ ಐದು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆ ಆಗಿದೆ. ಒಬ್ಬ ಮಗಳು ವಿಧವೆ . ಅವಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಜೊತೆಯೇ ಇದ್ದಾಳೆ. ನನ್ನ ಎರಡನೆಯ ಮಗ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದು ನಮ್ಮ ಜೊತೆ ಇದ್ದಾನೆ.

    ನನಗೆ ಒಂದು 50-60 ಲಕ್ಷ ಬೆಲೆ ಬಾಳುವ ಮನೆ ಮತ್ತು ಸೈಟು ಇದೆ. ಇದು ನಮ್ಮ ತಂದೆ ತಾತ ಇವರುಗಳಿಂದ ಬಂದ ಸ್ವತ್ತು. ಅದನ್ನು ನವೀಕರಿಸಲು 8-9 ಲಕ್ಷ ನನ್ನ ಸ್ವಂತ ಹಣ ಖರ್ಚು ಮಾಡಿದ್ದೇನೆ. ಈಗ ಈ ಸ್ವತ್ತನ್ನು ಅರ್ಧ ನನ್ನ ಕಿರಿಯ ಮಗನಿಗೂ ಅರ್ಧ ನನ್ನ ವಿಧವೆ ಮಗಳಿಗೂ ವಿಲ್ ಮಾಡಬೇಕೆಂದಿದ್ದೇನೆ. ಹೀಗೆ ಮಾಡುವುದರಿಂದ ಮುಂದೆ ಅವರಿಗೆ ಕಾನೂನಿನ ತೊಡಕು ಬರುತ್ತದೆಯೇ ತಿಳಿಸಿ.

    ಉತ್ತರ: ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಮತ್ತು ಪ್ರತ್ಯೇಕ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡಬಹುದು. ವಿಲ್ ಮಾಡುವ ವ್ಯಕ್ತಿಗೆ 3-4 ಮಕ್ಕಳು ಇದ್ದು, ಕೆಲವರಿಗೆ ಮಾತ್ರ ವಿಲ್ ಮಾಡುವ ಸಂದರ್ಭದಲ್ಲಿ, ಯಾವ ಕಾರಣದಿಂದ ಕೆಲವರಿಗೆ ಮಾತ್ರ ವಿಲ್ ಮಾಡುತ್ತಿದ್ದೇವೆ ಏಕೆ ಬೇರೆ ಮಕ್ಕಳಿಗೆ ವಿಲ್ ಮಾಡಿಲ್ಲ ಎನ್ನುವುದನ್ನು ಬರೆಯಿಸಿದರೆ ಒಳ್ಳೆಯದು. ನಿಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೆ , ಅದರಲ್ಲಿ ನಿಮ್ಮ ಭಾಗವನ್ನು ಮಾತ್ರ ನೀವು ವಿಲ್ ಮಾಡಬಹುದು.

    ನೀವು ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ತೆಗೆದುಕೊಂಡು ವಕೀಲರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುವುದು ಒಳ್ಳೆಯದು. ನೀವು ತಿಳಿಸಿರುವ ಆಸ್ತಿ ನಿಮ್ಮ ಪ್ರತ್ಯೇಕ ಆಸ್ತಿ /ಸಪರೇಟ್ ಪ್ರಾಪರ್ಟಿ ಆದರೆ ನೀವು ವಿಲ್ ಮಾಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಆದರೆ ನಿಮ್ಮ ಭಾಗವನ್ನು ಮಾತ್ರ ವಿಲ್ ಮಾಡಬಹುದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು  [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ತಾತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ನನ್ನಮ್ಮನಿಗೆ ಪಾಲು ಸಿಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts