More

    ಅವಧಿಗೆ ಮುನ್ನವೇ ಅಂಗಡಿ ಖಾಲಿ ಮಾಡಿಸಿದರೆ ಇರುವ ದಾರಿಗಳಾವುವು?

    ಅವಧಿಗೆ ಮುನ್ನವೇ ಅಂಗಡಿ ಖಾಲಿ ಮಾಡಿಸಿದರೆ ಇರುವ ದಾರಿಗಳಾವುವು?ಪ್ರಶ್ನೆ: ನಾನು ಎಪ್ಪತ್ತು ವರ್ಷದ ವೃದ್ಧ. ನಾನು ನನ್ನ ಒಂದು ಅಂಗಡಿಯನ್ನು ಅಯುರ್ವೇದದ ಷಾಪ್ ನಡೆಸಲು ಕೊಟ್ಟಿದ್ದೆ. ಎರಡು ಬಾರಿ ಅಗ್ರಿಮೆಂಟ್ ಮುಂದುವರೆಯಿತು.

    ಎರಡನೇ ಬಾರಿ ಅವರು ಕೊಟ್ಟಿದ್ದ ಮುಂಗಡ ಹಣವನ್ನು ನನ್ನ ಆರೋಗ್ಯಕ್ಕೆ ಖರ್ಚು ಮಾಡಿಬಿಟ್ಟೆ. ಈಗ ಅವರು ಅವಧಿ ಮುಗಿಯುವ ಮುಂಚೆಯೇ ಅಂಗಡಿ ಖಾಲಿ ಮಾಡಿ ಮುಂಗಡ ಹಣ ಕೊಡು ಎಂದು ಬೆದರಿಸುತ್ತಿದ್ದಾರೆ.

    ರಿಜಿಸ್ಟರ್ ಪತ್ರದ ಮೂಲಕ ನೋಟಿಸು ಕೊಟ್ಟು ಖಾಲಿ ಮಾಡುವ ಇಂಗಿತ ತಿಳಿಸಿದ್ದಾರೆ. ಯಾವಾಗ ಮಾಡುತ್ತಾರೆ ಎಂದು ತಿಳಿಸಿಲ್ಲ. ಅವರು ಅವಧಿಯವರೆಗೂ ಅಂಗಡಿಯಲ್ಲಿ ಮುಂದುವರೆಸಲು ನಾನು ಏನು ಮಾಡಬೇಕು?

    ಉತ್ತರ: ನಿಮ್ಮ ಮತ್ತು ಬಾಡಿಗೆದಾರರ ಮಧ್ಯೆ ಅಂಗಡಿ ಖಾಲಿ ಮಾಡುವ ಬಗ್ಗೆ ಯಾವ ಒಪ್ಪಿಗೆ ಆಗಿದೆ ಎನ್ನುವುದನ್ನು ಅಗ್ರಿಮೆಂಟ್ ನೋಡಿದಾಗಲೇ ಎಲ್ಲ ವಿಷಯ ಸರಿಯಾಗಿ ತಿಳಿಯುವುದು.

    ನಿಮಗೆ ಈಗ ಎರಡು ಆಯ್ಕೆ ಇವೆ. ಯಾವುದಾದರೂ ವಕೀಲರ ಮೂಲಕ ಅವರ ನೋಟಿಸಿಗೆ ಪ್ರತ್ಯುತ್ತರ ಕಳಿಸಿ ಅಥವಾ ನಿಮ್ಮ ತಾಲ್ಲೂಕಿನ ಉಚಿತ ಕಾನೂನು ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ, ನಿಮ್ಮ ಮತ್ತು ಬಾಡಿಗೆದಾರರ ಮಧ್ಯೆ ವ್ಯಾಜ್ಯ ಪೂರ್ವ ಸಂಧಾನ ಮಾಡಬೇಕೆಂದು ಮನವಿ ಕೊಡಿ.

    ಅಲ್ಲಿ ನುರಿತ ಸಂಧಾನಕಾರರು ಇಬ್ಬರನ್ನೂ ಕರೆಯಿಸಿ ಒಂದು ಒಪ್ಪಂದಕ್ಕೆ ಬರುವಂತೆ ಮಾಡುತ್ತಾರೆ. ಕೋರ್ಟು ಕಚೇರಿ ಎಂದು ಅಲೆದಾಡಿ ಖರ್ಚುಮಾಡಿ ಶ್ರಮ ತೆಗೆದುಕೊಳ್ಳುವ ಬದಲು ಇದು ಒಳ್ಳೆಯ ದಾರಿ. ನೀವು ಯಾವುದಕ್ಕೂ ಹೆದರ ಬೇಕಾಗಿಲ್ಲ. ಬಾಡಿಗೆದಾರರು ಗಲಾಟೆಗೆ ಬಂದರೆ ಪೊಲೀಸರ ಬಳಿ ಹೋಗಿ ಕಂಪ್ಲೇಂಟ್ ಕೊಡಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಜೀವನಾಂಶದ ಆದೇಶ ಆದ ಮೇಲೆ ದಂಪತಿ ಒಟ್ಟಾಗಿ ಇರಬಾರದೇ?

    ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ, ಗಂಡನ ಕೊಲೆ ಮಾಡಿರುವ ಶಂಕೆಯಿದ್ದರೂ ಈ ಕೇಸ್​ನಲ್ಲಿ ಆಸ್ತಿ ಸಿಗುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts