More

    ವಿಚ್ಛೇದನದ ಹೊರತಾಗಿ ದಾಂಪತ್ಯ ಜೀವನ ಸರಿಮಾಡಲು ಏನಾದರೂ ಮಾರ್ಗಗಳಿವೆಯೆ?

    ವಿಚ್ಛೇದನದ ಹೊರತಾಗಿ ದಾಂಪತ್ಯ ಜೀವನ ಸರಿಮಾಡಲು ಏನಾದರೂ ಮಾರ್ಗಗಳಿವೆಯೆ?

    ಪ್ರಶ್ನೆ: ನಾನು ಒಬ್ಬ ನಿವೃತ್ತ ತಂದೆ. ನನ್ನ ಮಗಳನ್ನು ಇಂಜಿನಿಯರ್‍ಗೆ ಮದುವೆ ಮಾಡಿಕೊಟ್ಟಿದ್ದೇನೆ. ಅವರಿಗೆ ಒಬ್ಬ ನಾಲ್ಕೂವರೆ ವರ್ಷದ ಮಗ ಇದ್ದಾನೆ. ಅಳಿಯನಿಗೆ ಕೈತುಂಬಾ ಸಂಬಳ ಇದೆ. ಈಗ ನನ್ನ ಅಳಿಯ ನನ್ನ ಮಗಳನ್ನು ಪೂರ್ತಿ ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಯಾವಾಗಲೂ ಅವಳನ್ನು ಸೋಮಾರಿ ಎಂದು ಮೂದಲಿಸುವುದು ಕೈ ಮಾಡುವುದು ಬಯ್ಯುವುದು ಮಾಡುತ್ತಾನೆ. ತನ್ನ ಕಛೇರಿಯ ಹೆಣ್ಣು ಮಕ್ಕಳೊಂದಿಗೆ ಕಾರಿನಲ್ಲಿ ಸುತ್ತಾಡಿ ಮಜಾ ಮಾಡುತ್ತಾನೆ. ಸಾಲದ ಕಂತು , ಮನೆ ಖರ್ಚು ಕಾರಿನ ಕಂತಿಗೆ ಹೆಂಡತಿಯನ್ನು ಪೀಡಿಸುತ್ತಾನೆ. ಅವನ ತಂದೆ ತಾಯಿಯರು ಮಗನಿಗೇ ಪ್ರೋತ್ಸಾಹ ಮಾಡುತ್ತಾರೆ. ನನ್ನ ಮಗಳು ಇಷ್ಟು ವರ್ಷ ಎಲ್ಲವನ್ನೂ ಮುಚ್ಚಿಟ್ಟಿದ್ದಳು. ಈಗ ವಿಷಯ ತಿಳಿಸಿದ ಮೇಲೆ ನನಗೆ ಆಘಾತವಾಗಿದೆ ಅವಳು ತನ್ನ ಗಂಡನೊಂದಿಗೆ ನೆಮ್ಮದಿಯ ಜೀವನ ಮಾಡಲು ಏನು ಮಾಡಬೇಕು ಎಂದು ತಿಳಿಸಿ ಸಹಾಯ ಮಾಡಿ.

    ಉತ್ತರ: ತಂದೆಯಾದ ನಿಮ್ಮ ಕಾಳಜಿ ಅರ್ಥವಾಗುತ್ತದೆ. ನೀವು ನಿಮ್ಮ ಮಗಳ ಮೂಲಕ ನಿಮ್ಮ ಊರಿನ ತಾಲ್ಲೂಕು ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರಕ್ಕೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಒಂದು ಅರ್ಜಿ ಕೊಡಿಸಿ. ಆ ಅರ್ಜಿಯಲ್ಲಿ ಪತಿಯ ಬಗ್ಗೆ ನಿಮ್ಮ ಮಗಳು ಯಾವುದೇ ಆಪಾದನೆಯನ್ನೂ ಮಾಡದೇ , “ದಂಪತಿಗಳ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಮಧ್ಯಸ್ಥಿಕೆಗೆ ಏರ್ಪಾಟು ಮಾಡಲು ಕೇಳಿಕೊಳ್ಳಲಿ. ಆಗ ಮಧ್ಯಸ್ಥಿಕೆ ಕೇಂದ್ರದವರು ನಿಮ್ಮ ಅಳಿಯನನ್ನು ಕರೆಯಿಸುತ್ತಾರೆ. ಮಧ್ಯಸ್ಥಿಕೆಗಾರರ ಸಮ್ಮುಖದಲ್ಲಿ ಇಬ್ಬರನ್ನೂ ಕೂರಿಸಿ ಮಾತಾಡಿಸಿದಾಗ ಸಮಸ್ಯೆ ಬಗೆಹರಿಯಬಹುದು.

    ಅಥವಾ ನೀವೇ ಯಾರಾದರೂ ನಿಮ್ಮ ಅಳಿಯನನ್ನು ಒಪ್ಪಿಸಿ, ದಂಪತಿಗಳು ಇಬ್ಬರೂ ವಿವಾಹ ಸಂಧಾನಕಾರರ /ಮ್ಯಾರೇಜ್ ಕೌನ್ಸೆಲರ್ ಹತ್ತಿರ ಹೋಗುವಂತೆ ಮಾಡಿ. ಆಗ ಅವರಿಬ್ಬರ ಮಧ್ಯೆ ಇರುವ ನಿಜವಾದ ಸಮಸ್ಯೆಯನ್ನು ಕಂಡುಹಿಡಿದು ನೆಮ್ಮದಿಯ ಜೀವನ ನಡೆಸಲು ಏನು ಮಾಡಬೇಕಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ.

    ಮೊದಲಿಗೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದರಿಂದ ಮನಸ್ಸು ಮುರಿಯುವ ಸಂದರ್ಭಗಳು ಹೆಚ್ಚಾಗಬಹುದು. ಬದಲಿಗೆ ಈ ಮೇಲಿನ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ 6 ತಿಂಗಳು ಕಾಯುವಿಕೆ ಅನಿವಾರ್ಯವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts