More

    ಅಧ್ಯಯನದಿಂದ ಸಾಬೀತಾಯ್ತು ಗಂಗೆಯ ಪಾವಿತ್ರ್ಯತೆ: ಹೆಣಗಳ ರಾಶಿಯ ನಡುವೆಯೂ ಕರೊನಾ ಕುರುಹಿಲ್ಲ!

    ನವದೆಹಲಿ: ಗಂಗಾ ನದಿಯ ಪಾವಿತ್ರ್ಯದ ಮುಂದೆ ಎಲ್ಲವೂ ನಗಣ್ಯ, ಲಕ್ಷಾಂತರ ಹೆಣಗಳು ತೇಲಿಬಂದರೂ ಗಂಗೆಯ ನದಿಯ ನೀರಲ್ಲಿ ವಿಷ ಮಿಶ್ರಣವಾಗಲ್ಲ ಆದ್ದರಿಂದಲೇ ಗಂಗಾ ಸ್ನಾನ ತುಂಗಾ ಪಾನ ಎನ್ನುವುದು ತಲೆತಲಾಂತರಗಳಿಂದ ಪ್ರಚಲಿತವಾಗಿ ಬಂದಿರುವ ಮಾತು. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಗಂಗಾನದಿಗೆ ಅಷ್ಟು ಮಹತ್ವ ನೀಡಲಾಗಿದೆ.

    ಇದೀಗ ಗಂಗೆ ತಮ್ಮ ಪಾವಿತ್ರ್ಯವನ್ನು ಮತ್ತೊಮ್ಮೆ ಸಾಬೀತುಮಾಡಿದ್ದಾಳೆ. ಇತ್ತೀಚೆಗೆ ಕರೊನಾ ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲಿಬಂದು ಬಹಳ ಸುದ್ದಿ ಮಾಡಿತ್ತು. ಇದು ರಾಜಕೀಯ ತಿರುವನ್ನೂ ಪಡೆದುಕೊಂಡು ಒಬ್ಬರ ಮೇಲೆ ಒಬ್ಬರು ಗೂಬೆ ಕುರಿಸುವ ಕಾರ್ಯವೂ ನಡೆದಿತ್ತು. ಅದೇ ಇನ್ನೊಂದೆಡೆ ಸೋಂಕಿತರಿಂದಾಗಿ ಗಂಗಾನದಿ ಕಲುಷಿತಗೊಂಡು ವಿಷಕಾರಿಯಾಗುವ ಸಾಧ್ಯತೆ ಇದೆ ಎಂದೇ ಒಂದು ವರ್ಗ ಬಣ್ಣಿಸುತ್ತಿತ್ತು.

    ಇದೀಗ ಅವರ ಮಾತನ್ನು ಸುಳ್ಳು ಮಾಡಿದೆ ಅಧ್ಯಯನ ವರದಿ. ಕೋವಿಡ್‌ ಸೋಂಕಿತರ ಶವಗಳನ್ನೆಲ್ಲಾ ಹೊರತೆಗೆದ ಬಳಿಕ ನದಿಯ ನೀರನ್ನು ನಾನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದರಲ್ಲಿ ಸೋಂಕಿನ ಲವಲೇಶದ ಗುರುತೂ ಇಲ್ಲ ಎಂದು ಪ್ರಯೋಗಾಲಯದಿಂದ ಸಾಬೀತಾಗಿದೆ.

    ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್​​ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ (ಐಐಟಿಆರ್), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಜಲ ಶಕ್ತಿ ಸಚಿವಾಲಯದ ಅಧೀನದಲ್ಲಿರುವ ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಈ ಅಧ್ಯಯನ ನಡೆಸಿದ್ದು, ಗಂಗೆಯ ಶುದ್ಧತೆಯ ಬಗ್ಗೆ ಪರಿಚಯ ಮಾಡಿದೆ.

    ಈ ಶವಗಳು ಎಲ್ಲಿಂದ ತೇಲಿಬಂದಿದ್ದವು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ಗಂಗಾ ನದಿ ಹರಿಯುವ ಅಲಹಾಬಾದ್, ವಾರಣಾಸಿ, ಕನೌಜ್​, ಉನ್ನಾವೊ, ಬಲಿಯಾ, ಬಕ್ಸಾರ್, ಗಾಜಿಪುರ, ಕಾನ್ಪುರ, ಹಮೀರ್‌ಪುರ, ಪಾಟ್ನಾಗಳಿಂದ ಮಾದರಿ ಸಂಗ್ರಹಿಸಲಾಗಿತ್ತು. ಎರಡು ಹಂತಗಳಲ್ಲಿ ಅಧ್ಯಯನವನ್ನು ನಡೆಸಲಾಗಿದ್ದು ಸಾರ್ಸ್​​ ಕೋವಿ-2ನ ಕುರುಹು ಇದರಲ್ಲಿ ಅಲ್ಪವೂ ಕಂಡುಬಂದಿಲ್ಲ ಎಂಬ ವರದಿ ಬಂದಿದೆ.

    VIDEO: ಬಂದೂಕು ತೋರಿಸಿ ಮನೆಯಲ್ಲಿ ದರೋಡೆ: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ಕೃತ್ಯ!

    ಸುಮಲತಾ v/s ಎಚ್‌ಡಿಕೆ: ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಜಾಲತಾಣದಲ್ಲಿ ಟ್ರೋಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts