More

    ಏಕಕಾಲದಲ್ಲಿ 2 ಸರ್ಕಾರಿ ಕೆಲ್ಸ ಪಡೆದ ವಾಚ್​ಮನ್: ಕೇವಲ 9000 ಪಡೆಯುತ್ತಿದ್ದವನ ಸದ್ಯದ ಸಂಬಳ ಇಷ್ಟೊಂದಾ!

    ಹೈದರಾಬಾದ್​: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಮತ್ತು ಯಾವುದೇ ನ್ಯೂನತೆಯೂ ಕೂಡ ಅಡ್ಡಿಯಾಗುವುದಿಲ್ಲ ಎಂಬ ಮಾತಿಗೆ ತೆಲಂಗಾಣದ ಗೊಲ್ಲೆ ಪ್ರವೀಣ್​ ಕುಮಾರ್​ ಎಂಬುವರು ತಾಜಾ ಉದಾಹರಣೆಯಾಗಿದ್ದಾರೆ. ನೈಟ್​ ವಾಚ್​ಮನ್​ ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಕೇವಲ 10 ದಿನಗಳ ಅಂತರದಲ್ಲಿ ಎರಡು ಸರ್ಕಾರಿ ಕೆಲಸ ಗಿಟ್ಟಿಸುವ ಮೂಲಕ ಪ್ರವೀಣ್​ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.

    ಪ್ರವೀಣ್​ ಕುಮಾರ್​ಗೆ 31 ವರ್ಷ. ಹೈದರಾಬಾದ್​ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ರಾತ್ರಿ ಪಾಳಿಯ ವಾಚ್​ಮನ್​ ಆಗಿ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೇ ಸರ್ಕಾರಿ ಸಂಸ್ಥೆಯಲ್ಲಿ ಪ್ರಾಧ್ಯಪಕ ವೃತ್ತಿಯನ್ನು ಆರಂಭಿಸಲಿದ್ದು, ಅವರ ಪರಿಶ್ರಮ ಇಂದು ಅವರ ಬದುಕನ್ನೇ ಬದಲಿಸಿದೆ. ಅಂದಹಾಗೆ ಪ್ರವೀಣ್​ ಅವರು ವಾಣಿಜ್ಯ ಶಾಸ್ತ್ರದಲ್ಲಿ ಜೂನಿಯರ್ ಲೆಕ್ಚರರ್ ಹಾಗೂ ಪಿಜಿ ಟೀಚರ್ ಮತ್ತು ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಸಾಮಾಜಿಕ ಅಧ್ಯಯನ) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

    ವಾಣಿಜ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರವೀಣ್​​, ಒಸ್ಮಾನಿಯಾ ಯೂನಿವರ್ಸಿಟಿಯ ಎಜುಕೇಷನಲ್​ ಮಲ್ಟಿಮೀಡಿಯಾ ರೀಸರ್ಚ್​ ಸೆಂಟರ್​ನಲ್ಲಿ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ಕೇವಲ 9 ಸಾವಿರ ಸಂಬಳ ಪಡೆಯುತ್ತಿದ್ದ ಪ್ರವೀಣ್​, ಇದೀಗ ಹೊಸ ಉದ್ಯೋಗಿದಿಂದ 73 ಸಾವಿರದಿಂದ 83 ಸಾವಿರ ರೂ.ವರೆಗೂ ಸಂಪಾದಿಸಲಿದ್ದಾರೆ.

    ಕೇವಲ 10 ದಿನಗಳಲ್ಲಿ 2 ಸರ್ಕಾರಿ ಕೆಲಸ ಪಡೆದ ಪ್ರವೀಣ್​ ಅವರ ಕತೆ ಇಲ್ಲಿಗೆ ಮುಗಿದಿಲ್ಲ ಏಕೆಂದರೆ, ಮೂರನೇ ಸರ್ಕಾರಿ ಕೆಲಸವೂ ಸಹ ಸಮೀಪದಲ್ಲಿದೆ. ಮತ್ತೊಂದು ಪರೀಕ್ಷೆಯನ್ನು ಬರೆದಿದ್ದು, ಶೀಘ್ರದಲ್ಲೇ ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯಲ್ಲೂ ಖಂಡಿತ ಪಾಸ್​ ಆಗೇ ಆಗುತ್ತೇನೆ ಎಂಬ ವಿಶ್ವಾಸವನ್ನು ಪ್ರವೀಣ್​ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ ಪ್ರವೀಣ್​ ಅವರು ತೆಲಂಗಾಣದ ಮಚೇರಿಯಲ್​ ಜಿಲ್ಲೆಯ ಸಣ್ಣ ಗ್ರಾಮವೊಂದರ ಪ್ರತಿಭಾವಂತ. ಅವರ ತಂಡ ಮೇಸ್ತ್ರಿಯಾಗಿ ಮತ್ತು ತಾಯಿ ಬೀಡಿ ಸುತ್ತವ ಕೆಲಸ ಮಾಡುತ್ತಾರೆ. ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಸ್ನಾತಕೋತ್ತರ ಪದವಿ ಪಡೆದ ಪ್ರವೀಣ್​ 2018ರಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. 2018ರಲ್ಲಿ ಡಿಎಸ್​​ಸಿ ಉದ್ಯೋಗವನ್ನು ಕೇಲವ ಅರ್ಧ ಅಂಕದಲ್ಲಿ ಕಳೆದುಕೊಂಡಿದ್ದರು. ಆದರೂ ತಮ್ಮ ಛಲವನ್ನು ಬಿಡದ ಪ್ರವೀಣ್​ ಇಂದು ಯಶಸ್ಸನ್ನು ಸಾಧಿಸಿದ್ದಾರೆ.

    ವಾಚ್​ಮನ್​ ಆಗಿ ಕೆಲಸ ಮಾಡಿಕೊಂಡೆ ತಯಾರಿ
    ಕಳೆದ ಐದು ವರ್ಷಗಳಿಂದ ಪ್ರವೀಣ್​ ವಾಚ್​ಮನ್​ ಕೆಲಸ ಮಾಡುತ್ತಿದ್ದರು. ಹಣದ ಜೊತೆಗೆ ಓದಲು ಸಾಕಷ್ಟು ಸಮಯ ಸಿಗುತ್ತದೆ ಎಂಬ ಉದ್ದೇಶದಿಂದಲೇ ಪ್ರವೀಣ್​ ವಾಚ್​ಮನ್​ ಕೆಲಸವನ್ನು ಆಯ್ಕೆ ಮಾಡಿಕೊಂಡರು. ನನ್ನ ಕೆಲಸದ ಅವಧಿಯಲ್ಲಿ ನಾನು ಬೀದಿ ದೀಪಗಳ ಕೆಳಗೆ ಓದುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದೆ ಎಂದು ಪ್ರವೀಣ್​ ಹೇಳಿದ್ದಾರೆ.

    ಪ್ರವೀಣ್​ ಅವರ ಈ ಸಾಧನೆಯನ್ನು ಒಸ್ಮಾನಿಯಾ ವಿಶ್ವವಿದ್ಯಾಲಯದ ಇಎಂಆರ್​ಸಿ ವಿಭಾಗದ ಅಧಿಕಾರಿಗಳು ಮೆಚ್ಚಿಕೊಂಡಿದ್ದಾರೆ. ಏಕಕಾಲದಲ್ಲಿ ಎರಡು ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಕ್ಕಾಗಿ ಪ್ರವೀಣ್​ ಅವರನ್ನು ಅಭಿನಂದಿಸಿದ್ದಾರೆ. ಪ್ರವೀಣ್​ ಅವರ ಈ ಸಾಧನೆ ಇತರರಿಗೆ ಮಾದರಿ ಎಂದು ಹೊಗಳಿದ್ದಾರೆ. (ಏಜೆನ್ಸೀಸ್​)

    ಖ್ಯಾತ ನಟಿಗೆ ದುಬೈನಲ್ಲಿ 50 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ರಾ ಉದಯನಿಧಿ?! ಸಂಚಲನ ಸೃಷ್ಟಿಸಿದ ಹೇಳಿಕೆ

    ಡಿಂಪಲ್​ ಹಯಾತಿ ಮನೆಯಲ್ಲಿ ವೈನ್​ ಬಾಟಲ್​ ಇಟ್ಟು ವಿಶೇಷ ಪೂಜೆ! ಜ್ಯೋತಿಷಿ ವೇಣುಸ್ವಾಮಿ ಹೇಳಿಕೆಗೆ ಆಕ್ರೋಶ

    ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಕುಣಿದು ಕುಪ್ಪಳಿಸಿದ ಸೆಲೆಬ್ರಿಟಿಗಳಿಗೆ ಟಾಂಗ್​ ಕೊಟ್ರಾ ಕಂಗನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts