More

    ಪಾಕಿಸ್ತಾನದ ಕೊನೆಯ ಆಸೆಯೂ ಠುಸ್‌: ಸಾಲ ಕೊಡಲು ಸಾಧ್ಯವೇ ಇಲ್ಲ ಎಂದ ಐಎಂಎಫ್‌

    ಕರಾಚಿ: ಇದಾಗಲೇ ಹಲವಾರು ರಾಷ್ಟ್ರಗಳಿಂದ ವಿರೋಧ ಕಟ್ಟಿಕೊಂಡಿರುವ ಪಾಕಿಸ್ತಾನಕ್ಕೆ ಇದೀಗ ಭಾರಿ ತಲೆನೋವು ಶುರುವಾಗಿದೆ. ಕರೊನಾದಿಂದಾಗಿ ಸಂಪೂರ್ಣ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಈಗ ಮತ್ತೊಮ್ಮೆ ಮರ್ಮಾಘಾತ ಉಂಟಾಗಿದೆ. ಅದೇನೆಂದರೆ ಸಾಲ ನೀಡಬಹುದಾದ ಕೊನೆಯ ಒಂದು ಆಶಾಕಿರಣವಾಗಿರುವ ನ್ಯಾಷನಲ್ ಮಾನಿಟರಿ ಫಂಡ್ (ರಾಷ್ಟ್ರೀಯ ಹಣಕಾಸು ಸಂಸ್ಥೆ- ಐಎಂಎಫ್‌) ಸಾಲವನ್ನು ನೀಡಲು ನಿರಾಕರಿಸಿದೆ.

    ಆರ್ಥಿಕವಾಗಿ ಚೇತರಿಸಿಕೊಳ್ಳಲು ತನಗೆ 6 ಬಿಲಿಯನ್ ಡಾಲರ್ ಅವಶ್ಯಕತೆ ಇದೆ ಎಂದು ಪಾಕಿಸ್ತಾನ ಕೋರಿತ್ತು. ಕೊನೆಯ ಪಕ್ಷ ಮೊದಲ ಕಂತಿನಲ್ಲಿ ಒಂದು ಬಿಲಿಯನ್‌ ಡಾಲರ್‌ ನೀಡಿ ಎಂದು ಹೇಳಿತ್ತು. ಆದರೆ ಇದ್ಯಾವುದೂ ಸಾಧ್ಯವೇ ಇಲ್ಲ ಎಂದಿದೆ ಪಾಕಿಸ್ತಾನ.

    ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಐಎಂಎಫ್ ಮತ್ತು ಪಾಕಿಸ್ತಾನದ ಹಣಕಾಸು ಸಚಿವರ ಮಾತುಕತೆ ವಿಫಲವಾಗಿದೆ. ಅಮೆರಿಕದಲ್ಲಿ ಪಾಕಿಸ್ತಾನ ಹಣಕಾಸು ಸಚಿವ ಶೌಕತ್ ತರೀಕ್ ಅವರ ತಂಡ ಮತ್ತು ಐಎಂಎಫ್ ನಡುವೆ 11 ದಿನಗಳಿಂದ ಮಾತುಕತೆ ನಡೆದಿತ್ತು. ಆದರೆ ಮಾತುಕತೆ ಯಾವುದೇ ಫಲಪ್ರದ ನೀಡಿಲ್ಲ ಎಂದು ದಿ ಎಕ್ಸಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಚಕಾರ ಎತ್ತಲಿಲ್ಲ.

    ಇದರಿಂದ ಪಾಕ್ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿಲ್ಲ. ಇಂತಹ ಪಾಕಿಸ್ತಾನ ಆರ್ಥಿಕ ವ್ಯವಸ್ಥೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಸಾಲಕ್ಕೆ ಸೌದಿ ಅರೇಬಿಯಾದ ನಂತರ ಚೀನಾ ಕೂಡ ಸಾಲಕ್ಕೆ ಖಾತರಿ ನೀಡುತ್ತಿಲ್ಲ ಎಂದು ಐಎಂಎಫ್ ಹೇಳಿಕೆ ಬಿಡುಗಡೆ ಮಾಡಿದೆ.

    ಚಿತ್ರದುರ್ಗದ ನಾಲ್ವರ ಸಾವಿಗೆ ಭಯಾನಕ ಟ್ವಿಸ್ಟ್‌: ಅಪ್ಪ, ಅಮ್ಮ, ಅಜ್ಜಿ, ತಂಗಿಯನ್ನು ಕೊಂದ ಬಾಲಕಿ!

    ಕೆಆರ್‌ಎಸ್‌ನಲ್ಲಿ ಸೆಲ್ಫೀ ತೆಗೆಯಲು ಹೋಗಿ ನದಿಗೆ ಬಿದ್ದ ಪತ್ನಿ- ಆಕೆಯ ರಕ್ಷಿಸಲು ಹಾರಿದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts