More

    ನೆಹರು ಕಣ್ಣಲ್ಲಿ ನೀರು ತರಿಸಿದ್ದ ಲತಾ ಮಂಗೇಶ್ಕರ್‌: ‘ನೀವು ನನ್ನನ್ನು ಈ ಪರಿ ಅಳಿಸಿಬಿಟ್ರಿ’ ಎಂದಿದ್ದ ಪ್ರಧಾನಿ!

    ಮುಂಬೈ: ತಮ್ಮ 90ನೇ ವಯಸ್ಸಿನಲ್ಲಿಯೂ ಕಂಚಿನ ಕಂಠದಿಂದ ಹಾಡುತ್ತಾ ಕೇಳುಗರನ್ನು ಆನಂದದಲ್ಲಿ ತೇಲಿಸುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್‌ ಗಾನಲೋಕದಲ್ಲಿ ಲೀನರಾಗಿದ್ದಾರೆ. ವಿವಿಧ ಭಾಷೆಗಳಲ್ಲಿ ಅವರು ಹಾಡಿರುವ ಗಾಯನ ಮಾತ್ರ ಸದಾ ಹಚ್ಚಹಸಿರು. ಅದರಲ್ಲಿಯೂ ಅವರು ಹಾಡಿದ ಕೆಲವು ಹಾಡುಗಳಂತೂ ಜನಮಾನಸದಿಂದ ಅಳಿಸಲು ಸಾಧ್ಯವೇ ಇಲ್ಲ.

    ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ … ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ. ಅಮೆರಿಕ, ಯೂರೊಪ್ ಸುತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

    ಅಂಥ ಒಂದು ಹಾಡುಗಳಲ್ಲಿ ಒಂದು “ಯೇ ಮೇರೆ ವತನ್ ಕೇ ಲೋಗೋ, ಜರಾ ಆಂಖ್ ಮೇ ಭರಲೋ ಪಾನಿ’ ಎನ್ನುವ ಹಾಡು. 1962ರಲ್ಲಿ ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಯೋಧರು ಹುತಾತ್ಮರಾಗಿದ್ದರು. ಇವರ ನೆನಪಿನಲ್ಲಿ ಅವರಿಗಾಗಿಯೇ ಕವಿ ಪ್ರದೀಪ್ ಈ ಹಾಡನ್ನು ರಚಿಸಿದ್ದರು. ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು 1963ರ ಜನವರಿ 27 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು.

    ಆಗ ಅಲ್ಲಿ ನೆರೆದಿದ್ದವರ ಕಣ್ಣು ತುಂಬಿಬಂದಿತ್ತು. ಕಾರ್ಯಕ್ರಮದಲ್ಲಿ ಇದ್ದ ಅಂದಿನ ಜವಾಹರಲಾಲ್ ನೆಹರೂ ಅವರು ಕೂಡ ಈ ಹಾಡನ್ನು ಕೇಳಿ ಗಳಗಳನೆ ಅತ್ತುಬಿಟ್ಟಿದ್ದರು. ಕಾರ್ಯಕ್ರಮದ ನಂತರ ಮಾತಾಡಿದ ಅವರು “ನೀವು ನನ್ನನ್ನು ಈ ಪರಿ ಅಳಿಸಿಬಿಟ್ಟಿರಿ’ ಎಂದು ಮತ್ತೆ ಭಾವುಕರಾಗಿ ನುಡಿದಿದ್ದರು. ಅಂಥ ಒಬ್ಬ ಅದ್ಭುತ ಕಲಾವಿದೆ ಲತಾ.

    ಹೇಮಾ ಮಂಗೇಶ್ಕರ್‌ ಲತಾ ಆಗಿದ್ದು ಹೇಗೆ? ಬಲು ತುಂಟಿಯಾಗಿದ್ದ ಬಾಲಕಿ ಶಾಲೆ ಮೆಟ್ಟಿಲೇರಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು!

    BREAKING: ಸಂಗೀತ ಲೋಕದಲ್ಲಿ ಲೀನರಾದ ಗಾನಕೋಗಿಲೆ ಲತಾ ಮಂಗೇಶ್ಕರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts