More

    ಜಗನ್ನಾಥನ ದರುಶನಕೆ ಬೇಕು ನೆಗೆಟಿವ್​ ರಿಪೋರ್ಟ್​- ಇಲ್ಲದಿದ್ದರೆ ನೋ ಎಂಟ್ರಿ

    ಪುರಿ (ಒಡಿಶಾ): ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಸ್ವಾಮಿಯ ದೇವಾಲಯಕ್ಕೆ ಕರೊನಾ ಬಿಕ್ಕಟ್ಟಿನ ನಡುವೆಯೇ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಡಿಶಾದ ಪುರಿಯಲ್ಲಿ ಇರುವ ಈ ದೇವಾಲಯಕ್ಕೆ ತನ್ನದೇ ಆದ ಐತಿಹ್ಯವಿದ್ದು, ದೇಶ- ವಿದೇಶಗಳಿಂದ ಜನರು ಆಗಮಿಸುತ್ತಾರೆ.

    ಈಗಲೂ ಭಕ್ತರು ದರ್ಶನ ಮಾಡಬಹುದು. ಆದರೆ ಒಂದೇ ಒಂದು ಷರತ್ತು ಎಂದರೆ, ದೇವರ ದರ್ಶನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು. ಇದನ್ನು ದೇವಾಲಯ ಪ್ರವೇಶಕ್ಕೂ ಮುನ್ನ ತೋರಿಸಬೇಕಾಗಿದೆ.

    ಒಂದು ವೇಳೆ ಇದನ್ನು ತರದೇ ಹೋದರೆ ದೇವಾಲಯದಲ್ಲಿ ಪ್ರವೇಶವಿಲ್ಲ. ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ವರ್ಷದ ದಿನ ಮೊದಲ ಎರಡು ದಿನ ದೇವಾಲಯವನ್ನು ಮುಚ್ಚಲಾಗಿತ್ತು. ಆದರೆ ಇಂದಿನಿಂದ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ರಾಜ್ಯದ ಇತರ ಭಾಗಗಳ ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

    ಜಗನ್ನಾಥನ ದರುಶನಕೆ ಬೇಕು ನೆಗೆಟಿವ್​ ರಿಪೋರ್ಟ್​- ಇಲ್ಲದಿದ್ದರೆ ನೋ ಎಂಟ್ರಿ

    ಭಕ್ತರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು, ಕೈಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಸಾಮಾನ್ಯ ಕೋವಿಡ್​ ನಿಯಮಗಳೂ ಇವೆ.

    ನೆಗೆಟಿವ್​ ರಿಪೋರ್ಟ್​ ಮಾತ್ರವಲ್ಲದೇ, ಭಕ್ತರು ಆಧಾರ್ ಕಾರ್ಡ್‌ಗಳನ್ನು ದೇವಾಲಯಕ್ಕೆ ಕೊಂಡೊಯ್ಯಬೇಕಾಗುತ್ತದೆ. ಪ್ರವೇಶ ದ್ವಾರದಲ್ಲಿ ಭಕ್ತಾದಿಗಳ ಉಷ್ಣ ತಾಪಮಾನವನ್ನು ಪರಿಶೀಲಿಸಲಾಗುತ್ತಿದೆ. ಇದನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಕಾರಣ, ಒಂದು ವೇಳೆ ಭಕ್ತರಲ್ಲಿ ಕರೊನಾ ಸೋಂಕು ಕಂಡುಬಂದರೆ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ.

    ಪುರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರವಾಸಿಗರಿಗೆ ಅವಕಾಶವಿಲ್ಲದ ಕಾರಣ ಅನೇಕ ಭಕ್ತರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಾಗಿ ಭುವನೇಶ್ವರಕ್ಕೆ ಹೋಗುತ್ತಿದ್ದಾರೆ.

    ‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

    ಹವಾಮಾನ ಏರಿಳಿತವನ್ನು ಉಲ್ಲನ್​ನಲ್ಲಿ ದಾಖಲಿಸಿದ ಮಹಿಳೆ!

    ಪದವಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 6,506 ಹುದ್ದೆಗಳ ಭರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts