More

    ದೇಶದಲ್ಲಿ ಕೋವಿಡ್​ ಉಲ್ಬಣ: 761 ಹೊಸ ಪ್ರಕರಣ ಪತ್ತೆ, ಕರ್ನಾಟಕದ ನಾಲ್ವರು ಸೇರಿ 12 ಮಂದಿ ಸಾವು

    ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಶುಕ್ರವಾರ 761 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, ಈ ವೈರಲ್ ಕಾಯಿಲೆಯಿಂದ ಮತ್ತೆ 12 ಜನರು ಸಾವನ್ನಪ್ಪಿದ್ದಾರೆ.

    ದೇಶದಲ್ಲಿ ಸಕ್ರಿಯ ಕೋವಿಡ್​ ಪ್ರಕರಣಗಳ ಸಂಖ್ಯೆ ಗುರುವಾರ 4,423 ರಿಂದ 4,334 ಕ್ಕೆ ಸ್ವಲ್ಪ ಇಳಿಕೆ ಕಂಡಿದೆ.

    ಕೇರಳದಲ್ಲಿ 1,249, ಕರ್ನಾಟಕದಲ್ಲಿ 1,240, ಮಹಾರಾಷ್ಟ್ರದಲ್ಲಿ 914, ತಮಿಳುನಾಡಿನಲ್ಲಿ 190 ಮತ್ತು ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಲ್ಲಿ ತಲಾ 128 ಸಕ್ರಿಯ ಪ್ರಕರಣಗಳಿವೆ.

    12 ಹೊಸ ಸಾವುಗಳ ಪೈಕಿ ಕೇರಳದಿಂದ ಐದು, ಕರ್ನಾಟಕದಿಂದ ನಾಲ್ಕು, ಮಹಾರಾಷ್ಟ್ರದಿಂದ ಇಬ್ಬರು ಮತ್ತು ಉತ್ತರ ಪ್ರದೇಶದಿಂದ ಒಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ.

    ದಿನನಿತ್ಯದ ಪ್ರಕರಣಗಳ ಸಂಖ್ಯೆ ಡಿಸೆಂಬರ್ 5 ರವರೆಗೆ ಎರಡಂಕಿಯಲ್ಲಿತ್ತು. ಆದರೆ, ಶೀತ ಹವಾಮಾನ ಪರಿಸ್ಥಿತಿಗಳ ನಡುವೆ ಮತ್ತು ಹೊಸ ಕೋವಿಡ್​ ರೂಪಾಂತರದ ಹೊರಹೊಮ್ಮುದ ನಂತರ ಈ ಸಂಖ್ಯೆ ಮತ್ತೆ ಏರಲು ಪ್ರಾರಂಭವಾಯಿತು.

    2020ರ ಆರಂಭದಲ್ಲಿ ಪ್ರಾರಂಭವಾದ ಕೋವಿಡ್​ ಸಾಂಕ್ರಾಮಿಕ ರೋಗ ಉತ್ತುಂಗಕ್ಕೆ ತಲುಪಿದ ಸಂದರ್ಭದಲ್ಲಿ ದೈನಂದಿನ ಸಂಖ್ಯೆಗಳು ಲಕ್ಷಗಳ ಪ್ರಮಾಣದಲ್ಲಿತ್ತು. ನಾಲ್ಕು ವರ್ಷಗಳಲ್ಲಿ 4.5 ಕೋಟಿಗೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, .3 ಲಕ್ಷಕ್ಕೂ ಹೆಚ್ಚು ಜನರು ದೇಶಾದ್ಯಂತ ಸಾವನ್ನಪ್ಪಿದ್ದರು. ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4.4 ಕೋಟಿಗೂ ಅಧಿಕವಾಗಿದ್ದು, ರಾಷ್ಟ್ರೀಯ ಚೇತರಿಕೆ ದರ 98.81 ಶೇಕಡಾ ಎಂದು ಕೇಂದ್ರು ಆರೋಗ್ಯ ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ. ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಇದುವರೆಗೆ 220.67 ಕೋಟಿ ಡೋಸ್ ಕೋವಿಡ್​ ಲಸಿಕೆಗಳನ್ನು ನೀಡಲಾಗಿದೆ.

    ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧ: ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ

    ಸೂಕ್ತ ಹೂಡಿಕೆಗೆ ಪಿಎಂಎಸ್​, ಎಐಎಫ್​ ತಿಳಿವಳಿಕೆ ಅತ್ಯಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts