More

    ಸೇಡಿನ ಕೊಲೆ: ಬೆಂಗಳೂರು ನಂ.1- ರಾಜಧಾನಿಯಲ್ಲಿ ನಡೆದಿರುವ ದ್ವೇಷದ ಹತ್ಯೆ ಎಷ್ಟು ಗೊತ್ತಾ?

    ಬೆಂಗಳೂರು: ಕಳೆದ ವರ್ಷ ಅಂದರೆ 2019ರಲ್ಲಿ ನಡೆದಿರುವ ದ್ವೇಷದ ಹತ್ಯೆ ಪ್ರಕರಣಗಳ ಅಂಕಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್​ಸಿಆರ್​ಬಿ) ಬಿಡುಗಡೆ ಮಾಡಿದೆ.

    ಈ ವರದಿಯ ಅನ್ವಯ ಸೇಡಿನ ಕೊಲೆಯಲ್ಲಿ ಬೆಂಗಳೂರು ಟಾಪ್​ನಲ್ಲಿದೆ. ಎನ್​ಸಿಆರ್​ಬಿ ಅನ್ವಯ 2019ರಲ್ಲಿ ಬೆಂಗಳೂರಿನಲ್ಲಿ 106 ದ್ವೇಷದ ಕೊಲೆಗಳು ನಡೆದಿವೆ. ನಂತರದ ಸ್ಥಾನ ದೆಹಲಿಯದ್ದು. ಇಲ್ಲಿ ಸೇಡಿಗಾಗಿ ನಡೆದಿರುವ ಹತ್ಯೆಗಳ ಸಂಖ್ಯೆ 87. ಇದು ಕೇವಲ ವರದಿಯಾಗಿರುವ ದಾಖಲೆಗಳಾಗಿದ್ದು, ಬೆಳಕಿಗೆ ಬಾರದೇ ಹೋಗಿರುವ ಕೆಲವು ಕೊಲೆಗಳು ಕೂಡ ನಡೆದಿರುವ ಸಾಧ್ಯತೆಗಳಿವೆ.

    ಅಚ್ಚರಿಯ ಸಂಗತಿ ಎಂದರೆ 2019ರಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಒಟ್ಟಾರೆ ಕೊಲೆಗಳ ಸಂಖ್ಯೆಯ ಶೇ.75ರಷ್ಟು ಕೊಲೆಗಳು ಆಗಿರುವುದು ದ್ವೇಷಕ್ಕಾಗಿಯೇ. ಅಂದರೆ ಬೆಂಗಳೂರಿನಲ್ಲಿ ಕಳೆದ ವರ್ಷ ಒಟ್ಟಾರೆಯಾಗಿ 210 ಕೊಲೆ ಪ್ರಕರಣಗಳು ದಾಖಲಾಗಿದ್ದರೆ, ಅವುಗಳ ಪೈಕಿ ಈಗಾಗಲೇ ಹೇಳಿದಂತೆ 106 ಪ್ರಕರಣಗಳು ದ್ವೇಷಕ್ಕೆ ಸಂಬಂಧಪಟ್ಟವು. ಅಂದರೆ ಎಲ್ಲವೂ ಪೂರ್ವ ನಿಯೋಜಿತ ಕೊಲೆಗಳು.

    ಒಟ್ಟಾರೆ ಕೊಲೆ ಪ್ರಕರಣಗಳನ್ನು ತೆಗೆದುಕೊಂಡರೆ 505 ಕೊಲೆಗಳೊಂದಿಗೆ ದೆಹಲಿ ಟಾಪ್​ 1 ಸ್ಥಾನದಲ್ಲಿದೆ. ಆದರೆ ದ್ವೇಷದ ಕೊಲೆ ಪ್ರಕರಣದಲ್ಲಿ ಇದಕ್ಕೆ ಎರಡನೇ ಸ್ಥಾನ.

    ದ್ವೇಷದ ಕೊಲೆ ಪ್ರಕರಣದಲ್ಲಿ ನಾಗಪುರಕ್ಕೆ ಮೂರನೇ ಸ್ಥಾನ. ಇಲ್ಲಿ ನಡೆದಿರುವ ಕೊಲೆಗಳ ಸಂಖ್ಯೆ 58, ನಂತರದ ಸ್ಥಾನಗಳು ಹೀಗಿವೆ- ಚೆನ್ನೈ (45 ಪ್ರಕರಣ), ಸೂರತ್ (43 ಪ್ರಕರಣ), ಕೋಲ್ಕತಾ (27 ಪ್ರಕರಣ) ಅಹಮದಾಬಾದ್ (23 ಪ್ರಕರಣ) ಮತ್ತು ಇಂದೋರ್ (16 ಪ್ರಕರಣ).

    ಇದನ್ನೂ ಓದಿ: 24 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಣೆ- ಪ್ರವೇಶ​ ಪಡೆಯುವಾಗ ಎಚ್ಚರ: ಇಲ್ಲಿದೆ ವಿವರ

    2019ರಲ್ಲಿ ವೈಯಕ್ತಿಕ ದ್ವೇಷದ ಕೊಲೆಗಳು ಕುಟುಂಬಗಳಲ್ಲಿ, ಸ್ನೇಹಿತರು ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ ನಡುವೆ ಹೆಚ್ಚಾಗಿ ನಡೆದಿದೆ ಎಂದು ಎನ್​ಸಿಆರ್​ಬಿ ಹೇಳಿದೆ. ಭೂಮಿ, ಮಹಿಳೆ ಹಾಗೂ ಸಂಪತ್ತಿಗಾಗಿ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ ಎಂದು ವರದಿಯಾಗಿದೆ.

    ಲಾಭಕ್ಕಾಗಿ ಕೊಲೆಗಳು ನಡೆದಿರುವ ಪೈಕಿ ಬೆಂಗಳೂರಿನಲ್ಲಿ ಕೇವಲ ಆರು ಘಟನೆಗಳು ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ. ಲಾಭದ ಕೊಲೆಯ ವಿಷಯದಲ್ಲಿ ಪಟ್ನಾದಲ್ಲಿ 32 ಪ್ರಕರಣ ಜರುಗಿದ್ದು, ಇದು ಮೊದಲ ಸ್ಥಾನದಲ್ಲಿದೆ. 16 ಪ್ರಕರಣ ದಾಖಲಾಗಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ. ಪ್ರೇಮ ಪ್ರಕರಣಗಳ ಸಂಬಂಧ ಒಟ್ಟು ಮೂರು ಕೊಲೆ ಪ್ರಕರಣ ದಾಖಲಾಗಿದ್ದರೆ, ಅನೈತಿಕ ಸಂಬಂಧ ಕುರಿತಾಗಿ ಬೆಂಗಳೂರಿನಲ್ಲಿ ಒಟ್ಟು 13 ಕೊಲೆಗಳು ನಡೆದಿದೆ. 2019ರಲ್ಲಿ ಯಾವುದೇ ಮಾರ್ಯಾದಾ ಹತ್ಯೆ ಬೆಂಗಳೂರಿನಲ್ಲಿ ನಡೆದಿಲ್ಲ ಎಂದು ಎನ್​ಸಿಆರ್​ಬಿ ತಿಳಿಸಿದೆ.

    ಇನ್ನು, 2020ಕ್ಕೆ ಬಂದರೆ ಕರೊನಾ ಸೋಂಕು ಕೊಲೆ ಪ್ರಕರಣಗಳನ್ನು ತಗ್ಗಿಸಿದೆ. ಕಳೆದ ಐದಾರು ತಿಂಗಳಲ್ಲಿ ಕೊಲೆ ಮಾತ್ರವಲ್ಲದೇ ಇತರ ಅಪರಾಧ ಪ್ರಕರಣಗಳೂ ಕೊಂಚ ತಗ್ಗಿವೆ.

    ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

    ಶಾಹೀನ್​ಬಾಗ್​ನಂಥ ಸ್ಥಳದಲ್ಲಿ ಪ್ರತಿಭಟನೆ ಸಹಿಸಲ್ಲ- ಕೋರ್ಟ್​ ಆದೇಶ ಕಾಯದೇ ಕ್ರಮ ತೆಗೆದುಕೊಳ್ಳಿ: ಸುಪ್ರೀಂ

    ನನಗೆ ಐವರು ಗಂಡಂದಿರು, ಮೂವರು ಅಪ್ಪಂದಿರು: ನಮ್ಮಲ್ಲಿದು ಕಾಮನ್​, ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾಳೆ ಯುವತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts