More

    VIDEO: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್: ಜಗತ್ತಿನ ಕಣ್ಣು ಭಾರತದ ಈ ಕುವರಿಯತ್ತ…

    ವಾಷಿಂಗ್ಟನ್: ಮಂಗಳದಲ್ಲಿ ಜೀವಿಗಳ ಅಸ್ತಿತ್ವದ ಬಗ್ಗೆ ಮಹತ್ವದ ಅಧ್ಯಯನ ಮಾಡಲು ತೆರಳಿರುವ ನಾಸಾದ ಅತಿ ದೊಡ್ಡ ಮತ್ತು ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್, ಮಂಗಳ ಗ್ರಹದ ಅಂಗಳದ ಮೇಲೆ ಗುರುವಾರ ಸುಗಮವಾಗಿ ಇಳಿದಿದೆ. 203 ದಿನಗಳ ಬಾಹ್ಯಾಕಾಶ ಪ್ರಯಾಣದ ಬಳಿಕ ಈ ನೌಕೆಯು ಸುಗಮವಾಗಿ ಗ್ರಹದ ಮೇಲೆ ಇಳಿದಿದ್ದು ವಿಜ್ಞಾನಿಗಳಲ್ಲಿ ಸಂತಸ ಮೂಡಿಸಿದೆ.

    293 ಮಿಲಿಯನ್ ಮೈಲು ದೂರ ಸಾಗಿರುವ ಪರ್ಸೆವೆರೆನ್ಸ್ ರೋವರ್, ಸ್ಥಳೀಯ ಕಾಲಮಾನ ಮಧ್ಯಾಹ್ನ 3.55ರ ವೇಳೆಗೆ ನಾಸಾ ರೋವರ್ ಗ್ರಹದ ಮೇಲ್ಮೈ ಸ್ಪರ್ಶಿಸಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಡ್ ಪ್ರೊಪಲ್ಷನ್ ಪ್ರಯೋಗಾಲಯದಲ್ಲಿ ಇದರ ದೃಶ್ಯ ದಾಖಲಾಗಿದೆ.

    ಇಂಥದ್ದೊಂದು ಐತಿಹಾಸಿಕ ಘಟನೆಯ ಯಶಸ್ಸು ಸಲ್ಲುವುದು ಓರ್ವ ಭಾರತೀಯಳಿಗೆ ಎನ್ನುವ ಹೆಮ್ಮೆ ನಮ್ಮ ಭಾರತದ್ದು. ಏಕೆಂದರೆ ಈ ಯೋಜನೆಯ ಮಾರ್ಗದರ್ಶನ, ಪಥದರ್ಶಕ ಮತ್ತು ನಿಯಂತ್ರಣ ಕಾರ್ಯಾಚರಣೆಗಳ (ಜಿಎನ್ ಮತ್ತು ಸಿ) ನೇತೃತ್ವ ವಹಿಸಿದವರು ಭಾರತ ಮೂಲದ ವಿಜ್ಞಾನಿ ಸ್ವಾತಿ ಮೋಹನ್‌.

    ನಾಸಾ ಮಿಷನ್‌ನ ನೌಕಾಯಾನ ಹಾಗೂ ಪಥಮಾರ್ಗದರ್ಶನದ ನೇತೃತ್ವ ಅಮೆರಿಕದಲ್ಲಿ ನೆಲೆಸಿರುವ ಜ್ಯೋತಿ-ಮೋಹನ್ ಅವರ ಪುತ್ರಿ ಡಾ.ಸ್ವಾತಿ ಮೋಹನ್ ಹೊತ್ತುಕೊಂಡಿದ್ದು, ಇದೀಗ ತನ್ನ ಕಾರ್ಯದಲ್ಲಿ ಅವರು ಯಶಸ್ಸು ಕಾಣುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ್ದಾರೆ.

    ನಾಸಾ ವಿಜ್ಞಾನಿ ಡಾ. ಸ್ವಾತಿ ಮೋಹನ್ ಅವರು ಒಂದು ವರ್ಷದ ವಯಸ್ಸಿನವರಾಗಿದ್ದಾಗ ಭಾರತದಿಂದ ಅಮೆರಿಕಕ್ಕೆ ಅವರ ಕುಟುಂಬದೊಂದಿಗೆ ವಲಸೆ ಹೋದರು. ಬಾಲ್ಯದ ಬಹುಭಾಗವನ್ನು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಸ್ವಾತಿ ಕಳೆದಿದ್ದಾರೆ. 9 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ‘ಸ್ಟಾರ್ ಟ್ರೆಕ್’ ಸಿರೀಸ್‌ ವೀಕ್ಷಿಸುತ್ತಿರುವ ವೇಳೆ ಸ್ವಾತಿ ಅವರಿಗೆ, ಬ್ರಹ್ಮಾಂಡದ ಹೊಸ ಪ್ರದೇಶಗಳ ಸುಂದರ ಚಿತ್ರಣಗಳು ಅವರನ್ನು ಸಾಕಷ್ಟು ಆಶ್ಚರ್ಯಚಕಿತರಾಗುವಂತೆ ಮಾಡಿತ್ತಂತೆ. ಇದೇ ಅವರನ್ನು ಇಂದು ಇಡೀ ವಿಶ್ವ ಕೊಂಡಾಡುವಂತೆ ಮಾಡಿದೆ.

    ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಮತ್ತು ಏರೋಸ್ಪೇಸ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಸ್ವಾತಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ(ಎಂಐಟಿ) ಎಂ.ಎಸ್‌ ಮತ್ತು ಪಿಎಚ್‌ಡಿಯನ್ನು ಪೂರ್ಣಗೊಳಿಸಿದರು. 2013ರಿಂದ ಮಂಗಳನ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಈ ಯೋಜನೆಯ ಯಶಸ್ಸನ್ನು ಐತಿಹಾಸಿಕ ಎಂದು ಕೊಂಡಾಡಿದ್ದಾರೆ. ‘ವಿಜ್ಞಾನದ ಶಕ್ತಿ ಮತ್ತು ಅಮೆರಿಕದ ಜಾಣ್ಮೆಯ ಮುಂದೆ ಈ ಲೋಕದಲ್ಲಿ ಸಾಧ್ಯತೆಗಳಾಚೆ ಯಾವುದೂ ಇಲ್ಲ ಎನ್ನುವುದು ಇಂದು ಮತ್ತೆ ಸಾಬೀತಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಇವರೇ ನೋಡಿ ಗೂಗಲ್​ ದಾದಿ… ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಇವರು!

    ವಿಜ್ಞಾನ ಲೋಕಕ್ಕೇ ಸವಾಲ್‌ ಎಸೆದ ಈ ಜೀವಿಗಳು! ಮಂಜುಗಡ್ಡೆಯ 3 ಸಾವಿರ ಅಡಿಯಲ್ಲಿ ಬೆಚ್ಚಗೆ ಕುಳಿತಿದ್ವು…

    ಪ್ರೀತ್ಸೆ… ಪ್ರೀತ್ಸೆ… ಎಂದು ಕಿಡ್ನಾಪ್​ ಮಾಡಿದ… ಒಪ್ಪದಿದ್ದಕ್ಕೆ ಗನ್​ ಹಿಡಿದು ಷರ್ಟ್​ ಬಿಚ್ಚಿದ… ಪೊಲೀಸರು ಸುಸ್ತೋ ಸುಸ್ತು!

    ನಡುರಸ್ತೆಯಲ್ಲಿಯೇ ವಕೀಲ ದಂಪತಿಯ ಬರ್ಬರ ಹತ್ಯೆ: ವಿಡಿಯೋದಲ್ಲಿ ಭಯಾನಕ ದೃಶ್ಯ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts