More

    ವಿಜ್ಞಾನ ಲೋಕಕ್ಕೇ ಸವಾಲ್‌ ಎಸೆದ ಈ ಜೀವಿಗಳು! ಮಂಜುಗಡ್ಡೆಯ 3 ಸಾವಿರ ಅಡಿಯಲ್ಲಿ ಬೆಚ್ಚಗೆ ಕುಳಿತಿದ್ವು…

    ಅಂಟಾರ್ಟಿಕಾ: ಮನುಷ್ಯನಿಗೆ ನಿಲುಕದ್ದು ಈ ಪ್ರಕೃತಿಯಲ್ಲಿ ಅವೆಷ್ಟೋ ಘಟನೆಗಳು ಇವೆ. ವಿಜ್ಞಾನಿಗಳು ಏನೆಲ್ಲಾ ಸಾಧನೆ, ಸಂಶೋಧನೆ ಮಾಡಿದರೂ ಪ್ರಕೃತಿಯ ವಿಸ್ಮಯ ಲೋಕದ ಎದುರು ಮನುಷ್ಯ ಕುಬ್ಜನೇ. ಅಗೆದಷ್ಟೂ, ಬಗೆದಷ್ಟೂ ಚಿತ್ರ- ವಿಚಿತ್ರ ಎನಿಸುವಂಥ ಸಂಗತಿಗಳು ಕಾಣಸಿಗುವುದು ಉಂಟು.

    ಅಂಥದ್ದೇ ಒಂದು ವಿಸ್ಮಯ ಇದೀಗ ಮಂಜುಗಡ್ಡೆಯ ಮೂರು ಸಾವಿರ ಅಡಿಯ ಒಳಗಡೆ ನಡೆದಿದೆ. ಇಷ್ಟೇ ಆದರೆ ಪರವಾಗಿರಲಿಲ್ಲ. ಆದರೆ ಜೀವಿಗಳು ವಾಸಿಸಲು ಯೋಗ್ಯವೇ ಅಲ್ಲ ಎಂದುಕೊಂಡಿರುವ ಅಂಟಾರ್ಟಿಕಾದಲ್ಲಿ, ಅದೂ ಸುಮಾರು 3 ಸಾವಿರ ಅಡಿಗಳಷ್ಟು ಆಳದಲ್ಲಿ ಜೀವಿಗಳು ಇರುವುದು ವಿಜ್ಞಾನ ಲೋಕಕ್ಕೇ ಸವಾಲು ಎಸೆದಂತಿದೆ.

    ಸಂಪೂರ್ಣ ಮಂಜುಗಡ್ಡೆಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಇದುವರೆಗೆ ಜೀವಿಗಳ ಇರುವಿಕೆ ಇಲ್ಲವೇ ಇಲ್ಲ ಎನ್ನಲಾಗಿತ್ತು, ಇದೇ ಕಾರಣಕ್ಕೆ ವಿಜ್ಞಾನಿಗಳು , ಸಂಶೋಧಕರು ಕೂಡ ಈ ಭಾಗಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಇಲ್ಲಿ ಜೀವಿಗಳು ಪತ್ತೆಯಾಗಿವೆ.

    ಅಂಟಾರ್ಟಿಕಾ ಖಂಡದಲ್ಲಿ ಹಲವು ಬೃಹತ್ ಹಿಮಗಡ್ಡೆಗಳಿವೆ. ಫಿಲ್‌ಶರನ್‌ ರೊನ್ನೆ ಎನ್ನಲಾಗುವ ಹಿಮಗಡ್ಡೆ ಎರಡನೇ ಅತಿದೊಡ್ಡದು. ಇದು ಸುಮಾರು 15 ಲಕ್ಷ ಚದರ ಅಡಿ ವಿಸ್ತಾರ ಇದೆ. ಇದರ ಅರ್ಥ ಭಾರತ ದೇಶದ ಅರ್ಧಭಾಗದಷ್ಟು ವಿಸ್ತೀರ್ಣವನ್ನು ಇದು ಹೊಂದಿದೆ! ಈ ಹಿಮಗಡ್ಡೆಯ ಕೆಳಗೆ ಈಗ ಜೀವಿಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಬ್ರಿಟಿಷ್ ಅಂಟಾರ್ಟಿಕ್ ಸರ್ವೇ ಸಂಸ್ಥೆಯ ತಜ್ಞರು ಅಧ್ಯಯನದ ಉದ್ದೇಶದಿಂದ ಈ ಹಿಮಗಡ್ಡೆಯ ತಳದಲ್ಲಿ ಸ್ಯಾಂಪಲ್ ಕಲೆಹಾಕಲು ತಳದವರೆಗೆ ಡ್ರಿಲ್ ಮಾಡಿ ಶೋಧನೆ ಮಾಡಿದ್ದಾರೆ.

    ಈ ಜಾಗವು ಸಮುದ್ರದಿಂದ ಸುಮಾರು 580 ಕಿಮೀ ದೂರದಲ್ಲಿದೆ. ಈ ಜಾಗದಲ್ಲಿ ಡ್ರಿಲ್ ಮಾಡುವ ವೇಳೆ 2,860 ಅಡಿ ಕೆಳಗೆ ಒಂದು ಸಣ್ಣ ಬಂಡೆ ಸಿಕ್ಕಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆ ಬಂಡೆಗೆ ಜೀವಿಗಳು ಅಂಟಿಕೊಂಡಿರುವುದು ಕಂಡಿದೆ. ಎರಡು ವಿಧದ ಜೀವಿಗಳು ಇಲ್ಲಿ ಕಾಣಸಿಕ್ಕಿವೆ. ಇವು ನೋಡಲು ಸ್ಪಾಂಜ್​ಗಳ ರೀತಿ ಇವೆ.

    ಕೆಂಪು ಬಣ್ಣದ ಒಂದು ವಿಧದ ಜೀವಿ ಕಡ್ಡಿಯಂತೆ ಚಾಚಿದೆ. ಮತ್ತೊಂದು ಜೀವಿ ದುಂಡನೆಯ ಸ್ಪಾಂಜ್​ನಂತೆ ಇದೆ. ಇವು ಬಂಡೆಗೆ ಅಂಟಿಕೊಂಡು ನಿಶ್ಚಲವಾಗಿದ್ದಂತೆ ಕಂಡುಬಂದಿದೆ. ಈ ಜೀವಿಗಳು ಅಲ್ಲಿ ಹೇಗೆ ಇವೆ? ಆಹಾರಕ್ಕಾಗಿ ಏನು ಮಾಡುತ್ತವೆ? ಎಷ್ಟು ಕಾಲದಿಂದ ಅಲ್ಲಿ ಇವೆ ಎಂದೆಲ್ಲಾ ಈಗ ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಇದರ ಜತೆಗೆ, ಮಂಜಿನಿಂದಲೇ ಆವೃತವಾದ ಭೂಮಿಯೇತರ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಇರಬಹುದು ಎಂಬ ಕುತೂಹಲವನ್ನೂ ಇದು ಹುಟ್ಟುಹಾಕಿದೆ.

    ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

    ಅವರನ್ನು ಬಿಟ್ಟು ಬದುಕಿರಲಾರೆ- ಆದರೆ ಅವರು ಇಬ್ಬರು ಮಕ್ಕಳ ತಂದೆ; ಪ್ಲೀಸ್‌ ದಾರಿ ತೋರಿ…

    ಸ್ಮೃತಿ ಸವಾಲ್‌: ತಾಕತ್ತಿದ್ರೆ ಗುಜರಾತ್‌ನಿಂದ ಗೆದ್ದು ತೋರಿಸಿ- ಆಮೇಲೆ ಟೀ ಮಾಲೀಕರ ವಿರುದ್ಧ ಹೇಳುವಿರಂತೆ

    ಮೊದಲು ಎಲ್ಲದ್ದಕ್ಕೂ ಓಕೆ ಅಂತಿದ್ದವಳು ಈಗೀಗ ಬೇಡ ಬೇಡ ಅಂತಿದ್ದಾಳೆ- ಮದುವೆಯಾದರೆ ಸುಖವಾಗಿರುವೆನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts