More

    ಮತ ಎಣಿಸುತ್ತಲೇ ಕುಸಿದುಬಿದ್ದು ಮೈಸೂರಿನ ಚುನಾವಣಾಧಿಕಾರಿ ಸಾವು

    ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮತ ಎಣಿಕೆ ಕೇಂದ್ರವೊಂದರಲ್ಲಿ ಕರ್ತವ್ಯನಿರತರಾಗಿದ್ದ ಚುನಾವಣಾ ಅಧಿಕಾರಿ ಬೋರೇಗೌಡ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಪುಷ್ಪಾ ಕಾನ್ವೆಂಟ್​ನ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಎನ್. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಚುನಾವಣಾ ಅಧಿಕಾರಿಯಾಗಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದ್ದು ಅವರು ಕುಸಿದುಬಿದ್ದರು.

    ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಬೋರೇಗೌಡರು ಲೋಕೋಪಯೋಗಿ ಇಲಾಖೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದರು.

    ಮೈಸೂರು ಜಿಲ್ಲೆಯ 250 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯ 8 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

    ಹೆಚ್ಚುತ್ತಲೇ ಸಾಗಿದೆ ಬ್ರಿಟನ್​ ವೈರಾಣು: ಮತ್ತಷ್ಟು ಜನರಲ್ಲಿ ಹೊಸ ಕೋವಿಡ್​ ಪಾಸಿಟಿವ್​- ಬೆಂಗಳೂರಲ್ಲಿ ಅಧಿಕ

    ಸದಾ ಯೌವನ ಬಯಸಿರುವಿರಾ? ಹಾಗಿದ್ದರೆ ಮೈಮೇಲೆ ಹೆಬ್ಬಾವು ಬಿಟ್ಕೊಳಿ- ಈ ವಿಡಿಯೋ ನೋಡಿ

    ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts