More

    ಅತ್ಯಾಚಾರ, ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಧರ್ಮಗುರುವಿಗೆ 10 ವರ್ಷ ಶಿಕ್ಷೆ: ವಿಚಿತ್ರ ನಗುಬೀರಿ ಹೊರಬಂದ ಕಿರಾತಕ!

    ಲಖನೌ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದೂ ಅಲ್ಲದೇ, ಯುವತಿಯ ಅಶ್ಲೀಲ ವಿಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿದ್ದ ಇಟವಾ ಮೂಲದ ಮುಸ್ಲಿಂ ಧರ್ಮಗುರುವಿಗೆ ಲಖನೌ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡವನ್ನು ವಿಧಿಸಿದೆ. ಆದರೆ ಈತ ಮಾತ್ರ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಮುಗುಳುನಗೆ ಬೀರಿ ಕೋರ್ಟ್​ನಿಂದ ಹೊರಕ್ಕೆ ಬಂದಿದ್ದಾನೆ!

    ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಒಡ್ಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೌಲಾನಾ ಶಿಕ್ಷೆಗೆ ಒಳಗಾದವ. ವಾರಣಾಸಿಯ ಮಹಿಳೆಯೊಬ್ಬರು ವಿವಾಹದ ನೆಪದಲ್ಲಿ ಧರ್ಮಗುರು ತಮ್ಮ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ನಂತರ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದ್ದರು.

    ‘2013ರಿಂದ ಈತ ನನಗೆ ಪರಿಚಯ. ಅಂದಿನಿಂದ ಇವನನ್ನು ನಾನು ಭೇಟಿ ಮಾಡುತ್ತಿದ್ದೆ. ನನ್ನನ್ನು ಮದುವೆಯಾಗುವುದಾಗಿ ಆತ ನಂಬಿಸಿದ. ಅವನ ಮಾತನ್ನು ನಾನು ಕೇಳಿದೆ. ಅಂದಿನಿಂದಲೂ ನನ್ನ ಮೇಲೆ ಅತ್ಯಾಚಾರ ಮಾಡುತ್ತ ಬಂದ. ಮಾತ್ರವಲ್ಲದೇ ಇಬ್ಬರೂ ಒಟ್ಟಿಗಿರುವ ಅಶ್ಲೀಲ ವಿಡಿಯೋ ಮಾಡಿದ್ದಾನೆ. ಮದುವೆಯಾಗಲು ಹೇಳಿದಾಗ ಅದಕ್ಕೆ ನಿರಾಕರಿಸಿದ ಆತ, ಅಶ್ಲೀಲ ವಿಡಿಯೋ ತೋರಿಸಿ ಬ್ಲ್ಯಾಕ್​ ಮಾಡಲು ಶುರು ಮಾಡಿದ’ ಎಂದು ಮಹಿಳೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು.

    ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಈತನ ವಿರುದ್ಧದ ವಿಚಾರಣೆ ನಡೆದ ನ್ಯಾಯಾಧೀಶ ನೀರಜ್ ಶ್ರೀವಾಸ್ತವ 10 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಆದರೆ ಶಿಕ್ಷೆ ವಿಧಿಸಿದ ಬಳಿಕ ಪೊಲೀಸರು ಹೊರಕ್ಕೆ ಕರೆದುಕೊಂಡು ಬರುತ್ತಿರುವಾಗ ಈತ ವಿಚಿತ್ರ ರೀತಿಯಲ್ಲಿ ನಗುತ್ತಿದ್ದುದು ಹಲವು ರೀತಿಯ ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ. (ಏಜೆನ್ಸೀಸ್​)

    VIDEO: ಆಮೀರ್​ ಪುತ್ರಿ ಐರಾ ಖಾನ್​ ಎಂಗೇಜ್​ಮೆಂಟ್​: 2 ವರ್ಷಗಳ ಡೇಟಿಂಗ್​ ಬಳಿಕ ಸಿನಿಮಾ ಸ್ಟೈಲ್​ನಲ್ಲಿ ಪ್ರಪೋಸ್​!

    ಪಂಜಾಬ್ ಸರ್ಕಾರಕ್ಕೆ ಶಾಕ್​ ನೀಡಿದ ಎನ್​ಜಿಟಿ: ಎರಡು ಸಾವಿರ ಕೋಟಿ ರೂ. ಭಾರಿ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts