More

    ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ: ದೀದಿ ವಿರುದ್ಧ ಭುಗಿಲೆದ್ದ ಆಕ್ರೋಶ- ಬಂದ್​ಗೆ ಕರೆ

    ಕೋಲ್ಕತಾ: ಸ್ಥಳೀಯ ಬಿಜೆಪಿ ಮುಖಂಡ, ಕೌನ್ಸಿಲರ್ ಮನೀಶ್ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ತಿತಗರ್ ಸಮೀಪ ಉತ್ತರ 24 ಪರ್ಗನಾಸ್ ಜಿಲ್ಲೆಯಲ್ಲಿ ಪೊಲೀಸ್​ ಠಾಣೆಯ ಎದುರೇ ಈ ಘಟನೆ ನಡೆದಿದೆ.

    ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನೇರ ಕಾರಣ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದಿರುವ ಪಕ್ಷವು ಈ ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಪಟ್ಟುಹಿಡಿದಿದೆ.

    ಇದನ್ನೂ ಓದಿ: ಸೋಂಕು ತಗುಲಿದ್ರೆ ಮಮತಾರನ್ನು ತಬ್ಬಿಕೊಳ್ಳುತ್ತಿದ್ದೆ ಎಂದ ಸಂಸದನಿಗೆ ಕರೊನಾ ಪಾಸಿಟಿವ್​!

    ಟಿಎಂಸಿ ನಾಯಕರು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಅಸಹ್ಯಕರ ಸಂಗತಿ. ಸ್ಥಳೀಯ ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ಸರಿಯಾಗಿ ನಡೆಸುತ್ತಾರೆ ಎಂಬ ನಂಬಿಕೆ ನಮಗಿಲ್ಲ. ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ತಿಳಿಸಿದ್ದಾರೆ.

    ಈ ನಡುವೆಯೇ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಇಂದು ಮಧ್ಯಾಹ್ನ 12 ಗಂಟೆಗಳ ಬಂದ್‌ಗೆ ಕರೆನೀಡಿದೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಡಿಜಿಪಿಯನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಬಿಜೆಪಿ ನಾಯಕನ ಹತ್ಯೆ ಬಗ್ಗೆ ಅವರು ಮಾಹಿತಿ ಕೇಳಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೂ ವರದಿಯನ್ನು ಕೇಳಿದ್ದಾರೆ.

    ₹500 ದಂಡ ಹಾಕಿದ್ದಕ್ಕೆ ₹10 ಲಕ್ಷ ಪರಿಹಾರ! ವಕೀಲನ ವಿರುದ್ಧ ಹೋಗಿ ಪೇಚಿಗೆ ಸಿಲುಕಿದ ಪೊಲೀಸ್

    ಭಯೋತ್ಪಾದನಾ ಸಂಘಟನೆಗೆ ಅಕ್ರಮ ಹಣ ವರ್ಗ: ಲಷ್ಕರ್​ ಮುಖ್ಯಸ್ಥನ ವಿರುದ್ಧ ಚಾರ್ಜ್​ಷೀಟ್​

    ಸೊಳ್ಳೆಗಳಿಗೆ ದಿನವೂ ರಕ್ತ ಕುಡಿಸುತ್ತಾರೆ ಈ ವಿಜ್ಞಾನಿ- ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts