More

    VIDEO: ಆರತಿ ಬೆಳಗಿದವರಿಗೆ ಗರಿಗರಿ ನೋಟು: ಸಿಎಂಗೆ ಶುರುವಾಯ್ತು ‘ಸಂಪ್ರದಾಯ’ ಸಂಕಟ!

    ಬೀದರ್‌: ಬೀದರ್‌ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆರೋಪ ಕೇಳಿಬಂದಿದೆ.

    ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಬಂದಿರುವ ಬೊಮ್ಮಾಯಿ ಅವರನ್ನು ಆರತಿ ಬೆಳಗಿದ ಮಹಿಳೆಯರು ಸ್ವಾಗತ ಕೋರಿದರು. ಸಂಪ್ರದಾಯದಂತೆ ಆರತಿ ಬೆಳಗಿದವರಿಗೆ ನೋಟು ಕೊಡಲಾಗುತ್ತದೆ. ಅದರಂತೆಯೇ ಬೊಮ್ಮಾಯಿ ಅವರು ಕೂಡ ಅಲ್ಲಿದ್ದ ಮಹಿಳೆಯರಿಗೆ ತಮ್ಮ ಜೇಬಿನಿಂದ ನೋಟನ್ನು ತೆಗೆದು ನೀಡಿದ್ದಾರೆ. ಅದನ್ನು ಅವರ ಆರತಿ ತಟ್ಟೆಗೆ ಹಾಕಿದ್ದಾರೆ.

    ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತೆ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪರಿಷತ್ ಚುನಾವಣೆ ಪ್ರಚಾರ ನಡೆಸಿಕೊಂಡು ವಾಸ್ತವ್ಯ ಹೂಡಲು ಡಿ.ಕೆ. ಸಿದ್ರಾಮ್ ಮನೆಗೆ ಮುಖ್ಯಮಂತ್ರಿಗಳು ತೆರಳಿದ್ದರು. ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿರುವ ಸಿದ್ರಾಮ ಮನೆಯಲ್ಲಿ ಆರತಿ ಬೆಳಗಿ ಮಹಿಳೆಯರಿಂದ ಸ್ವಾಗತ ಕೋರಲಾಯಿತು.

    ಈ ವೇಳೆ ಪ್ರತಿಯೊಬ್ಬರ ಆರತಿ ತಟ್ಟೆಗೆ ಅವರು ಐನೂರು ರೂಪಾಯಿ ನೋಟುಗಳನ್ನ ಇಟ್ಟಿದ್ದಾರೆ. ಆದರೆ ಇದೇ ದೊಡ್ಡ ವಿಷಯವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಲಾಗಿದೆ. (ದಿಗ್ವಿಜಯ ನ್ಯೂಸ್‌)

    ಇಲ್ಲಿದೆ ನೋಡಿ ಆರತಿ ಬೆಳಗಿರುವ ವಿಡಿಯೋ:

    ಪ್ರಥಮ, ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆ ಸಮಯ ಬದಲು- ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts