More

    ಸಮುದ್ರಮಥನದಲ್ಲಿ ಹುಟ್ಟಿದ ‘ದೇವ ವೃಕ್ಷ’ ರಾಮಮಂದಿರದ ಅಂಗಳದಲ್ಲಿ….

    ಅಯೋಧ್ಯೆ: ಅಯೋಧ್ಯೆಯಲ್ಲಿ ಐತಿಹಾಸಿಕ ಕ್ಷಣಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಇಡೀ ಅಯೋಧ್ಯೆ ಅಷ್ಟೇ ಅಲ್ಲದೇ ದೇಶಾದ್ಯಂತ ರಾಮಜಪ ಶುರುವಾಗಿದೆ. ಪೂಜಾ ವಿಧಿ ವಿಧಾನ ನೆರವೇರಿಸಲು ದೇಗುಲಗಳು ಸನ್ನದ್ಧಗೊಂಡಿವೆ.

    ಈ ನಡುವೆಯೇ ಕುತೂಹಲದ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಭೂಮಿಪೂಜೆಗೂ ಮುನ್ನ ಅಲ್ಲಿಯೇ ಒಂದು ಗಿಡವನ್ನು ನೆಡಲಿದ್ದಾರೆ. ಹೌದು. ಅದುವೇ ಕೃಷ್ಣಪ್ರಿಯ ಪಾರಿಜಾತ. ದೇವ ವೃಕ್ಷವೆಂದೇ ಕರೆಯಲ್ಪಡುವ ಈ ಗಿಡವನ್ನು ನೆಡುವ ಮೂಲಕ ಪ್ರಧಾನಿಯವರು ಭೂಮಿಪೂಜೆಗೆ ಚಾಲನೆ ನೀಡಲಿದ್ದಾರೆ.

    ಪಾರಿಜಾತಕ್ಕೂ, ರಾಮಾಯಣಕ್ಕೂ ಹಾಗೂ ಮಹಾಭಾರತಕ್ಕೂ ನಂಟಿದೆ. ಇದು ಕೃಷ್ಣನ ಅತಿ ಪ್ರೀತಿಯ ಹೂವು ಎಂದೇ ಬಿಂಬಿತವಾಗಿದ್ದರೆ, ರಾಮಾಯಣದ ಸಮಯದಲ್ಲಿ ಸಮುದ್ರಮಥನದಲ್ಲಿ ಹುಟ್ಟಿದ ಹೂವು ಇದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

    ಸಮುದ್ರ ಮಥನದ ಸಮಯದಲ್ಲಿ ಹುಟ್ಟಿರುವ ಪಂಚ ವೃಕ್ಷಗಳಲ್ಲಿ ಪಾರಿಜಾತವೂ ಒಂದು. ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಈ ಪಾರಿಜಾತ. ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನ ಉಳಿದ ನಾಲ್ಕು ವೃಕ್ಷಗಳು ಎನ್ನುತ್ತವೆ ಪುರಾಣ.

    ಇದನ್ನೂ ಓದಿ: PHOTOS: ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ರಾಮಮಂದಿರ ಹೀಗೆ ಕಾಣಿಸಲಿದೆ..


    ಇನ್ನು ಮಹಾಭಾರತದ ಕಾಲಕ್ಕೆ ಬಂದರೆ, ಕೃಷ್ಣವತಾರ ಕಾಲದಲ್ಲಿ ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟಿದ ಎಂಬ ಮಹಾಭಾರತದ ಕಥೆಯಿದೆ. ಕೃಷ್ಣ ಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪಂಚಪ್ರಾಣ. ನೆಲದ ಮೇಲೆ ಬಿದ್ದರೂ ದೇವರಿಗೆ ಅರ್ಪಿಸಬಹುದಾದ ಏಕೈಕ ಹೂವು ಇದಾಗಿದೆ.

    ಈ ವೃಕ್ಷವನ್ನು ಇಂದು ಪ್ರಧಾನಿ ಮೋದಿಯವರು ರಾಮನ ಭಕ್ತ ಆಂಜನೇಯನಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ನೆಡಲಿದ್ದಾರೆ. ನಂತರವಷ್ಟೇ ರಾಮಮಂದಿರ ಭೂಮಿ ಪೂಜೆ ನೆರವೇರಲಿದೆ.

    ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts