More

    ಪ್ರಧಾನಿ ಸ್ವೀಕರಿಸಿದ ಉಡುಗೊರೆಗಳು ಇ-ಹರಾಜು: ‘ನಯಾಮಿ ಗಂಗೆ’ಗೆ ಕೈಜೋಡಿಸಲು ಒಳ್ಳೆಯ ಅವಕಾಶ

    ನವದೆಹಲಿ: ಇಂದು (ಸೆ.17) ಪ್ರಧಾನಿ ನರೇಂದ್ರೆ ಮೋದಿಯವರ ಜನುಮದಿನ. ಇದಕ್ಕಾಗಿ ಇದಾಗಲೇ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿಯವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು ‘ನಯಾಮಿ ಗಂಗೆ’ ಯೋಜನೆ. ಗಂಗಾ ನಂದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ಅಭಿಯಾನವಿದು. ಈ ಅಭಿಯಾನಕ್ಕೆ ಅಗತ್ಯವಿರುವ ಹಣಕ್ಕಾಗಿ ಮೋದಿ ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಇಂದಿನಿಂದ ಸಂಸ್ಕೃತಿ ಸಚಿವಾಲಯ ಇ-ಹರಾಜು ಮಾಡಲಿದೆ.

    ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು ಮತ್ತು ಉಪಕರಣಗಳು, ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್, ರುದ್ರಾಕ್ಷ್ ಸಮಾವೇಶ ಕೇಂದ್ರದ ಪ್ರತಿರೂಪಗಳು, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರ ಮೊದಲಾದವುಗಳು ಸೇರಿವೆ.

    ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಈ ಹರಾಜು ಪ್ರಕ್ರಿಯೆ ಆಯೋಜಿಸಿದೆ. 7ನೇ ಅಕ್ಟೋಬರ್‌ ವರೆಗೆ ಈ ಪ್ರಕ್ರಿಯೆ ನಡೆಯಲಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದರಲ್ಲಿ ಭಾಗವಹಿಸಬಹುದು.
    ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ಪಡೆಯಲು https://pmmementos.gov.in ವೆಬ್‌ಸೈಟ್‌ಗೆ ಭೇಟಿ ಕೊಡಬೇಕು. ಇಲ್ಲಿರುವ ನಿಯಮ ಅನುಸರಿಸುವ ಮೂಲಕ ‘ನಯಾಮಿ ಗಂಗೆ’ ಅಭಿಯಾನಕ್ಕೆ ನೀವೂ ಕೈಜೋಡಿಸಬಹುದು.

    ಜನನಾಯಕನ ಜನ್ಮದಿನ; ಬಿಜೆಪಿಯಿಂದ ದೇಶಾದ್ಯಂತ ಏಳು ದಿನ ಕಾರ್ಯಕ್ರಮ

    ಎಪ್ಪತ್ತೊಂದು ಸಾರ್ಥಕ ವಸಂತ, ದೇಶಸೇವೆ ಅವಿರತ | ಮೋದಿ@71

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts