More

    ಶಾಸಕ ಬೆಲ್ಲದ್‌ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌! ಇದೇ ಕೇಸ್‌ ಆರೋಪಿಗೇ ತನಿಖೆ ಜವಾಬ್ದಾರಿ!

    ಬೆಂಗಳೂರು: ರಾಜ್ಯ ಸರ್ಕಾರದ ಕೂತುಹಲಕಾರಿ ಬೆಳವಣಿಯಲ್ಲಿ ಹೆಸರು ಕೇಳಿ ಬಂದಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್​ ನೀಡಿರುವ ಅನಾಮಧೇಯ ಕರೆಗಳ ಮತ್ತು ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕೊಂಡಿದೆ.

    ಕೇಂದ್ರ ವಿಭಾಗ ಡಿಸಿಪಿ ಎಂ.ಎನ್​.ಅನುಚೇತ್​ ನೇತೃತ್ವದಲ್ಲಿ ಕಬ್ಬನ್​ ಪಾರ್ಕ್​ ಉಪ ವಿಭಾಗ ಎಸಿಪಿ ಯತಿರಾಜ್​ಗೆ ತನಿಖೆ ಜವಾಬ್ದಾರಿ ವಹಿಸಿದ್ದಾರೆ. ಆದರೆ, ಜೆಡಿಎಸ್​ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇಶ ವ್ಯಾಪಿ ಸದ್ದು ಮಾಡಿದ್ದ ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಎಸಿಪಿ ಯತಿರಾಜ್​, ಸಿಬಿಐ ತನಿಖೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಸರ್ಕಾರದ ವಿರುದ್ಧ ಕೇಳಿಬಂದಿರುವ ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಅದೇ ಎಸಿಪಿಗೆ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

    ಶಾಸಕ ಅರವಿಂದ್​ ಬೆಲ್ಲದ್​, ಇತ್ತೀಚೆಗೆ ಡಿಜಿಪಿ ಪ್ರವಿಣ್​ ಸೂದ್​ ಅವರನ್ನು ಭೇಟಿ ಮಾಡಿ ಅಪರಿಚಿತರು ಕರೆ ಮಾಡುತ್ತಿದ್ದಾರೆ. ಮೂರ್ನಾಲ್ಕು ಕರೆಗಳು ಬಂದಾಗ ಫೋನ್​ ಕದ್ದಾಲಿಕೆ ಆಗುತ್ತಿರುವ ಅನುಮಾನ ಹುಟ್ಟುಕೊಂಡಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ಈ ದೂರಿನ ಪ್ರತಿಯನ್ನು ಡಿಜಿಪಿ ಪ್ರವಿಣ್​ ಸೂದ್​, ವರ್ಗಾವಣೆ ಮಾಡಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲು ಕಬ್ಬನ್​ ಪಾರ್ಕ್​ ಉಪವಿಭಾಗ ಎಸಿಪಿ ಯತಿರಾಜ್​ಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ತಿಳಿಸಿದ್ದಾರೆ.

    ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕಮಲ್​ ಪಂತ್​, ಶಾಸಕ ಅರವಿಂದ್​ ಬೆಲ್ಲದ್​ ಅವರ ಪತ್ರದಲ್ಲಿ ಅಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಬೇಕಾಗಿದೆ. ಅದಕ್ಕಾಗಿ ಅವರ ಭೇಟಿಗೆ ಎಸಿಪಿ ಯತಿರಾಜ್​ ಪ್ರಯತ್ನ ಪಡುತ್ತಿದ್ದಾರೆ. ಕೂಲಂಕುಷವಾಗಿ ಶಾಸಕರಿಂದ ಹೇಳಿಕೆ ಪಡೆದ ಮೇಲೆ ಯಾವ ಆಯಾಮದಲ್ಲಿ ತನಿಖೆ ನಡೆಸಬೇಕೆಂಬುದು ನಿರ್ಧರ ಮಾಡಲಾಗುತ್ತದೆ ಎಂದು ಕಮಲ್​ ಪಂತ್​ ತಿಳಿಸಿದ್ದಾರೆ.

    ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ

    ಇಬ್ಬರನ್ನು ಒಟ್ಟಿಗೇ ಲವ್‌ ಮಾಡಿದಾತನಿಗೆ ಡಬಲ್‌ ಧಮಾಕಾ- ಅತ್ತ ಒಬ್ಬಳು, ಇತ್ತ ಇನ್ನೊಬ್ಬಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts