More

    ಗೋಳು ತೋಡಿಕೊಳ್ಳಲು ಹೋದ ಪಾಲಕರಿಗೆ, ‘ಏನಾದ್ರೂ ಮಾಡ್ಕೊಂಡ್‌ ಹೋಗ್‌ ಸಾಯ್ರಿ’ ಎಂದ ಸಚಿವ!

    ಭೋಪಾಲ್: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇಲ್ಲದಿದ್ದರೂ ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿರುವುದಾಗಿ ಕೆಲವು ಪಾಲಕರು ದೂರು ಸಲ್ಲಿಸಲು ಹೋದ ಸಮಯದಲ್ಲಿ ಸಚಿವರು ಕೆಟ್ಟ ಶಬ್ದಗಳಲ್ಲಿ ನಿಂದನೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

    80-100 ಮಂದಿ ಪೋಷಕರು ಭೋಪಾಲ್‌ನಲ್ಲಿ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ನಿವಾಸಕ್ಕೆ ಹೋಗಿ ತಮ್ಮ ಸಂಕಟ ಹೇಳಿಕೊಳ್ಳಲು ಹೋದ ಸಮಯದಲ್ಲಿ ಈ ಘಟನೆ ನಡೆದಿದ್ದು, ಸಚಿವರು ಹೇಳಿರುವ ಮಾತು ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

    ’ಏನಾದ್ರೂ ಮಾಡಿಕೊಂಡು ಹೋಗಿ ಸಾಯ್ರಿ’ ಎಂದು ಸಚಿವರು ಹೇಳಿರುವ ಮಾತು ಇದಾಗಿದೆ. ಹೆಚ್ಚು ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶವನ್ನೂ ಮೀರಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ನಾವು ಏನು ಮಾಡಬೇಕು ಎಂದು ಕೆಲವು ಪಾಲಕರು ಅಳಲು ತೋಡಿಕೊಳ್ಳುತ್ತಿದ್ದ ವೇಳೆ ಎಲ್ಲಾದ್ರೂ ಹೋಗಿ, ಏನಾದ್ರೂ ಮಾಡ್ಕೋಳಿ, ಎಲ್ಲಾದ್ರೂ ಹೋಗಿ ಸಾಯಿರಿ’ ಎಂದು ಸಚಿವರು ತರಾಟೆಗೆ ತೆಗೆದುಕೊಂಡಿರುವುದು ಈ ವಿಡಿಯೋದಲ್ಲಿ ಕೇಳಬಹುದಾಗಿದೆ.

    ಶಿಕ್ಷಣ ಸಚಿವರಾದವರು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ, ಈ ರೀತಿ ಉಡಾಫೆಯಾಗಿ ಮಾತನಾಡಿದ್ದು ಸರಿಯಲ್ಲ ಎಂದು ಪೋಷಕರು ಅವರ ಮನೆ ಮುಂದೆಯೇ ಧರಣಿ ಕುಳಿತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದು, ಜಾಲತಾಣದಲ್ಲಿಯೂ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts