More

    ಮೆಸ್ಕಾಂನಲ್ಲಿ ಡಿಪ್ಲೊಮಾ, ಪದವೀಧರರಿಂದ 200 ಅಪ್ರೆಂಟೀಸ್​ಗಳಿಗೆ ಆಹ್ವಾನ

    ರಾಜ್ಯ ಸರ್ಕಾರದ ಅಧೀನದಲ್ಲಿರುವ ಮಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತದಲ್ಲಿ (ಮೆಸ್ಕಾಂ) 1973ರ ಅಪ್ರೆಂಟೀಸ್​ ನಿಯಮದನ್ವಯ 200 ಅಪ್ರೆಂಟೀಸ್​ಗಳಿಗೆ ಉದ್ಯೋಗ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಈ ತರಬೇತಿಯು ಒಂದು ವರ್ಷದ ಅವಧಿ ಹೊಂದಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸ್ಟೈಪೆಂಡ್​ ನೀಡಲಾಗುವುದು.

    * ಗ್ರಾಜುಯೇಟ್​ ಅಪ್ರೆಂಟೀಸ್​ – 125
    * ಡಿಪ್ಲೊಮಾ ಅಪ್ರೆಂಟೀಸ್​ – 75

    ಅರ್ಹತೆಗಳೇನು?: ಮಾನ್ಯತೆ ಪಡೆದ ಕಾಲೇಜು/ ವಿಶ್ವವಿದ್ಯಾಲಯ/ ಸಂಸ್ಥೆಯಲ್ಲಿ ಇಂಜಿನಿಯರಿಂಗ್​ ಅಥವಾ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಹಾಗೂ ಪದವಿಯನ್ನು 2019, 2020 ಮತ್ತು 2021ನೇ ಶೈಕ್ಷಣಿಕ ವರ್ಷದಲ್ಲಿ ಪಡೆದಿರಬೇಕು. ಅಪ್ರೆಂಟೀಸ್​ಶಿಪ್​ ನಿಯಮದನ್ವಯ ವಯೋಮಿತಿ ಹಾಗೂ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೊದಲು ಯಾವುದೇ ತರಬೇತಿ ಪಡೆದಿರಬಾರದು ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಹೊಂದಿರಬಾರದು ಎಮದು ಷರತ್ತು ವಿಧಿಸಲಾಗಿದೆ.

    ಸ್ಟೆ$ಪೆಂಡ್​: ಡಿಪ್ಲೊಮಾ ಅಪ್ರೆಂಟೀಸ್​ಗೆ ಮಾಸಿಕ 5,000 ರೂ. ಹಾಗೂ ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಮಾಸಿಕ 7.000 ರೂ. ಗೌರವಧನ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಮೆಸ್ಕಾಂ ಕೇಂದ್ರ ಕಚೇರಿ ಹೊಂದಿರುವ ಮಂಗಳೂರಿಗೆ ಆಹ್ವಾನಿಸಲಾಗುವುದು. ದಾಖಲೆ ಪರಿಶೀಲನೆಗೆ ಆಗಮಿಸುವ ಅಭ್ಯರ್ಥಿಗಳಿಗೆ ಟಿಎ/ಡಿಎ/ ವಸತಿ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನ್ಯಾಷನಲ್​ ವೆಬ್​ ಪೋರ್ಟಲ್​ನಲ್ಲಿ ನೋಂದಾಯಿತರಾಗಿರಬೇಕು.

    ಸೂಚನೆ: ಆಯ್ದ ಅಭ್ಯರ್ಥಿಗಳ ಮಾಹಿತಿ ಹಾಗೂ ದಾಖಲೆ ಪರಿಶೀಲನೆಯ ದಿನಾಂಕದ ಮಾಹಿತಿಯನ್ನು http://boat-srp.com/ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ಸೆ.14ರಂದು ಪ್ರಕಟಿಸಲಾಗುವುದು. ದಾಖಲೆ ಪರಿಶೀಲನೆಯು Mangalore Electricity Supply Company Limited (MESCOM), HRD Center, Near Gopalakrishna temple, Shakthinagara, Mangaluru-575016 ವಿಳಾಸದಲ್ಲಿ ಸೆ.21 ರಿಂದ 23ರ ನಡುವೆ ನಡೆಸಬಹುದಾಗಿದ್ದು, ಸೂಕ್ತ ಮಾಹಿತಿಗಾಗಿ ಆಗಾಗ ವೆಬ್​ಸೈಟ್​ ಗಮನಿಸಲು ಸೂಚಿಸಲಾಗಿದೆ.

    ಎನ್​ಎಟಿಎಸ್​ ಪೋರ್ಟಲ್​ನಲ್ಲಿ ನೋಂದಾಯಿತರಾಗಲು ಕೊನೇ ದಿನ: 5.9.2021
    ಅರ್ಜಿ ಸಲ್ಲಿಕೆ ಆರಂಭ: 19.08.2021
    ಅರ್ಜಿ ಸಲ್ಲಿಸಲು ಕೊನೇ ದಿನ: 9.9.2021

    ಅಧಿಸೂಚನೆಗೆ: https://bit.ly/2W2e82J
    ಮಾಹಿತಿಗೆ: http://mescom.karnataka.gov.in

    ಎಸ್​ಜೆವಿಎನ್​ನಲ್ಲಿ 129 ಫೀಲ್ಡ್ ಆಫೀಸರ್ ಹುದ್ದೆಗೆ ಆಹ್ವಾನ: ವಿದೇಶದಲ್ಲಿಯೂ ಅವಕಾಶ

    ಡಿಪ್ಲೋಮಾ ಪದವೀಧರರಿಗೆ ಇಂಡಿಯನ್ ಆಯಿಲ್‍ನಲ್ಲಿ ನೇಮಕ: 480 ಹುದ್ದೆಗಳಿಗೆ ಅಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts