More

    ಮಸೀದಿ ಉದ್ಘಾಟನೆಗೆ ಕರೆದರೆ ಹೋಗುವಿರಾ? ಸಿಎಂ ಯೋಗಿ ಉತ್ತರ ಹೀಗಿದೆ ನೋಡಿ…

    ಅಯೋಧ್ಯೆ: ಆಗಸ್ಟ್‌ 5ರಂದು ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆ ನೆರವೇರುವ ಮೂಲಕ ಮಂದಿರ ಕಟ್ಟುವ ಬಹುಜನರ ಶತಶತಮಾನಗಳ ಕನಸನ್ನು ಈಡೇರಿದೆ. ಇದರ ಬೆನ್ನಲ್ಲೇ ಇದೀಗ ಅಯೋಧ್ಯೆಯಲ್ಲಿ ಮಸೀದಿ ಕಟ್ಟುವ ಮಾತುಗಳು ಕೇಳಿಬಂದಿವೆ.

    ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಮೀನು ಮೀಸಲು ಇಡುವಂತೆ ಸುಪ್ರೀಂಕೋರ್ಟ್‌ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ, ಆ ಜಾಗದಲ್ಲಿ ಮಸೀದಿ ನಿರ್ಮಾಣವಾಗಬಹುದು ಎಂದು ಅಂದಾಜಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಜತೆಗಿದ್ದ ಸಿಎಂ ಯೋಗಿ ಆದಿತ್ಯನಾಥ್‌, ಸಂಪೂರ್ಣ ಧಾರ್ಮಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಇದೇ ಸಂಬಂಧವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮಾಧ್ಯಮದವರಿಂದ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದ ನಿಮಗೊಮ್ಮೆ ಮಸೀದಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಹ್ವಾನವಿತ್ತರೆ ಹೋಗುವಿರಾ? ಎಂದು.

    ಅದಕ್ಕೆ ಯೋಗಿ ಆದಿತ್ಯನಾಥ ಅವರು, ಮುಖ್ಯಮಂತ್ರಿಯಾಗಿ ನಾನು ಯಾವುದೇ ಧರ್ಮ, ಜಾತಿಗೂ ಭೇದ ಭಾವ ಎಸಗುವುದಿಲ್ಲ. ಎಲ್ಲರೂ ಸಮಾನರು. ಆದರೆ ಒಬ್ಬ ಯೋಗಿಯಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ.”ಒಬ್ಬ ಹಿಂದೂವಾಗಿ ನನ್ನ ಹಕ್ಕಿನಂತೆ ಪೂಜೆ ಮಾಡುವ ಅಧಿಕಾರ ನನಗಿದೆ’ ಎಂದಿದ್ದಾರೆ.

    ಇದನ್ನೂ ಓದಿ: ರಾಮಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವೆವು- ಮುಸ್ಲಿಂ ಸಂಘದ ಟ್ವೀಟ್‌

    ಅಷ್ಟಕ್ಕೂ ನನಗೆ ಆ ಕಾರ್ಯಕ್ರಮಕ್ಕೆ ಯಾರೂ ಕರೆಯುವುದಿಲ್ಲ ಎಂದು ಗೊತ್ತಿದೆ, ಯಾವುದೇ ಆಮಂತ್ರಣವೂ ನನಗೆ ಬರುವುದಿಲ್ಲ ಎಂಬುದೂ ಚೆನ್ನಾಗಿ ತಿಳಿದಿದೆ. ಓರ್ವ ರಾಜಕೀಯ ಪ್ರೇರಿತ ನಾಯಕ ಟೋಪಿ ಧರಿಸಿ, ರೋಝಾ- ಇಫ್ತಾರ್ ಆಯೋಜಿಸಿದರೆ ಅದು ಜಾತ್ಯಾತೀತತೆಯಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದೂ ಹೇಳಿದ್ದಾರೆ.

    ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಮೊಟ್ಟಮೊದಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಇಕ್ಬಾಲ್‌ ಅನ್ಸಾರಿ ಅವರಿಗೆ ಭೂಮಿಪೂಜೆಯ ಮೊದಲ ಆಮಂತ್ರಣ ನೀಡಲಾಗಿತ್ತು. ಆಮಂತ್ರಣವನ್ನು ಸ್ವೀಕರಿಸಿದ ಅವರು ‘ಎಲ್ಲ ರಾಮನ ಇಚ್ಛೆ’ ಎಂದು ಹೇಳಿ ಕಾರ್ಯಕ್ರಮಕ್ಕೆ ಬಂದಿದ್ದು. ಈ ಕುರಿತು ಯೋಗಿಯವರಿಗೆ ಪ್ರಶ್ನೆಯೊಂದು ಎದುರಾಯಿತು.

    ಅದಕ್ಕೆ ಉತ್ತರಿಸಿದ ಅವರು, “ಇಕ್ಬಾಲ್‌ ಅನ್ಸಾರಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದಕ್ಕೆ ಧನ್ಯವಾದಗಳು. ಅವರಿಂದ ಇತರರು ಪಾಲಿಸುವ ವಿಚಾರ ಅನೇಕವಿದೆ. ರಾಮಜನ್ಮ ಸ್ಥಳ ಪ್ರಕರಣದ ಸಂಬಂಧ ಕೋರ್ಟ್‌ ಮೆಟ್ಟಿಲೇರಿ ಹೋರಾಟ ನಡೆಸಿದ್ದರು. ಅವರಿಗೆ ಅಯೋಧ್ಯೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಬಿಂಬವಾಗಿದೆ” ಎಂದರು.

    ಹಿಂದೂ ವ್ಯಕ್ತಿಯೊಬ್ಬ ಪಾಕಿಸ್ತಾನ ಅಥವಾ ಆಪ್ಘಾನಿಸ್ತಾನದಲ್ಲಿ ದೇವಾಲಯ ಸಂಬಂಧ ಹೋರಾಟ ನಡೆಸಿದ್ದರೆ ಸುರಕ್ಷಿತವಾಗಿರುತ್ತಿದ್ದನಾ? ಎಂದು ಅವರು ಪ್ರಶ್ನಿಸಿದ್ದಾರೆ.

    ಚಿನ್ನದ ಸ್ಮಗ್ಲರ್‌ ಸ್ವಪ್ನಂಗೂ – ಕೇರಳ ಸಿಎಂಗೂ ಹತ್ತಿರದ ನಂಟು: ತನಿಖೆಯಿಂದ ಬಯಲಾಯ್ತು ಸತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts