More

    ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ

    ತಿರುವನಂತಪುರ: ಅತ್ತ ಕೇರಳ, ಇತ್ತ ತಮಿಳುನಾಡು. ನಡುವೆ ಇದೆ ಈ ಸೇತುವೆ. ಇಲ್ಲೀಗ ದಿನವೂ ನಡೀತಿದೆ ಮದುವೆ. ಎರಡೂ ರಾಜ್ಯಗಳ ಮದುಮಕ್ಕಳಿಗೀಗ ಈ ಸೇತುವೆ ವಿವಾಹದ ಹಾಟ್‌ಸ್ಪಾಟ್‌ ಆಗಿದೆ. ಇದರ ಹೆಸರು ಚಿನಾರ್‌.

    ಅಷ್ಟಕ್ಕೂ ಚಿನಾರ್‌ಗೆ ಈ ಪರಿಯಲ್ಲಿ ಡಿಮಾಂಡ್‌ ಬರಲು ಕಾರಣವೂ ಕುತೂಹಲವೇ ಆಗಿದೆ. ಆಗಿರುವುದು ಏನೆಂದರೆ ಸಾಮಾನ್ಯವಾಗಿ ತಮಿಳುನಾಡಿನ ಮತ್ತು ಕೇರಳದ ನಡುವೆ ಸಂಬಂಧಗಳು ಕುದುರುತ್ತಿವೆ. ಇಂಥ ಸಂದರ್ಭದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮದುಮಕ್ಕಳ ಕುಟುಂಬಸ್ಥರು ಹೋಗುವಾಗ ಕರೊನಾ ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ. ಅದರಲ್ಲಿಯೂ ಕೇರಳದಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

    ಇದೇ ಮದುಮಕ್ಕಳ ಕುಟುಂಬಸ್ಥರಿಗೆ ದೊಡ್ಡ ತಲೆನೋವಾಗಿದೆ. ನೆಗೆಟಿವ್ ವರದಿ ಪಡೆಯಲು ಸಮಯ ಬೇಕು ಮಾತ್ರವಲ್ಲದೇ, ಸಾಕಷ್ಟು ಹಣವನ್ನೂ ವ್ಯಯ ಮಾಡಬೇಕು. ಕೆಲವು ಕಡೆಗಳಲ್ಲಿ ದುಪ್ಪಟ್ಟು ಹಣ ವಸೂಲು ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಸಮಸ್ಯೆಯೇ ಬೇಡವೆಂದು ಎರಡೂ ರಾಜ್ಯಗಳ ಕೊಂಡಿಯಾಗಿರುವ ಈ ಸೇತುವೆ ಮೇಲೆ ಮದುವೆಗಳನ್ನು ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇಲ್ಲಿ 11 ಮದುವೆಗಳಾಗಿವೆ.

    ಕೇರಳದ ಇಡುಕ್ಕಿಯ ಮರಯೂರಿನ ಉನ್ನಿಕೃಷ್ಣ ಮತ್ತು ತಮಿಳುನಾಡಿನ ದಿಂಡಿಗುಲ್ ಬತ್ಲಗುಂಡು ಮೂಲದ ವಧು ತಂಗಮಾಯಿಲ್ ಮದುವೆಯಾಗಿದ್ದು, ಅವರ ಪಾಲಕರು ಈ ಮದುವೆ ಕುರಿತು ಮಾಹಿತಿ ನೀಡಿದ್ದು ಹೀಗೆ- ನಮಗೆ ಕರೊನಾ ನೆಗೆಟಿವ್‌ ಟೆಸ್ಟ್‌ ಮಾಡಿಸಲು ಪ್ರತಿಯೊಬ್ಬರಿಗೆ 2,600 ರೂಪಾಯಿ ಕೇಳಿದರು. ನಾವು 10 ಮಂದಿ ಮದುವೆಗೆ ಹೋಗುವವರಿದ್ದೆವು. 26 ಸಾವಿರ ರೂಪಾಯಿ ಕೊಡಬೇಕಿತ್ತು. ಇದು ಒಂದೆಡೆಯಾದರೆ ವರನ ಕಡೆಯವರು ಖಾಸಗಿ ಲ್ಯಾಬ್‍ಗಳಿಗೆ ಹೋಗಬೇಕಿತ್ತು. ಇದಕ್ಕೆ ಟೈಂ ಕೂಡ ಆಗುತ್ತಿತ್ತು. ಕೆಲವು ಕುಟುಂಬಗಳಲ್ಲಿ ವರನ ಮನೆಯ ನೆಗೆಟಿವ್ ಪರೀಕ್ಷೆ ಖರ್ಚನ್ನೂ ಹೆಣ್ಣಿನ ಮನೆಯವರೇ ಭರಿಸಬೇಕು. ಇವೆಲ್ಲಾ ತೊಂದರೆ ಬೇಡವೆಂದು ಸೇತುವೆ ಮೇಲೆ ಮದುವೆ ಮಾಡಲು ಎಲ್ಲರೂ ನಿರ್ಧರಿಸುತ್ತಿದ್ದಾರೆ.

    ಅಂದ ಹಾಗೆ ಈ ಮದುವೆಯಲ್ಲಿ ವಧು ಮತ್ತು ವರ ಇಬ್ಬರು ಮಾತ್ರ ನೆಗೆಟಿವ್‌ ವರದಿ ತಂದಿದ್ದಾರೆ. ಸೇತುವೆ ಮೇಲೆ ಹಾರ ಬದಲಿಸಿಕೊಂಡಿದ್ದಾರೆ. ತಾಳಿ ಕಟ್ಟುವಾಗ ಎರಡೂ ಕುಟುಂಬಗಳು ಸೇತುವೆಯ ಎರಡೂ ಬದಿಯಲ್ಲಿ ನಿಂತು ಆಶೀರ್ವದಿಸಿದ್ದಾರೆ. ಸರಳವಾಗಿ ನಡೆದ ಈ ವಿವಾಹದಲ್ಲಿ ಎರಡೂ ರಾಜ್ಯಗಳ ಪೊಲೀಸ್, ಆರೋಗ್ಯ ಇಲಾಖೆ. ಅರಣ್ಯ ಇಲಾಖೆ ಅಧಿಕಾರಿಗಳು ಮದುವೆಗೆ ಬಂದಿದ್ದರು.

    ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್‌ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…

    ಕೂಲ್‌ಡ್ರಿಂಗ್ಸ್‌ ಬಾಟಲಿಯ ಮುಚ್ಚಳ ಜೇನ್ನೊಣ ತೆಗೆಯುವುದನ್ನು ಕಂಡಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

    ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡಲು ಪುರುಷರ ಹಿಂದೇಟು: ಹೆಣ್ಣುಮಕ್ಕಳಿಂದಲೇ ವಿಧಿವಿಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts