More

    ಗೃಹ‍ಪ್ರವೇಶದ ಫೋಟೋ ಕ್ಯಾಮೆರಾದ ಒಳಗಿತ್ತು- ಒಳಗಿರಬೇಕಿದ್ದ ರೀಲು ಕಪಾಟಿನಲ್ಲಿ ತಣ್ಣಗೇ ಕುಳಿತಿತ್ತು!

    ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….

    | ಪುಷ್ಪಾ ಹಾಲಭಾವಿ, ಧಾರವಾಡ

    1985ರಲ್ಲಿ ಮನೆ ಕಟ್ಟಲು ಪ್ರಾರಂಭ ಮಾಡಿದೆವು. ಬ್ಯಾಂಕ್​ ಲೋನ್​ನಲ್ಲಿ ಮನೆ ಮುಗಿಯಬಹುದು ಅಂದುಕೊಂಡ ನಮಗೆ ಮನೆ ಕಟ್ಟುವ ವೆಚ್ಚ ಹೆಚ್ಚಾಗಿ ನಮ್ಮ ಮನೆಯವರ ಅತ್ಯಂತ ಪ್ರೀತಿಯ ಅಂದಿನ ಪ್ರತಿಷ್ಠಿತ ಯೆಜ್ಡಿ ಬೈಕನ್ನು ಮಾರಿ ದುಡ್ಡು ಹೊಂದಿಸಬೇಕಾಯಿತು.

    ನಂತರ ಒಂದು ವರ್ಷದಲ್ಲಿ ಮನೆ ತಯಾರಾದಾಗ ನಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡುವ ತಯಾರಿ ಪ್ರಾರಂಭವಾಯಿತು. ಗೃಹಪ್ರವೇಶಕ್ಕೆ ಇನ್ನೊಂದು ವಾರವಿದ್ದಾಗ ನನ್ನ ಇಬ್ಬರೂ ಮಕ್ಕಳಿಗೆ ಜ್ವರ, ಅಮ್ಮ (ಚಿಕನ್​ಪಾಕ್ಸ್​) ಬಂದು, ಸುಸ್ತಾದ ಮಕ್ಕಳನ್ನು ಸಂಭಾಳಿಸುವುದರಲ್ಲಿ ನಾನೂ ಸುಸ್ತು. ಬೆಳಗ್ಗೆ ಐದು ಗಂಟೆಯ ಮುಹೂರ್ತದಲ್ಲಿ ಕಾಮಧೇನುವಿನ ಪ್ರವೇಶ ಮಾಡಿಸಿ ನಾವೆಲ್ಲರೂ ಮನೆಯೊಳಗೆ ಅಡಿ ಇಟ್ಟೆವು. ಅಂತೂ ಎಲ್ಲವೂ ಆಯ್ತಪ್ಪಾ ಎಂದು ಉಸಿರುಬಿಟ್ಟೆವು.

    ನಮ್ಮ ಮನೆಯವರು ಸಿಂಗಪುರಕ್ಕೆ ಹೋದಾಗ ತಂದಿದ್ದ ಕ್ಯಾಮೆರಾವನ್ನು ಮೈದುನರಿಬ್ಬರ ಕೈಗಿಟ್ಟು ಸಮಾರಂಭದ ಫೋಟೋ ತೆಗೆಯುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಫೋಟೋ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಕಾರ್ಯಕ್ರಮ ಮುಗಿದ ಮೇಲೆ ಕ್ಯಾಮೆರಾದಲ್ಲಿನ ರೀಲ್​ ತೊಳೆಯಲು ಕೊಡಬೇಕಲ್ಲ. ಕ್ಯಾಮೆರಾ ಓಪನ್​ ಮಾಡಿದರೆ ರೀಲೇ ಇಲ್ಲ! ಇನ್ನೆಲ್ಲಿತ್ತು ಅಂತೀರಾ? ಕಪಾಟಿನೊಳಗೆ ತಣ್ಣಗೇ ಕುಳಿತಿತ್ತು! ಅಂತೂ ಗೃಹಪ್ರವೇಶದ ಫೋಟೋ ಇಲ್ಲದೇ ಎಲ್ಲರೂ ಕಣ್​ಕಣ್​ ಬಿಡುವಂತಾಯಿತು.

    ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!

    ನಮ್ಮನೇ ಹೀಗೀಗೇ ಇರ್ಬೇಕು ಅಂದ್ಕೊಂಡಿದ್ದೆ.. ಮುಗಿಯೋದ್ರೊಳ್ಗೆ ಹೇಗಾದ್ರೂ ಇರ್ಲಪ್ಪ ಅನ್ನೋ ಹಾಗಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts