More

    ನಮ್ಮನೇ ಹೀಗೀಗೇ ಇರ್ಬೇಕು ಅಂದ್ಕೊಂಡಿದ್ದೆ.. ಮುಗಿಯೋದ್ರೊಳ್ಗೆ ಹೇಗಾದ್ರೂ ಇರ್ಲಪ್ಪ ಅನ್ನೋ ಹಾಗಾಯ್ತು!

    ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….

    | ಮಂಜುಳಾ ನಾರಾಯಣಸ್ವಾಮಿ, ಸಾಗರ

    ಚಿಕ್ಕಂದಿನಿಂದಲೂ ನಮ್ಮ ಮನೆ ಹೀಗಿರ್ಬೇಕು, ಹಾಗಿರ್ಬೇಕು ಅಂತ ಕನಸು ಕಂಡವಳು ನಾನು. ಮದುವೆಯಾಗಿ ಹಳ್ಳಿ ಮನೆ ಸೇರಿದೆ. ಅಷ್ಟೊತ್ತಿಗಾಗಲೇ ಮನೆಯ ಹಿಸ್ಸೆಯಾಯಿತು. ನಮ್ಮ ಯಜಮಾನರಿಗೆ ಉದ್ಯೋಗವಿದೆ ಎಂದು ಮನೆ ಬಾಬ್ತು ಬರೀ 75 ಸಾವಿರ ರೂ. ನೀಡಿ ಹಿರಿಯರು ಕೈತೊಳೆದುಕೊಂಡು ಬಿಟ್ಟರು. ಇವರೋ ಮಹಾ ಉದಾರಿ, ಬಂದದ್ದಷ್ಟೇ ಪಡೆದರು, ಕೊನೆಗೆ ಅಷ್ಟೇ ಕಾಸು ಹಿಡಿದು ಸಾಗರ ಪೇಟೆ ಸೇರಿ ಬಾಡಿಗೆ ಮನೆ ಹಿಡಿದಿದ್ದಾಯಿತು. ಅಲ್ಲೊಂದು ನಿವೇಶನವಿತ್ತು. ಅಲ್ಲಿಯೇ ಕನಸಿನ ಮನೆ ಕಟ್ಟಬೇಕು ಎಂದುಕೊಂಡರೆ ಗ್ರಹಚಾರ ನೋಡಿ…

    ನಮ್ಮನೇ ಹೀಗೀಗೇ ಇರ್ಬೇಕು ಅಂದ್ಕೊಂಡಿದ್ದೆ.. ಮುಗಿಯೋದ್ರೊಳ್ಗೆ ಹೇಗಾದ್ರೂ ಇರ್ಲಪ್ಪ ಅನ್ನೋ ಹಾಗಾಯ್ತು!ಬಂಧುವೊಬ್ಬರು ಮೋಸ ಮಾಡಿ ಅದನ್ನು ತಮ್ಮದಾಗಿಸಿಕೊಂಡು ಬಿಟ್ಟಿದ್ದರು! ಆಘಾತದ ಮೇಲೆ ಆಘಾತ. ಮನೆಯವರ ಸೌಮ್ಯ ಸ್ವಭಾವದ ಮೇಲೆ ಕೋಪ ಮಾಡಿಕೊಂಡು ಮಾತನಾಡಬಾರದ್ದೆಲ್ಲಾ ಮಾತಾಡಿಬಿಟ್ಟೆ. ಅದಕ್ಕೂ ಅವರದ್ದು ದಿವ್ಯ ಮೌನ. ಆದರೆ ಅವರ ಒಳ್ಳೆತನ ನಮ್ಮ ಕೈಬಿಡಲಿಲ್ಲ. ಒಳ್ಳೆಯ ಬಡಾವಣೆಯಲ್ಲಿ ನಿವೇಶನ ಸಿಕ್ಕಿತು. ಕೈಯಲ್ಲಿ ಕಾಸಿದ್ದುದು ಅಷ್ಟಕ್ಕಷ್ಟೇ.

    ಮನೆ ಹೀಗಿರಬೇಕು, ಹಾಗಿರಬೇಕು ಎಂದುಕೊಂಡ ನಾನು ಮನೆ ಹೇಗಾದರೂ ಇರಲಪ್ಪ, ಒಟ್ಟಿನಲ್ಲಿ ಮುಗಿಯಲಿ ಅನ್ನುವ ಹಾಗಾಯ್ತು. ಕೆಲವು ಆತ್ಮೀಯರು ಮನೆ ಕಟ್ಟುವಾಗಲೇ ಬಂದು ನೋಡಿ ಖುಷಿ ಪಟ್ಟರು, ಇನ್ನು ಕೆಲವರು ಏನೋ ಮನೆ ಕಟ್ತಾ ಇದ್ದಾನಂತೆ ಎಂದರು, ಎಲ್ಲಿ ದುಡ್ಡು ಕೇಳುತ್ತಾರೋ ಎಂದು ಹತ್ತಿರದ ಬಂಧುಗಳು ಮನೆ ಪೂತಿರ್ಯಾಗುವವರೆಗೆ ಈ ಕಡೆ ತಲೆ ಹಾಕದೆ ಮೌನವ್ರತ ಆಚರಿಸಿದ್ದೂ ಆಯ್ತು. ಅಂತೂ ಕನಸಿನ ಸೂರು ತಲೆ ಎತ್ತಿತು. ಗೃಹಪ್ರವೇಶದ ದಿನ ಬಂದವರೆಲ್ಲರೂ “ಆಡಂಬರವಿಲ್ಲದ ಅಚ್ಚುಕಟ್ಟಾದ ಮನೆ ತುಂಬಾ ಇಷ್ಟ ಆಯ್ತು’ ಎಂದಾಗ ನಮ್ಮ ಮನೆಯವರ ಮುಖದಲ್ಲಿ ಹೆಮ್ಮೆಯ ನಗು ಮೂಡಿತು.

    ನಮಗೆ ಸಿಕ್ಕನೊಬ್ಬ ಕಾಂಟ್ರ್ಯಾಕ್ಟರ್‌… ಎಲ್ಲದಕ್ಕೂ ಹೂಂ ಗುಟ್ಟಿದ: ದುಡ್ಡು ತಗೊಂಡು ತೀರ್ಥಯಾತ್ರೆಗೆ ಎಸ್ಕೇಪ್‌ ಆದ!

    ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts