More

    ಬಸವಣ್ಣ ಬಂದ, ಮೂವರ ಕೊಳಕ್ಕೆ ತಳ್ಳಿದ: ನಡೆಯಿತು ಪವಾಡ, 58 ವರ್ಷಗಳ ಸಮಸ್ಯೆ ಕ್ಷಣಾರ್ಧದಲ್ಲಿ ಇತ್ಯರ್ಥ!

    ಮಂಡ್ಯ: ಮಂಡ್ಯದಲ್ಲಿ ಬಹಳ ವರ್ಷಗಳಿಂದ ಪವಾಡ ಮಾಡುತ್ತಾ ಬಂದಿರುವ ಬಸಪ್ಪ ಮತ್ತೊಂದು ಪವಾಡ ಮಾಡಿದ್ದಾನೆ. 58 ವರ್ಷದ ಸಮಸ್ಯೆ ಒಂದೇ ಗಂಟೆಯಲ್ಲಿ ಇತ್ಯರ್ಥವಾಗಿ ಹೋಗಿದೆ. ಬಸಪ್ಪನ ಪವಾಡಕ್ಕೆ ಮಂಡ್ಯದ ದೊಡ್ಡಬಾಣಸವಾಡಿ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ.

    ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಇದ್ದ ಸಮಸ್ಯೆಯನ್ನು ಹೊನ್ನನಾಯಕನಹಳ್ಳಿಯ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸವಣ್ಣ ಬಗೆಹರಿಸಿದ್ದಾನೆ. ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಪೂಜಾರಿ ಆಯ್ಕೆಗೆ ಸಂಬಂಧಿಸಿದಂತೆ ಸಮಸ್ಯೆ ಇತ್ತು. ಇದೀಗ ಬಗೆಹರಿದಿದೆ.

    58 ವರ್ಷದಿಂದ ನಿಂತಿದ್ದ ಹಬ್ಬ ಆಚರಣೆಗೆ ಮುನ್ನುಡಿ ಬರೆದಿದ್ದಾನೆ ಬಸಪ್ಪ. ಪೂಜಾರಿ ಆಯ್ಕೆಯಾಗದೆ ನಿಂತಿದ್ದ ಪಟ್ಟಲದಮ್ಮನ ಕೊಂಡ, ಬಡ್ಡಿ ಹಬ್ಬಕ್ಕೆ ಇದೀಗ ಪುನಃ ಚಾಲನೆ ಸಿಕ್ಕಿದೆ.

    ಆಗಿದ್ದೇನೆಂದರೆ ವಯೋಸಹಜವಾಗಿ 58 ವರ್ಷದ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಪಟ್ಟಲದಮ್ಮನ ಕೊಂಡ, ಬಡ್ಡಿ ಹಬ್ಬ ನಿಂತೇ ಹೋಗಿತ್ತು. ಏಕೆಂದರೆ ಇವರ ನಿಧನದ ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರೂ ಯಾವುದೇ ಫಲ ಕೊಟ್ಟಿರಲಿಲ್ಲ. ಪೂಜಾರಿಗಳ ಮೈ ಮೇಲೆ ದೇವಿ ಬಾರದಿದ್ದಕ್ಕೆ ಪಟ್ಟಲದಮ್ಮನ ಹಬ್ಬ ನಿಂತೇ ಹೋಗಿತ್ತು.

    ಇದರಿಂದ ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೆಸ್ವಾಮಿ ಬಸಪ್ಪನ ಮೊರೆ ಹೋಗಿದ್ದಾರೆ ಗ್ರಾಮಸ್ಥರು. ಗ್ರಾಮಸ್ಥರ ಮನವಿ ಮೇರೆಗೆ ಊರಿಗೆ ಬಸಪ್ಪ ಬಂದಿದ್ದ. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಗುರುತಿಸಿರುವ ಬಸಪ್ಪ, ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ್ದಾನೆ.

    ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನ ಅರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ಬಿಜೆಪಿ ಸಚಿವ, ಸಂಸದರಿಗೆ ಮುಜುಗರ ತಂದ ವಡಾಪಾವ್‌! ತಿಂದು ಬಿಲ್‌ ಕೊಡದೇ ಪೇಚಿಗೆ ಸಿಲುಕಿದರು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts