More

    ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ಶಾಂಡಿಲ್ಯದಲ್ಲಿ ಜನಿಸಿದವಳು ನಾನು ಗೊತ್ತಾ?

    ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಪ್ರಚಾರ ಬಿರುಸಿನಿಂದ ಸಾಗಿದ್ದು, ಇದೀಗ ಗೋತ್ರ, ಜಾತಿಯ ಲೆಕ್ಕಾಚಾರ ಶುರುವಾಗಿದೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಪ್ರಚಾರ ಕಾರ್ಯದಲ್ಲಿ ತಮ್ಮ ಗೋತ್ರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ನಾನು, ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ಶಾಂಡಿಲ್ಯ ಗೋತ್ರದವಳು ಗೊತ್ತಾ ಎಂದು ಪ್ರಶ್ನಿಸಿದ್ದಾರೆ.

    ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿದ ಮಮತಾ, ನನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಪೂಜೆ ಮಾಡಿಸುವ ಸಮಯದಲ್ಲಿ ಪುರೋಹಿತರು ನನ್ನ ಗೋತ್ರವನ್ನು ಕೇಳಿದರು. ಆಗ ನಾನು ‘ಮಾ ಮತಿ ಮನುಷ್’ (ತಾಯಿ, ತಾಯ್ನಾಡು ಹಾಗೂ ಜನರು) ಎಂದು ಹೇಳಿದ್ದೇನೆ ಎಂದರು .

    ತ್ರಿಪುರಾದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೂ ಪುರೋಹಿತರು ನನ್ನ ಗೋತ್ರವನ್ನು ಕೇಳಿದ್ದಾಗಲೂ ಮಾ ಮತಿ ಮನುಷ್’ ಎಂದೇ ಹೇಳಿದ್ದೇನೆ. ಆದರೆ ನನ್ನದು ಬ್ರಾಹ್ಮಣರ ಅತ್ಯುನ್ನತ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ’ ಎಂದು ಹೇಳಿದರು.

    ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಚುನಾವಣೆಯಲ್ಲಿ ಸೋಲುವ ಭಯದಿಂದ ಮಮತಾ ತಮ್ಮ ಗೋತ್ರ ಹೇಳುತ್ತಿದ್ದಾರೆ. ಆದರೆ ಇದು ಅಚ್ಚರಿ ತರುವಂಥದ್ದು. ಏಕೆಂದರೆ ಮಮತಾ ಬ್ಯಾನರ್ಜಿ, ರೋಹಿಂಗ್ಯಾಗಳು ಮತ್ತು ಅಕ್ರಮವಾಗಿ ಒಳನುಸುಳಿದವರು. ಅಂಥವರು ಸಹ ಶಾಂಡಿಲ್ಯ ಗೋತ್ರದವರೇ ಎಂದು ಯಾರಾದರೂ ದಯವಿಟ್ಟು ಹೇಳಿ ಎಂದಿದ್ದಾರೆ.

    ದೀದಿ ನಾಡಲ್ಲಿ ಮತ್ತೆ ರೌಡಿಸಂ: ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ ನಡೆಸಿ ತೀವ್ರ ಹಲ್ಲೆ

    ಪೊಲೀಸ್​ ಠಾಣೆಯಲ್ಲಿದ್ದ ಸಾವಿರಾರು ಬಾಕ್ಸ್​ ಮದ್ಯದ ಬಾಟಲ್​ ನಾಪತ್ತೆ… ಇಲಿಯ ಕೆಲಸ ಎಂದ್ರು ಅಧಿಕಾರಿಗಳು!

    ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts