More

    ದೀದೀ ‘ದುರ್ಗಾವತಾರ’: 100 ಬಸ್ಕಿ ಹೊಡೆಯಲು ಸಿದ್ಧ ಎಂದದ್ದೇಕೆ ಮಮತಾ?

    ಕೋಲ್ಕತಾ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ದುರ್ಗಾ ಪೂಜೆ ಇಲ್ಲ ಎಂದು ಸರ್ಕಾರ ತೀರ್ಮಾನಿಸಿದೆ ಎಂಬ ಸುದ್ದಿ ಸಾಕಷ್ಟು ಹರಿದಾಡುತ್ತಿದೆ. ಈ ಸುದ್ದಿಯಿಂದ ಕೆಂಡಾಮಂಡಲವಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಂದು ವೇಳೆ ನಾನು ಹೀಗೆ ಹೇಳಿದ್ದೇನೆಂದು ಯಾರಾದರೂ ಸಾಬೀತುಮಾಡುವಿರಾ ಎಂದು ಸವಾಲೆಸೆದಿದ್ದಾರೆ, ಜತೆಗೆ ಒಂದು ವೇಳೆ ನಾನು ಹೀಗೆ ಹೇಳಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ ಜನರ ಮುಂದೆ 100 ಬಾರಿ ಬಸ್ಕಿ ಹೊಡೆಯುತ್ತೇನೆ ಎಂದು ಕಿಡಿ ಕಾರಿದ್ದಾರೆ.

    ಸರ್ಕಾರದ ವಿರುದ್ಧ ಕೆಟ್ಟ ವದಂತಿಗಳನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ, ಈ ಮೂಲಕ ಸರ್ಕಾರಕ್ಕೆ ಕಳಂಕ ತರುವ ಪಿತೂರಿ ನಡೆಸಲಾಗುತ್ತಿದೆ ಎಂದು ದೀದಿ ಆಕ್ರೋಶ ವ್ಯಕ್ತಪಡಿಸಿದರು. ಕಾಳಿ ಮತ್ತು ದುರ್ಗಾ ಅಥವಾ ಹನುಮನನ್ನು ಎಂದಿಗೂ ಪೂಜಿಸದವರು ಪೂಜೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

    ರಾಜ್ಯದಲ್ಲಿ ನಡೆಯುವ ದುರ್ಗಾ ಪೂಜೆ ಬಗ್ಗೆ ರಾಜಕೀಯ ಪಕ್ಷವೊಂದು ಸುಳ್ಳು ವದಂತಿ ಹಬ್ಬಿಸುತ್ತಿದೆ. ಇಲ್ಲಿಯವರೆಗೆ ನಾವು ಯಾವುದೇ ಸಭೆ ನಡೆಸಿಲ್ಲ. ದುರ್ಗಾ ಪೂಜೆ ಇಲ್ಲ ಎಂದು ಸರ್ಕಾರ ಹೇಳಿದೆ ಎಂದು ಯಾರಾದರೂ ಸಾಬೀತುಪಡಿಸಲಿ ನೋಡೋಣ ಎಂದು ಕಿಡಿ ಕಾರಿದರು.

    ಇದನ್ನೂ ಓದಿ: ಮರಾಠಿಗರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ: ಕಾಯ್ದೆಗೆ ‘ಸುಪ್ರೀಂ’ ತಡೆ

    ಕೆಲವು ನಕಲಿ ಐಟಿ ಪುಟಗಳು ದುರ್ಗಾ ಪೂಜೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿವೆ. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಕೋಮು ಸೌಹಾರ್ದತೆಯನ್ನು ನಾಶಗೊಳಿಸಲು ಇಂತಹ ನಕಲಿ ಸುದ್ದಿಗಳನ್ನು ಹಬ್ಬಿಸಲಾಗುತ್ತದೆ.ಇಂಥ ಜನರನ್ನು ಕಂಡುಹಿಡಿದು ಸುಮ್ಮನೆ ಕೂರುವಂತೆ ಮಾಡಲು ಪೊಲೀಸರನ್ನು ಕೇಳುತ್ತೇನೆ ಎಂದರು.

    ವಿಡಿಯೊ ಕಾನ್ಫರೆನ್ಸ್ ಮೂಲಕ ಪೊಲೀಸ್ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಸ್ತಾಪ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್‌ ಕ್ರಮಗಳನ್ನು ಇದೇ 20ರವರೆಗೆ ವಿಸ್ತರಿಸಲಾಗಿದೆ.

    2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

    ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts