More

    ಪ್ಲೀಸ್​ ನಮ್ಮ ಲೆಗ್ಗಿಂಗ್ಸ್​ ಧರಿಸಿ ರಾಯಭಾರಿಯಾಗಿ: ಮೃತಪಟ್ಟಾಕೆಯನ್ನು ಕೋರಿಕೊಂಡ ಪ್ರಸಿದ್ಧ ಕಂಪೆನಿ!

    ವಾಷಿಂಗ್ಟನ್​: ನಮ್ಮ ಲೆಗ್ಗಿಂಗ್ಸ್​ ಧರಿಸಿ ಪ್ಲೀಸ್​ ನಮ್ಮ ರಾಯಭಾರಿಯಾಗಿ ಎಂದು ಅಮೆರಿಕದ ಪ್ರಸಿದ್ಧ ಬ್ರ್ಯಾಂಡೆಡ್​ ಕಂಪೆನಿಯೊಂದು ಮೃತ ಲೇಖಕಿಯೊಬ್ಬರಿಗೆ ಇ-ಮೇಲ್​ ಕಳುಹಿಸಿ ಇದೀಗ ಭಾರಿ ಟ್ರೋಲ್​ ಆಗುತ್ತಿದೆ.

    2018ರಲ್ಲಿ ಮರತಪಟ್ಟಿರುವ ಜನಪ್ರಿಯ ಲೇಖಕಿ ಉರ್ಸುಲಾ ಕೆಲೆ ಗುಯಿನ್ ಎಂಬುವವರಿಗೆ ಈ ಇ-ಮೇಲ್​ ಹೋಗಿದೆ. 88ನೇ ವಯಸ್ಸಿನ ಲೇಖಕಿಯಾಗಿದ್ದ ಉರ್ಸುಲಾ​ ಸದಾ ಟಿಪ್​ಟಾಪ್​ ಆಗಿ ಡ್ರೆಸ್​ ಮಾಡಿಕೊಂಡಿರುತ್ತಿರುತ್ತಿದ್ದರು.

    ಇದರಿಂದ ವಯಸ್ಸಾದವರು ಕೂಡ ಲೆಗ್ಗಿಂಗ್​ ಧರಿಸಿ ಸುಂದರವಾಗಿ ಕಾಣಿಸಬಹುದು ಎಂದು ಪ್ರಚಾರಗಿಟ್ಟಿಸಿಕೊಳ್ಳಲು ಬಯಸಿದ್ದ ಕಂಪೆನಿ ಉರ್ಸುಲಾ ಅವರನ್ನೇ ತಮ್ಮ ಲೆಗ್ಗಿಂಗ್ಸ್​ ಮಾಡೆಲ್​ ಆಗಿ ತಮ್ಮ ಕಂಪೆನಿಯ ರಾಯಭಾರಿಯನ್ನಾಗಿ ಮಾಡಲು ಚಿಂತನೆ ನಡೆಸಿತ್ತು.

    ಈ ಹಿನ್ನೆಲೆಯಲ್ಲಿ ಅವರ ಇ-ಮೇಲ್​ ಐಡಿಯನ್ನು ಪತ್ತೆ ಹಚ್ಚಿ ಅವರಿಗೆ ಮೇಲ್​ ಕಳುಹಿಸಲಾಗಿದೆ. ನಿಮಗೆ ನಮ್ಮ ಕಂಪೆನಿಯ ಲೆಗ್ಗಿಂಗ್ಸ್​ ಅನ್ನು ಉಚಿತವಾಗಿ ಕೊಡುತ್ತಿದ್ದೇವೆ. ನೀವು ಅದನ್ನು ಧರಿಸಿ, ನಮ್ಮ ಕಂಪೆನಿಯ ರಾಯಭಾರಿಯಾಗಲು ಒಪ್ಪಿಕೊಳ್ಳಬೇಕು ಎಂದು ಅದರಲ್ಲಿ ಬರೆಯಲಾಗಿದೆ.

    ಆದರೆ ದುರದೃಷ್ಟ ಎಂದರೆ 2018ರಲ್ಲಿಯೇ ಅವರು ಮೃತಪಟ್ಟಿದ್ದರು. ಆದರೆ ಅವರ ಸಾಮಾಜಿಕ ಜಾಲತಾಣವನ್ನು ಅವರ ಸಂಬಂಧಿಯೊಬ್ಬರು ನಿರ್ವಹಿಸುತ್ತಿದ್ದರು. ಇದರಿಂದಲೋ ಏನೋ, ಕಂಪೆನಿ ಕನ್​ಫ್ಯೂಸ್​ ಮಾಡಿಕೊಂಡಿದ್ದು, ಅವರು ಬದುಕಿ ಇರುವುದಾಗಿ ತಿಳಿದಿದೆ.

    ನಂತರ ಈ ಇ-ಮೇಲ್​ ಐಡಿ ನಿರ್ವಹಿಸುತ್ತಿರುವ ಉರ್ಸುಲಾ ಅವರ ಸಂಬಂಧಿ ಅವರಿಗೆ ಉರ್ಸುಲಾ ಅವರು ಬದುಕಿದ್ದರೆ ನಿಮ್ಮ ಕೋರಿಕೆ ಈಡೇರಿಸುತ್ತಿದ್ದರೇನೋ, ಆದರೆ ನಿಮ್ಮ ಆಸೆ ಇದೀಗ ಪೂರೈಸಲು ಆಗುವುದಿಲ್ಲ. ಏಕೆಂದರೆ ಅವರು ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಕಂಪೆನಿಗೆ ರಿಪ್ಲೈ ಕಳಿಸಿದ್ದಾರೆ.

    ಮಾತ್ರವಲ್ಲದೇ ಕಂಪೆನಿಯಿಂದ ಬಂದಿರುವ ಮೇಲ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

    ಹಿಂದೆ ಮುಂದೆ ನೋಡದೇ ಮೇಲ್​ ಕಳಿಸಿರುವುದಕ್ಕೆ ಕೆಲವು ಕಮೆಂಟಿಗರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ನಾನಾಗಿದ್ದರೆ ಶವವನ್ನು ಹೊರಕ್ಕೆ ತೆರೆದು ಅದಕ್ಕೆ ಲೆಗ್ಗಿಂಗ್ಸ್​ ತೊಡಿಸಿ ಅವರಿಗೆ ರಿಪ್ಲೈ ಮಾಡುತ್ತಿದ್ದೆ ಎಂದು ಕಮೆಂಟ್​ನಲ್ಲಿ ಹೇಳಿದ್ದಾರೆ.

    ಕದನವಿರಾಮ ಉಲ್ಲಂಘಿಸಿ ಬಂದ ಐವರು ಪಾಕ್​ ಸೈನಿಕರನ್ನು ಸದೆಬಡಿದ ಯೋಧರು

    ಸನ್ನಿ ಲಿಯೋನ್​, ಇಮ್ರಾನ್​ ಹಶ್ಮಿ ನನ್ನ ಅಮ್ಮ-ಅಪ್ಪ; ಹಾಲ್​ ಟಿಕೆಟ್​ನಲ್ಲಿ ಬರೆದ ವಿದ್ಯಾರ್ಥಿ!

    ಪ್ರಿಯಾಂಕಾ ಛೋಪ್ರಾ, ಅರ್ಮಾನ್​ ಮಲಿಕ್​ರನ್ನು ಹಿಂದಿಕ್ಕಿ ಟಾಪ್​ 1 ಆದ್ರು ಸೋನು ಸೂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts