More

    ಆಕಾಶದಲ್ಲಿಯೇ ಸುಟ್ಟು ಕರಕಲಾಗುತ್ತಿದ್ದ 191 ಮಂದಿಯ ಜೀವ ಉಳಿಸಿದ ದಿಟ್ಟೆ ಈಕೆ- ಏನಿದು ಘಟನೆ?

    ಪಟ್ನಾ: ಈ ಚಿತ್ರದಲ್ಲಿ ಕಾಣಿಸುತ್ತಿರುವವರು ಮೋನಿಕಾ ಖನ್ನಾ. ಸ್ಪೈಸ್‌ಜೆಟ್ ವಿಮಾನದ ಪೈಲೆಟ್​. 185 ಮಂದಿ ಪ್ರಯಾಣಿಕರು ಸೇರಿದಂತೆ 191 ಮಂದಿಯ ಜೀವ ಉಳಿಸಿ ಭಾರಿ ಶ್ಲಾಘನೆಗೆ ಭಾಜನರಾಗಿದ್ದಾರೆ ಈಕೆ.

    ಆಗಿದ್ದೇನೆಂದರೆ, ಪಟ್ನಾದಿಂದ ದೆಹಲಿಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನ ಓಡಿಸುತ್ತಿದ್ದರು ಇವರು. ಇಬ್ಬರು ಮಕ್ಕಳು ಸೇರಿದಂತೆ ವಿಮಾನದಲ್ಲಿ 185 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಈ ವಿಮಾನದಲ್ಲಿ ಇದ್ದರು.

    ಪಟ್ನಾದ ಜೈಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹೊರಡಬೇಕಿತ್ತು. ವಿಮಾನ ಟೇಕಾಫ್ ಆದ ಕೂಡಲೇ ವಿಮಾನದ ಇಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ.

    ಇನ್ನೇನು ಇಡೀ ವಿಮಾನ ಸುಟ್ಟು ಭಸ್ಮವಾಗಿ ಎಲ್ಲರೂ ಜೀವ ಕಳೆದುಕೊಳ್ಳುತ್ತಿದ್ದರು. ಆ ಕ್ಷಣದಲ್ಲಿ ಮೋನಿಕಾ ವಿಚಲಿತರಾಗದೇ ತೆಗೆದುಕೊಂಡ ಒಂದೇ ಒಂದು ದಿಟ್ಟ ನಿರ್ಧಾರ ಎಲ್ಲರ ಜೀವವನ್ನು ಕಾಪಾಡಿದೆ.

    ವಿಮಾನದಿಂದ ಹೊಗೆ ಬರುತ್ತಿರುವುದನ್ನು ಕಂಡ ಕೆಲವರು ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನು ಎಟಿಸಿ ಕೂಡ ಗಮನಿಸಿದೆ. ಆ ನಂತರ ತಕ್ಷಣವೇ ಪೈಲಟ್-ಇನ್-ಕಂಟ್ರೋಲ್ ಆಗಿರುವ ಕ್ಯಾಪ್ಟನ್ ಮೋನಿಕಾ ಖನ್ನಾ ಅವರಿಗೆ ಮಾಹಿತಿ ನೀಡಲಾಯಿತು. ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸಿ, ಅವರು ವಿಮಾನದ ಒಂದು ಎಂಜಿನ್ ಅನ್ನು ಸ್ಥಗಿತಗೊಳಿಸಿದರು. ಫಸ್ಟ್ ಆಫೀಸರ್ ಬಲ್ಪ್ರೀತ್ ಸಿಂಗ್ ಭಾಟಿಯಾ ಅವರನ್ನು ಕೂಡಲೇ ಸಂಪರ್ಕಿಸಿ ವಿಮಾನವನ್ನು ಪಟ್ನಾ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

    ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಆ ಸಂದರ್ಭದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾವುದೇ ಕ್ಷಣದಲ್ಲಿ ವಿಮಾನವು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗುವ ಸಾಧ್ಯತೆ ಇತ್ತು. ಏಕೆಂದರೆ, ಒಂದು ಇಂಜಿನ್ ನಿಂತಾಗ ಕ್ಯಾಪ್ಟನ್ ಮೋನಿಕಾ ಖನ್ನಾ ಇನ್ನೊಂದು ಇಂಜಿನ್​ನಲ್ಲಿ ಮಾತ್ರ ವಿಮಾನ ಹಾರಿಸಬೇಕಿತ್ತು. ಹಕ್ಕಿ ಡಿಕ್ಕಿ ಹೊಡೆದು ಇನ್ನೊಂದು ಇಂಜಿನ್​ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಒಂದು ಇಂಜಿನ್ ಮಾತ್ರ ಕೆಲಸ ಮಾಡುತ್ತಿತ್ತು.

    ವಿಮಾನದಲ್ಲಿ ಇದ್ದ ಎಲ್ಲರ ಜೀವ ಬಾಯಿಗೆ ಬಂದಿತ್ತು. ವಿಮಾನಕ್ಕೆ ಬೆಂಕಿ ತಗುಲಿದೆ ಎಂದು ತಿಳಿದಾಗ ತಮ್ಮ ಜೀವ ಉಳಿಯುವ ಭರವಸೆಯನ್ನೇ ಎಲ್ಲರೂ ಕಳೆದುಕೊಂಡಿದ್ದರು. ಆದರೆ ಮೊನಿಕಾ ಅವರು, 19 ನಿಮಿಷಗಳ ಅವಧಿಯಲ್ಲಿ ತಮ್ಮೆಲ್ಲಾ ಪ್ರಯತ್ನವನ್ನು ಹಾಕಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿದರು. ಅದರಿಂದ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

    ಮದುಮಗಳಿಗೆ ಸಂಸದ ಕೊಟ್ಟರೊಂದು ಅಪರೂಪದ ಉಡುಗೊರೆ: ಗ್ರಾಮಕ್ಕೆ ಗ್ರಾಮವೇ ಫುಲ್​ ಖುಷ್​

    ಮೋದಿ ಹಾಗೂ ಮೊಸಳೆ ಕಥೆ: ಪ್ರಧಾನಿಯ ಸಾಹಸಗಾಥೆ ಪಠ್ಯ ಪುಸ್ತಕದಲ್ಲಿ…

    ಸಿದ್ದು ಅವಧಿಯಲ್ಲಿ ‘ಅರೇಬಿಕ್​ ಮಾತೆ’: ನಾಡಗೀತೆ ತಿರುಚಿದ ಆರೋಪಕ್ಕೆ ಟ್ವಿಸ್ಟ್​- ದೂರು ದಾಖಲು, ನಿಜಕ್ಕೂ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts