More

    ಕೇರಳದ ಸಿಎಂ ಮೊಗದಲ್ಲಿ ಭಾರಿ ಹರ್ಷ: ಎಲ್‌ಡಿಎಫ್‌ ಮೈತ್ರಿಕೂಟ 78 ಕ್ಷೇತ್ರಗಳಲ್ಲಿ ದಾ‍ಪುಗಾಲು

    ತಿರುವನಂತಪುರ: ಕೇರಳದಲ್ಲಿ ಅಧಿಕಾರದಲ್ಲಿರುವ ಎಡಪಕ್ಷ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್) ಅಧಿಕಾರಕ್ಕೆ ಬರುವುದಾಗಿ ಇದಾಗಲೇ ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿರುವಂತೆ ಆರಂಭಿಕ ಎಣಿಕೆಗಳಲ್ಲಿ ಎಲ್‍ಡಿಎಫ್ ಮೈತ್ರಿಕೂಟ ಮುನ್ನಡೆಯಲ್ಲಿದೆ.

    ಈ ಮೂಲಕ ಕೇರಳದಲ್ಲಿ ಮತ್ತೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚಿದೆ ಎಂದೇ ಬಣ್ಣಿಸಲಾಗುತ್ತಿದೆ. ಇದುವರೆಗೆ ನಡೆದ ಮತ ಎಣಿಕೆಯಲ್ಲಿ ಎಲ್‌ಡಿಎಫ್‌ 78 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಇದ್ದು, 57 ಕ್ಷೇತ್ರಗಳಲ್ಲಿ ಇದು ಮುನ್ನಡೆಯಲ್ಲಿದೆ. ಬಿಜೆಪಿ ಕೆವಲ ಮೂರು ಕ್ಷೇತ್ರಗಳಲ್ಲಿ ಸದ್ಯದ ಮುನ್ನಡೆ ಸಾಧಿಸಿದ್ದು, ಉಳಿದ ಪಕ್ಷಗಳು ಇನ್ನುಳಿದ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

    ಬಿಜೆಪಿಯಿಂದ ಸ್ಪರ್ಧಿಸಿರುವ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ತ್ರಿಶ್ಯೂರಿನಲ್ಲಿ ಸುರೇಶ್ ಗೋಪಿ ಮುನ್ನಡೆಯಲ್ಲಿದ್ದಾರೆ. ನೇಮಂನಲ್ಲಿ ಕುಮ್ಮನಂ ರಾಜಶೇಖರ್ ಮುನ್ನಡೆಯಲ್ಲಿದ್ದಾರೆ.

    ತಮಿಳುನಾಡು ಫೈಟ್‌: ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಹಿನ್ನಡೆ

    ಕೇರಳದ ಪಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್​ ಇ. ಶ್ರೀಧರನ್​ ಮುನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts