More

    ಕೇಜ್ರಿವಾಲ್‌ ಅಧಿಕಾರಕ್ಕಿನ್ನು ಕಡಿವಾಣ- ದೆಹಲಿಯಲ್ಲಿ ಇನ್ನು ರಾಜ್ಯಪಾಲರೇ ‘ಸರ್ಕಾರ’!

    ನವದೆಹಲಿ: ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಮಿತಿಗೊಳಿಸುವ ಕಾಯ್ದೆ ಜಾರಿಗೆ ಬಂದಿದ್ದು, ಇದರಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಅಧಿಕಾರಕ್ಕೆ ಭಾಗಶಃ ಕಡಿವಾಣ ಬಿದ್ದಿದೆ. ಇಂದಿನಿಂದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಈಗ ಕೇಂದ್ರಾಡಳಿತ ಪ್ರದೇಶದ ‘ಸರ್ಕಾರ’ ಎಂದು ಘೋಷಣೆಯಾಗಿದೆ.

    ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರವನ್ನು ಹೆಚ್ಚಿಸುವ ಮತ್ತು ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರವನ್ನು ಮಿತಿಗೊಳಿಸುವ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 2021 ಕ್ಕೆ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ 28ರಂದು ಸಮ್ಮತಿ ನೀಡಿದ್ದರು. ಅದು ಈಗ ಜಾರಿಗೊಂಡಿದೆ.

    ಇದರ ಅನ್ವಯ ‘ಸರ್ಕಾರ’ ಎನಿಸಿರುವ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿಗಳಿಗಿಂದ ಹೆಚ್ಚಿನ ಅಧಿಕಾರ ಪಡೆದಿರುತ್ತಾರೆ. ದೆಹಲಿ ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯ ಪಡೆದುಕೊಳ್ಳಲೇಬೇಕಾಗುತ್ತದೆ.

    ದೆಹಲಿಯಲ್ಲಿ ಇನ್ನುಮುಂದೆ ಯಾವುದೇ ಮಹತ್ವದ ನಿರ್ಧಾರ, ಕ್ರಮ ಕೈಗೊಳ್ಳುವ ಮೊದಲು ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ದಿನನಿತ್ಯದ ಆಡಳಿತದ ವಿಷಯಗಳನ್ನು ಪರಿಗಣಿಸಲು ಅಥವಾ ಆಡಳಿತಾತ್ಮಕ ನಿರ್ಧಾರಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳನ್ನು ನಡೆಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರಕ್ಕೆ ಇನ್ನು ಅನುಮತಿ ಇರುವುದಿಲ್ಲ. ಈ ಹಿಂದೆ ಸುಪ್ರೀಂಕೋರ್ಟ್‌ ನೀಡಿದ್ದ ನಿರ್ದೇಶನದ ಮೇರೆಗೆ ಈ ಕಾಯ್ದೆ ಜಾರಿಗೊಂಡಿದೆ.

    ಮಹಿಳೆಯೊಬ್ಬರ ಪತಿಗೆ ಜೀವ ನೀಡಲು ತಮ್ಮ ಬದುಕನ್ನು ಬಲಿಕೊಟ್ಟು ಕೊನೆಯುಸಿರೆಳೆದ ಆರ್‌ಎಸ್‌ಎಸ್‌ ಕಾರ್ಯಕರ್ತ

    ಲಸಿಕೆ ಹಾಕಿಸಿಕೊಳ್ಳಲು ಇಂದಿನಿಂದ ನೋಂದಣಿ ಪ್ರಕ್ರಿಯೆ ಶುರು- ನೀವೇನು ಮಾಡಬೇಕು? ಇಲ್ಲಿದೆ ಡಿಟೇಲ್ಸ್‌

    ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts