More

    ಎನ್‌ಇಪಿ ಪರ ಸಹಿ ಸಂಗ್ರಹ ಪ್ರತಿ ರಾಜ್ಯಪಾಲರಿಗೆ ಸಲ್ಲಿಕೆ, ಪೀಪಲ್ಸ್ ೆರಂ ಫಾರ್ ಕರ್ನಾಟಕ ಎಜುಕೇಶನ್ ವಿಭಾಗದ ಸಂಚಾಲಕ ರಮೇಶ ಕೆ. ಹೇಳಿಕೆ

    ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020ನ್ನು ಕರ್ನಾಟಕದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಪೀಪಲ್ಸ್ ೆರಂ ಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಒಟ್ಟು 10,16,080 ಸಹಿ ಸಂಗ್ರಹವಾಗಿದ್ದು, ಇದರ ಪ್ರತಿಗಳನ್ನು ಶೀಘ್ರದಲ್ಲೇ ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎನ್‌ಇಪಿ ರದ್ದುಪಡಿಸದೆ, ಮುಂದುವರೆಸಬೇಕು ಎಂದು ಪೀಪಲ್ಸ್ ೆರಂ ಫೋರ್ ಕರ್ನಾಟಕ ಎಜುಕೇಶನ್ ವಿಭಾಗದ ಸಂಚಾಲಕ ರಮೇಶ ಕೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ರಾಜ್ಯದ 168 ತಾಲೂಕು, 34 ಶೈಕ್ಷಣಿಕ ಜಿಲ್ಲೆ, 2630 ಶಾಲಾ- ಕಾಲೇಜು, 83600 ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು, 26980 ಪಾಲಕರು, 19327 ಆನ್‌ಲೈನ್ ಕ್ಯಾಂಪೇನ್ ಸಹಿ, 8,88,173 ವಿದ್ಯಾರ್ಥಿಗಳಿಂದ ಸಹಿ ಪಡೆಯಲಾಗಿದೆ. ಎನ್‌ಇಪಿಯನ್ನು ರದ್ದುಪಡಿಸಬಾರದು ಎಂಬ ಬಗ್ಗೆ ಅಭಿಯಾನ ಮೂಲಕ ಜನಜಾಗೃತಿ ಮೂಡಿಸಲಾಗಿದ್ದು, ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.

    ಎನ್‌ಇಪಿ ಬದಲಿಗೆ ರಾಜ್ಯದಲ್ಲಿ ಎಸ್‌ಇಪಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಲಾಗಿದೆ. ಸಮಿತಿ ರಚನೆ, ಅದರ ಉದ್ದೇಶ, ಮಾಹಿತಿ ಸಂಗ್ರಹಿಸುತ್ತಿರುವ ವಿಧಾನದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಸಮಿತಿಯಲ್ಲಿರುವ ಬಹುತೇಕರಿಗೆ ಕನ್ನಡ ಭಾಷೆ ತಿಳಿದಿಲ್ಲ. ಎನ್‌ಇಪಿ ರೂಪಿಸುವಾಗ ವ್ಯಾಪಕವಾಗಿ ಶಿಕ್ಷಣ ತಜ್ಞರ, ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿತ್ತು. ಎಸ್‌ಇಪಿ ಸಮಿತಿ ಈ ಕೆಲಸ ಮಾಡುತ್ತಿಲ್ಲ. ಎಸ್‌ಇಪಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೀಮಿತವಾಗಲಿದೆ. ಖಾಸಗಿ ಶಾಲೆಗಳಲ್ಲಿ ಎನ್‌ಇಪಿ ಶಿಕ್ಷಣ ದೊರೆತರೆ ಆರ್ಥಿಕವಾಗಿ ಹಿಂದುಳಿದ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಎಸ್‌ಇಪಿ ಎನ್ನುವ ತಾರತಮ್ಯ ಸೃಷ್ಟಿಯಾಗುತ್ತದೆ ಎಂದರು.

    ಪೀಪಲ್ಸ್ ೆರಂ ಾರ್ ಕರ್ನಾಟಕ ಎಜುಕೇಶನ್ ಸಂಚಾಲಕ ಪ್ರೊ. ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts