More

    ಎಸ್​ಎಸ್​ಎಲ್​ಸಿಯಿಂದ ಬಿಇ: ವಿಜಯಪುರ ಡಿಸಿಸಿ ಬ್ಯಾಂಕ್​ನಲ್ಲಿವೆ 71 ಹುದ್ದೆಗಳು

    ಶತಮಾನದ ಇತಿಹಾಸ ಹೊಂದಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆಗಳು: 71

    ವಿಜಯಪುರದ ಡಿಸಿಸಿ ಬ್ಯಾಂಕ್​ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಲ್ಲಿ ಬ್ಯಾಕ್​ಲಾಗ್​ ಹುದ್ದೆಗಳೂ ಇದ್ದು, ಹೈದರಾಬಾದ್​ ಕರ್ನಾಟಕಕ್ಕೆ ಮೀಸಲಾತಿಯನ್ನು ಒದಗಿಸಲಾಗಿದೆ. ಮಾ.2ರ ವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ.

    ಹುದ್ದೆ ವಿವರ
    * ಹಿರಿಯ ವ್ಯವಸ್ಥಾಪಕ- 3 * ಕಿರಿಯ ವ್ಯವಸ್ಥಾಪಕ- 5 * ಕಂಪ್ಯೂಟರ್​ ಇಂಜಿನಿಯರ್​- 1 * ಕ್ಷೇತ್ರಾಧಿಕಾರಿ- 14 * ಕೃಷಿ ಅಭಿವೃದ್ಧಿ ಅಧಿಕಾರಿ- 1 * ಪ್ರಥಮದರ್ಜೆ ಸಹಾಯಕ- 20 * ಜವಾನ (ಪರಿಚಾರಕ)- 21 * ಸೆಕ್ಯೂರಿಟಿ ಗಾರ್ಡ್​- 2
    – ಹೈದರಾಬಾದ್​ ಕರ್ನಾಟಕ ವೃಂದ
    * ಕ್ಷೇತ್ರಾಧಿಕಾರಿ- 1 * ಪ್ರಥಮ ದರ್ಜೆ ಸಹಾಯಕ- 1 * ಜವಾನ (ಪರಿಚಾರಕ)- 2

    ಅರ್ಹತಾ ಮಾನದಂಡಗಳು
    ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಪದವಿ, ಬಿಎಸ್ಸಿ (ಕೃಷಿ), ಬಿಇ (ಕಂಪ್ಯೂಟರ್​ ಸೈನ್ಸ್​/ ಇ ಮತ್ತು ಸಿ), ಎಂಸಿಎ ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ. ಆಯ್ದ ಹುದ್ದೆಗಳಿಗೆ ವೃತ್ತಿ ಅನುಭವ ಅಪೇಸಲಾಗಿದೆ.|

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯವರ್ಗದ ಅಭ್ಯರ್ಥಿಗೆ 35 ವರ್ಷ, ಹಿಂದುಳಿದ ವರ್ಗಕ್ಕೆ ಗರಿಷ್ಠ 38, ಎಸ್ಸಿ, ಎಸ್ಟಿ, ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷ ಹೆಚ್ಚುವರಿ ವಯೋಸಡಿಲಿಕೆ ಇದೆ.

    ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 500 ರೂ., ಮೀಸಲಾತಿ ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಜವಾನ ಹಾಗೂ ಸೆಕ್ಯುರಿಟಿ ಗಾರ್ಡ್​ ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ 1:20ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ 1:5ರ ಅನುಪಾತದಲ್ಲಿ ಮೌಖಿತ ಸಂದರ್ಶನಕ್ಕೆ ಕರೆಯಲಾಗುವುದು. ಕೆಲ ಹುದ್ದೆಗೆ ಪ್ರಾವಿಣ್ಯತಾ ಪರೀಕ್ಷೆ ಇರುತ್ತದೆ.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 23,500 – 45,300 ರೂ. ವೇತನ ಜತೆ ನಿಯಮಾನುಸಾರ ತುಟ್ಟಿ ಭತ್ಯೆ ಮತ್ತು ಇತರ ಭತ್ಯೆ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 5.3.2022

    ಅರ್ಜಿ ಸಲ್ಲಿಕೆ ವಿಳಾಸ: ಸಂಚಾಲಕ ಸದಸ್ಯರು, ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ನಿ., ವಿಜಯಪುರ
    ಅಧಿಸೂಚನೆ ಹಾಗೂ ಮಾಹಿತಿಗೆ: https://vijaypurdccbank.com

    ‘ಹಿಜಾಬ್‌ ತೆಗೆಯಿರಿ, ಇಲ್ಲಾ ಟಿ.ಸಿ. ತಗೊಂಡು ಹೋಗಿ, ಮೂಲಭೂಹಕ್ಕು ಸಿಗೋ ಶಾಲೆಗೇ ಸೇರ್ಕೊಳ್ಳಿ…’

    ಅನ್ಯಧರ್ಮೀಯನ ಪ್ರೇಮ ಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ, ಮದ್ವೆಯಾದ್ರೆ ಅಕ್ಕ-ತಂಗಿ ಭವಿಷ್ಯ ಕಷ್ಟ… ಪ್ಲೀಸ್ ದಾರಿ ತೋರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts