More

    ಪವಿತ್ರಾ ಕೊಣ್ಣೂರ ವಿಜಯಪುರ ಜಿಲ್ಲೆಗೆ ಪ್ರಥಮ

    ಮುದ್ದೇಬಿಹಾಳ: ಕಲಬುರಗಿ ಸಾರಿಗೆ ಟಕದಲ್ಲಿ ನಿರ್ವಾಹಕರಾಗಿರುವ ಮುದ್ದೇಬಿಹಾಳ ತಾಲೂಕು ಢವಳಗಿ ಗ್ರಾಮದ ಮಡಿವಾಳಪ್ಪಗೌಡ ಕೊಣ್ಣೂರ ಅವರ ಪುತ್ರಿ, ಬಿದರಕುಂದಿ ಆರ್​ಎಂಎಸ್​ಎ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರ ಎಸ್ಸೆಸ್ಸೆಲ್ಸಿ ಇಂಗ್ಲಿಷ್​ ಮಾಧ್ಯಮ ಪರೀೆಯಲ್ಲಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ರ್ಯಾಂಕ್​ ಮತ್ತು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ.

    ಸ್ಪರ್ಧಾತ್ಮಕ ಪರೀೆ ಮೂಲಕ ಆದರ್ಶ ವಿದ್ಯಾಲಯದ 6ನೇ ತರಗತಿಗೆ ಆಯ್ಕೆಯಾಗಿ ಪ್ರವೇಶ ಪಡೆದಿದ್ದ ಪವಿತ್ರಾ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಪ್ರಥಮ ಭಾಷೆ ಇಂಗ್ಲಿಷ್​ಗೆ 124, ದ್ವೀತಿಯ ಭಾಷೆ ಕನ್ನಡಕ್ಕೆ 100, ತತಿಯ ಭಾಷೆ ಹಿಂದಿಗೆ 100, ಕೋರ್​ ವಿಷಯಗಳಾದ ಗಣಿತಕ್ಕೆ 100, ಸಮಾಜ ವಿಜ್ಞಾನಕ್ಕೆ 100, ವಿಜ್ಞಾನಕ್ಕೆ 99 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ಗುರುವಾರ ಆನ್​ಲೈನ್​ನಲ್ಲಿ ಲಿತಾಂಶ ಬಿಡುಗಡೆಯಾದ ಕೂಡಲೇ ತಂದೆ ಮಡಿವಾಳಪ್ಪಗೌಡ, ತಾಯಿ ಭಾರತಿ ಜತೆ ಶಾಲೆಗೆ ಬಂದಿದ್ದ ಪವಿತ್ರಾಳನ್ನು ಶಿಣ ಇಲಾಖೆ ವತಿಯಿಂದ ಬಿಇಒ ಬಿ.ಎಸ್​.ಸಾವಳಗಿ, ಎಸ್ಸೆಸ್ಸೆಲ್ಸಿ ಪರೀೆ ನೋಡಲ್​ ಅಧಿಕಾರಿ ಎಚ್​.ಎ.ಮೇಟಿ ಹಾಗೂ ಶಾಲೆ ಮುಖ್ಯಶಿಕ್ಷಕಿ ಎನ್​.ಬಿ.ತೆಗ್ಗಿನಮಠ, ಶಿಕರಾದ ಸಂಗಮೇಶ ಸಜ್ಜನ, ಸಂತೋಷ ಪಾಟೀಲ ಅವರು ಶಾಲು ಹೊದಿಸಿ, ಪುಸ್ತಕ ಕಾಣಿಕೆ ನೀಡಿ ಸನ್ಮಾನಿಸಿ ಶುಭ ಕೋರಿದರು. ತಂದೆ, ತಾಯಿ, ಬಿಇಒ, ಮುಖ್ಯಶಿಕ್ಷಕಿ ಪವಿತ್ರಾಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

    ತನಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಶಿಕರನ್ನು ಸ್ಮರಿಸಿದ ಪವಿತ್ರಾ, ದಿನಕ್ಕೆ ಎರಡು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ಕಲಿಸಿದ್ದನ್ನು ಮನಗೊಟ್ಟು ಕಲಿಯುತ್ತಿದ್ದೆ. ಹಾರ್ಡ್​ ವರ್ಕ್​ಗಿಂತ ಸ್ಮಾರ್ಟ್​ ವರ್ಕ್​ ಮುಖ್ಯ ಎನ್ನುವುದನ್ನು ಶಿಕರು ಹೇಳಿಕೊಟ್ಟಿದ್ದು ಅದರಂತೆ ನಡೆದುಕೊಂಡಿದ್ದೆ. ಇದು ನನ್ನ ಸಾಧನೆಗೆ ಅವಕಾಶ ಮಾಡಿಕೊಟ್ಟಿದೆ ಎಂದರು.

    ನನಗೆ 600ವರೆಗೂ ಅಂಕ ಗಳಿಸುವ ವಿಶ್ವಾಸ ಇತ್ತು. ಇದೀಗ ನಿರೀೆಗಿಂತ ಹೆಚ್ಚಿಗೆ ಅಂಕಗಳು ಬಂದಿದ್ದು ಖುಷಿ ಕೊಟ್ಟಿದೆ. ಎಸ್ಸೆಸ್ಸೆಲ್ಸಿ ಪರೀೆ ಬರೆಯುವವರು ಸ್ಮಾರ್ಟ್​ ವರ್ಕ್​ಗೆ ಹೆಚ್ಚಿನ ಮಹತ್ವ ಕೊಡಬೇಕು. ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡು ಎಂಬಿಬಿಎಸ್​ ಕಲಿತು ವೈದ್ಯೆಯಾಗುವುದು ನನ್ನ ಗುರಿಯಾಗಿದೆ ಎಂದಳು.

    ಬಿಇಒ ಬಿ.ಎಸ್​.ಸಾವಳಗಿ ಮಾತನಾಡಿ, ನಮ್ಮ ತಾಲೂಕಿನ ಶೆಣಿಕ ವಲಯದ ಕೀರ್ತಿ ಹೆಚ್ಚಿಸಿರುವ ಪವಿತ್ರಾ ಭವಿಷ್ಯದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿ ಈ ಬಾರಿ ಪರೀೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಿದ್ದರ ಪರಿಣಾಮ ನಿಜವಾದ ಪ್ರತಿಭೆಗಳು ಸಾಧನೆ ಮಾಡಲು ಅವಕಾಶವಾಗಿದೆ ಎಂದರು.

    ಮುಖ್ಯಶಿಕ್ಷಕಿ ತೆಗ್ಗಿನಮಠ ಮಾತನಾಡಿ, ಪವಿತ್ರಾ ಮೊದಲಿನಿಂದಲೂ ಜಾಣ ವಿದ್ಯಾರ್ಥಿನಿಯಾಗಿದ್ದಳು. ಆಕೆ ಸಾಧನೆ ಮಾಡುವ ನಿರೀೆ ನಮಗಿತ್ತು. ಅದೀಗ ನಿಜವಾಗಿದೆ ಎಂದರು.

    ಶಾಲೆಗೆ ಬಂದ ಕೂಡಲೇ ಮಗಳ ಸಾಧನೆ ಅರಿತ ಮಡಿವಾಳಪ್ಪಗೌಡರ ಕಣ್ಣುಗಳಿಂದ ಆನಂದಭಾಷ್ಪ ಹರಿಯಿತು.

    ಮಡಿವಾಳಪ್ಪಗೌಡ ಅವರು ಪಿಯುಸಿವರೆಗೆ ಓದಿದ್ದು, ಸದ್ಯ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ತಾಯಿ ಭಾರತಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದು, ಗಹಿಣಿಯಾಗಿದ್ದಾರೆ. ಪವಿತ್ರಾಗೆ ಒಬ್ಬ ಸಹೋದರನಿದ್ದು, ಆತನೂ ಆದರ್ಶ ವಿದ್ಯಾಲಯದಲ್ಲಿ 9ನೇ ತರಗತಿ ಓದುತ್ತಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts