More

    ಕಾನೂನು ಪದವೀಧರರಾ? ದೆಹಲಿ ಹೈಕೋರ್ಟ್​ನಲ್ಲಿವೆ 123 ಹುದ್ದೆಗಳು- 1.77 ಲಕ್ಷ ರೂ.ವರೆಗೆ ಸಂಬಳ

    ದೆಹಲಿ ಹೈಕೋರ್ಟ್​ ದೆಹಲಿ ನ್ಯಾಯಾಂಗ ಸೇವೆಯ 123 (55 ಅಸ್ತಿತ್ವದಲ್ಲಿರುವ ಹಾಗೂ 68 ನಿರೀಕ್ಷಿತ) ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ದೆಹಲಿ ನ್ಯಾಯಾಲಯ ಸೇವೆಯ 2 ಪರೀಕ್ಷೆಗಳನ್ನು ಉತ್ತೀರ್ಣರಾಗುವುದು ಕಡ್ಡಾಯ.

    ಒಟ್ಟು ಹುದ್ದೆಗಳು: 123

    ಅರ್ಹತಾ ಮಾನದಂಡಗಳು:
    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲ್​ಎಲ್​ಬಿ ಉತ್ತೀರ್ಣರಾಗಿರುವ ಅಥವಾ ತತ್ಸಮಾನ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 1.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 5& 10 ವರ್ಷ ವಯೋಸಡಿಲಿಕೆ ಇದೆ. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 86 ಸ್ಥಾನ, ಎಸ್ಸಿಗೆ 8 ಸ್ಥಾನ ಹಾಗೂ ಎಸ್ಟಿಗೆ 29 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ 10 ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

    ವೇತನ: 7ನೇ ವೇತನ ಆಯೋಗದ ಅನ್ವಯ 10ನೇ ಹಂತದ ವೇತನ ಇದೆ. ಮಾಸಿಕ 56,100- 1,77,500 ರೂ. ವೇತನ ಇದೆ.

    ಆಯ್ಕೆ ವಿಧಾನ: ಈ ನೇಮಕಾತಿಗೆ 3 ಹಂತದಲ್ಲಿ ಪರೀಕ್ಷೆ ನಡೆಸಲಾಗುವುದು. ಪ್ರಿಲಿಮಿನರಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಇರಲಿದೆ. ಬಹು ಆಯ್ಕೆ ಮಾದರಿಯಲ್ಲಿ ನ್ಯಾಯಾಂಗ ಸೇವೆಯ ಪೂರ್ವಭಾವಿ ಪರೀಕ್ಷೆಯು ಮಾ.27ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದೆ. ಇದರಲ್ಲಿ ಋಣಾತ್ಮಕ ಅಂಕ ಇರಲಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ಇದು ಲಿಖಿತ ಪರೀಕ್ಷೆ ಆಗಿರಲಿದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆಗೆ ಆಹ್ವಾನಿಸಲಾಗುವುದು.

    ಅರ್ಜಿಶುಲ್ಕ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 1,000 ರೂ., ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಆನ್​ಲೈನ್​ ಮೂಲಕ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 20.3.2022
    ಅಧಿಸೂಚನೆಗೆ: https://bit.ly/3M8tYyg

    ಮಾಹಿತಿಗೆ:http://www.delhihighcourt.nic.in/

    ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ

    ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಹ್ವಾನ- ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts