More

    ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ: 199 ಹುದ್ದೆಗಳಿಗೆ ಆಹ್ವಾನ

    ಇಂಡಿಯನ್​ ಆಡಿಟ್​ ಆ್ಯಂಡ್​ ಅಕೌಂಟ್ಸ್​ ಇಲಾಖೆಯಲ್ಲಿ 2021ನೇ ಸಾಲಿಗೆ ಗ್ರೂಪ್​ ಸಿ ಸೇರಿದ ಆಡಿಟರ್​ ಹಾಗೂ ಅಕೌಂಟೆಂಟ್​ ಹುದ್ದೆಗಳಿಗೆ ಕ್ರೀಡಾ ಕೋಟಾದಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎರಡೂ ಹುದ್ದೆಗೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಆರಂಭದ 2 ವರ್ಷ ಪ್ರೊಬೆಷನರಿ ಅವಧಿ ಆಗಿರುತ್ತದೆ. ನಂತರ ಅಭ್ಯಥಿರ್ಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.

    ಯಾವ ಕ್ರೀಡೆಗಳಿಗೆ ಅವಕಾಶ
    ಕ್ರಿಕೆಟ್​, ಫುಟ್​ಬಾಲ್​, ಹಾಕಿ, ಬ್ಯಾಡ್ಮಿಂಟನ್​ (ಮಹಿಳೆಯರಿಗೂ ಅವಕಾಶ), ಟೇಬಲ್​ ಟೆನಿಸ್​ (ಮಹಿಳೆಯರಿಗೂ ಅವಕಾಶ).

    ಎಲ್ಲೆಲ್ಲಿ ನೇಮಕಾತಿ?:
    ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ ಸೇರಿ ಗುವಾಹಟಿ, ರಾಂಚಿ, ಶಿಲ್ಲಾಂಗ್​, ಇಂಾಲ, ಕೊಹಿಮಾ, ಐಜ್ವಾಲ್​, ಇಟಾನಗರ್​, ಭವನೇಶ್ವರ್​, ಅಗತಲಾ, ಕೋಲ್ಕತ್ತ, ಸಿಕ್ಕಿಂ, ಪಟನಾ, ರಾಯಪುರ್​, ಬಿಲಾಸ್​ಪುರ್​, ಗ್ವಾಲಿಯರ್​/ಭೋಪಾಲ್​, ಮುಂಬೈ, ನಾಗ್​ಪುರ್​, ಜೈಪುರ, ರಾಜ್​ಕೋಟ್​, ಅಹಮದಾಬಾದ್​, ಗೋವಾ, ದೆಹಲಿ, ಪಂಜಾಬ್​, ಉತ್ತರಪ್ರದೇಶ, ಪುಣೆ, ಚಂಡೀಗಢ, ಶ್ರೀನಗರ, ಶಿಮ್ಲಾ, ಡೆಹ್ರಾಡೂನ್​, ಹೈದರಾಬಾದ್​, ಸಿಕಂದರಾಬಾದ್​, ಚೆನ್ನೆ$, ತಿರುವನಂತಪುರ.

    ಹುದ್ದೆ ವಿವರ
    * ಆಡಿಟರ್​/ ಅಕೌಂಟೆಂಟ್​
    * ಕ್ಲರ್ಕ್​/ ಡಿಇಒ- ಗ್ರೇಡ್​ ಎ

    ಕರ್ನಾಟಕದ ವಿವರ
    * ಬೆಂಗಳೂರಿನಲ್ಲಿ ಆಡಿಟರ್​/ ಅಕೌಂಟೆಂಟ್​ ಹುದ್ದೆಯಲ್ಲಿ ಕ್ರಿಕೆಟ್​ ಕ್ರೀಡಾ ವಿಭಾಗದಲ್ಲಿ 4 ಸ್ಥಾನ, ಹಾಕಿ ವಿಭಾಗದಲ್ಲಿ 2, ುಟ್​ಬಾಲ್​ ವಿಭಾಗದಲ್ಲಿ 3 ಸ್ಥಾನ ಇದೆ. ಕ್ಲರ್ಕ್​/ ಡಿಇಒ ಹುದ್ದೆಯಲ್ಲಿ ಹಾಕಿ ವಿಭಾಗದಲ್ಲಿ 2, ುಟ್​ಬಾಲ್​ ವಿಭಾಗದಲ್ಲಿ 1 ಸ್ಥಾನ ಇದೆ. ಹುಬ್ಬಳ್ಳಿಯಲ್ಲಿ ಆಡಿಟರ್​ ಹುದ್ದೆಯಲ್ಲಿ ಟೇಬಲ್​ ಟೆನ್ನಿಸ್​ ಪುರುಷ ಅಭ್ಯರ್ಥಿಗೆ ಒಂದು ಸ್ಥಾನ ಇದೆ.

    ಶೈಕ್ಷಣಿಕ ಅರ್ಹತೆ: ಆಡಿಟರ್​/ ಅಕೌಂಟೆಂಟ್​ ಹುದ್ದೆಗೆ ಯಾವುದೇ ಪದವಿ, ಕ್ಲರ್ಕ್​/ಡಿಇಒ ಗ್ರೇಡ್​ ಎ ಹುದ್ದೆಗೆ ದ್ವೀತಿಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಟೈಪಿಂಗ್​ ತಿಳಿದಿರಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸರ್ಧೆಯಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು. ಅಂತರ ವಿಶ್ವವಿದ್ಯಾಲಯ ಟೂರ್ನಾಮೆಂಟ್​ನಲ್ಲಿ ವಿವಿಯನ್ನು ಪ್ರತಿನಿಧಿಸಿರಬೇಕು.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ವಯೋಸಡಿಲಿಕೆಗೆ ಅವಕಾಶ ಇದೆ.

    ವೇತನ: ಎಲ್ಲ ಹುದ್ದೆಗೂ ಮಾಸಿಕ 5,200- 20,200 ಪೇ ಬ್ಯಾಂಡ್​ನ ವೇತನ ಶ್ರೇಣಿ ನಿಗದಿಯಾಗಿದ್ದು, ಆಡಿಟರ್​/ ಅಕೌಂಟೆಂಟ್​ಗೆ ಗ್ರೇಡ್​ ಪೇ 2,800 ಇದೆ. ಕ್ಲರ್ಕ್​ಗೆ ಗ್ರೇಡ್​ ಪೇ 1,900 ರೂ., ಡಿಇಒ-ಗ್ರೇಡ್​ ಎಗೆ ಗ್ರೇಡ್​ ಪೇ 2,400 ರೂ. ಇದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಅಂಕಗಳನ್ನು ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾಗುವುದು. ನಂತರ ಫೀಟ್​ನೆಸ್​ ಹಾಗೂ ಕೌಶಲ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ಪ್ರತಿ ನಗರದ ಹುದ್ದೆಗೂ ಅರ್ಜಿ ಸಲ್ಲಿಸಲು ಪ್ರತ್ಯೇಕ ವಿಳಾಸ ನೀಡಲಾಗಿದ್ದು, ಅಭ್ಯರ್ಥಿಗಳು ಆಯಾ ನಗರದ ವಿಳಾಸಕ್ಕೆ ಅಜಿರ್ಯನ್ನು ಸ್ಪೀಡ್​/ ರಿಜಿಸ್ಟ್ರರ್​/ ಆಡಿರ್ನರಿ ಪೋಸ್ಟ್​ ಮೂಲಕ ಕಳುಹಿಸಲು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 1.11.2021
    ಅಧಿಸೂಚನೆಗೆ: https://bit.ly/3m2aO1G
    ಮಾಹಿತಿಗೆ: cag.gov.in

    ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿವೆ ವಿವಿಧ ಹುದ್ದೆ: 2 ಲಕ್ಷ ರೂವರೆಗೆ ಸಂಬಳ

    ಭದ್ರತಾ ಕ್ಷೇತ್ರದ ನಿವೃತ್ತರಿಗೆ ಗುಡ್ ನ್ಯೂಸ್‌- ನಮ್ಮ ಮೆಟ್ರೋದಲ್ಲಿ 37 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts