More

    ಚಾಮರಾಜನಗರ, ಕೊಪ್ಪಳ ಕೋರ್ಟ್​ನಲ್ಲಿವೆ ಸ್ಟೆನೊ, ಟೈಪಿಸ್ಟ್​, ಡ್ರೈವರ್​, ಜವಾನ ಹುದ್ದೆಗಳು: ಅರ್ಜಿ ಆಹ್ವಾನ

    ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶರ ಕಚೇರಿಯಲ್ಲಿ ಶ್ರೀಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು-ನಕಲುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯಲ್ಲಿ ಹಿಂಬಾಕಿ ಹುದ್ದೆಗಳೂ ಸೇರಿವೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದ್ದು, ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ. ಎಲ್ಲ ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ ಕೇಳಲಾಗಿದೆ.
    ಒಟ್ಟು ಹುದ್ದೆಗಳು: 26

    * ಶೀಘ್ರಲಿಪಿಗಾರ-3 * ಬೆರಳಚ್ಚುಗಾರ-2 * ಬೆರಳಚ್ಚು-ನಕಲುಗಾರ – 3
    ದ್ವೀತಿಯ ಪಿಯುಸಿ/ ಕಮರ್ಷಿಯಲ್​ ಪ್ರಾಕ್ಟೀಸ್​ನಲ್ಲಿ 3 ವರ್ಷದ ಡಿಪ್ಲೊಮಾ/ ತತ್ಸಮಾನ ಶಿಕ್ಷಣ ಪಡೆದಿರುವುದರ ಜತೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ, ಕಿರಿಯದರ್ಜೆ ಕನ್ನಡ ಮತ್ತು ಇಂಗ್ಲಿಷ್​ ಭಾಷಾ ಬೆರಳಚ್ಚು ಹಾಗೂ ಶ್ರೀಲಿಪಿಯಲ್ಲಿ ಉತ್ತೀರ್ಣರಾಗಿರಬೇಕು. ಶೀಘ್ರಲಿಪಿಗಾರ ಹುದ್ದೆಗೆ ಮಾಸಿಕ 27,650-52,650 ರೂ., ಬೆರಳಚ್ಚುಗಾರ ಹಾಗೂ ಬೆರಳಚ್ಚು ನಕಲುಗಾರ ಹುದ್ದೆಗೆ ಮಾಸಿಕ 21,400-42,000 ರೂ. ವೇತನ ಇದೆ.

    * ಆದೇಶ ಜಾರಿಕಾರ – 6 * ಸೇವಕ-12
    ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ/ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಡ್ರೈವಿಂಗ್​ ಲೈಸೆನ್ಸ್​ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆದೇಶ ಜಾರಿಕಾರರಿಗೆ ಮಾಸಿಕ 19,950-37,900 ರೂ. ಹಾಗೂ ಸೇವಕರಿಗೆ ಮಾಸಿಕ 17,000-28,950 ರೂ. ವೇತನ ನೀಡಲಾಗುವುದು.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯವರ್ಗದ ಅಭ್ಯರ್ಥಿಗೆ 35 ವರ್ಷ, ಪ್ರವರ್ಗ 22, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್ಸಿ,. ಎಸ್ಟಿ, ಪ್ರವರ್ಗ 1ಕ್ಕೆ ಗರಿಷ್ಠ 40 ವರ್ಷ ವಯೋಮಿಗಿ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಶೇಕಡವಾರು ಅಂಕ ಮತ್ತು ಆಯಾ ಹುದ್ದೆಗೆ ನಿಗದಿಪಡಿಸಿರುವ ಸಾಮರ್ಥ್ಯ ಪರೀಕ್ಷೆ ಮೂಲಕ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಅನುಗುಣವಾಗಿ 1:5 ರಿಂದ 1:25ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 10.4.2022
    ಅಧಿಸೂಚನೆಗೆ: https://bit.ly/361UybT

    ಕೊಪ್ಪಳ ನ್ಯಾಯಾಲಯದಲ್ಲಿ ಜವಾನ ಹುದ್ದೆ
    ಒಟ್ಟು: 10
    ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನಲ್ಲಿ ಖಾಲಿ ಇರುವ 10 ಜವಾನರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್​ ಕರ್ನಾಟಕ ವೃಂದಕ್ಕೆ 8 ಸ್ಥಾನ ಹಾಗೂ ಸ್ಥಳಿಯ ವೃಂದಕ್ಕೆ 2ಸ್ಥಾನ ಮೀಸಲಿರಿಸಲಾಗಿದೆ.
    ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, ಕನ್ನಡ ಓದಲು ಬರೆಯಲು ತಿಳಿದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 200 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು 1:10ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಮಾಸಿಕ 17,000 – 28,950 ರೂ. ವೇತನ ಇರುತ್ತದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 7.4.2022
    ಅಧಿಸೂಚನೆಗೆ: https://bit.ly/3Ipu4OZ

    ಮಾಹಿತಿಗೆ:http://districts.ecourts.gov.in

    ಹಿಂದುಸ್ಥಾನ್​ ಶಿಪ್​ಯಾರ್ಡ್​ ಲಿಮಿಟೆಡ್‌ನಲ್ಲಿದೆ 40 ಹುದ್ದೆಗಳು: ಒಂದು ಲಕ್ಷ ರೂ.ವರೆಗೆ ಸಂಬಳ

    ಪದವೀಧರರಿಗೆ ಮೈಸೂರು ಮಾನಸಗಂಗೋತ್ರಿಯ ಭಾಷಾ ಕೇಂದ್ರದಿಂದ ಅರ್ಜಿ ಆಹ್ವಾನ: 38 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts