More

    ವಿವಿಧ ಸ್ನಾತಕೋತ್ತರ ಪದವೀಧರರಿಂದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎರಡೇ ದಿನ ಬಾಕಿ

    ನ್ಯಾಕ್​ನಿಂದ ಎ ಮಾನ್ಯತೆ ಪಡೆದಿರುವ ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು 2021-22ರ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗಲಿದೆ.

    ಹುದ್ದೆಗಳ ವಿವರ


    – ಅತಿಥಿ ಉಪನ್ಯಾಸಕ

    * ಕಾನೂನು -12

    * ಕನ್ನಡ – 2

    * ರಾಜ್ಯಶಾಸ್ತ್ರ – 1

    * ಸಮಾಜಶಾಸ್ತ್ರ – 1

    * ಅರ್ಥಶಾಸ್ತ್ರ – 1

    * ಮ್ಯಾನೇಜ್​ವೆುಂಟ್ – 1

    ಶೈಕ್ಷಣಿಕ ಅರ್ಹತೆ: 2018ರ ಯುಜಿಸಿ ನಿಯಮಾನುಸಾರ ಶೈಕ್ಷಣಿಕ ಅರ್ಹತೆ ನಿಗದಿಪಡಿಸಿದ್ದು, ಬೋಧನಾ ವಿಷಯದಲ್ಲಿ (ಕಾನೂನು, ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮ್ಯಾನೇಜ್​ವೆುಂಟ್) ಸ್ನಾತಕೋತ್ತರ ಪದವಿಯನ್ನು ಶೇ.55 ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ನೆಟ್/ ಸ್ಲೆಟ್/ ಸೆಟ್/ ಪಿಎಚ್.ಡಿ ವ್ಯಾಸಂಗ ಮಾಡಿರಬೇಕು.

    ವೇತನ: ಅತಿಥಿ ಉಪನ್ಯಾಸಕರಿಗೆ ಬೋಧನೆಗೆ ಅನುಗುಣವಾಗಿ ಗಂಟೆಯ ಅಧಾರದಲ್ಲಿ ವೇತನ ನಿಗದಿಪಡಿಸಿದ್ದು, ಪ್ರತಿ ಗಂಟೆಗೆ 325 ರೂ. ವೇತನ ಹಾಗೂ 50 ರೂ. ಪ್ರಯಾಣ ಭತ್ಯೆ ನೀಡಲಾಗುವುದು.

    ಅರ್ಜಿ ಸಲ್ಲಿಕೆ ಹೇಗೆ?: ವಿವಿಯ ವೆಬ್​ಸೈಟ್​ನಿಂದ ಅರ್ಜಿ ಡೌನ್​ಲೋಡ್ ಮಾಡಿಕೊಂಡು ಅಗತ್ಯ ದಾಖಲೆ, ಪ್ರಮಾಣಪತ್ರದೊಂದಿಗೆ ಇತರ ಸಾಧನೆಗಳಿದ್ದರೆ ಅವುಗಳ ವಿವರಗಳನ್ನು ಸಲ್ಲಿಸಬಹುದು. ಇಮೇಲ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

    ಸಂದರ್ಶನದ ವಿವರ: 29.11.2021ರ ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು 20 ನಿಮಿಷದ ಬೋಧನಾ ಪ್ರಾತ್ಯಕ್ಷಿಕೆ ನೀಡಲು ಸಿದ್ಧರಾಗಿ ಬಂದಿರಬೇಕು. ಅರ್ಜಿ ಜತೆ ಸಲ್ಲಿಸಲಾದ ಎಲ್ಲ ದಾಖಲೆ ಹಾಗೂ ಪ್ರಮಾಣಪತ್ರದ ಮೂಲ ಪ್ರತಿಯನ್ನು ದಾಖಲೆ ಪರಿಶೀಲನೆಗಾಗಿ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

    * ಅರ್ಜಿ ಸಲ್ಲಿಸುವ ವಿಳಾಸ

    ಇಮೇಲ್ ಐಡಿ: [email protected]

    ಅಂಚೆ ವಿಳಾಸ: ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ, ಹುಬ್ಬಳ್ಳಿ- 580025

    ಅರ್ಜಿ ಸಲ್ಲಿಸಲು ಕೊನೆಯ ದಿನ: 26.11.2021

    ಸಂದರ್ಶನ ನಡೆಯುವ ದಿನಾಂಕ: 29.11.2021

    ಅಧಿಸೂಚನೆಗೆ: https://bit.ly/3qOiibB

    ಮಾಹಿತಿಗೆ: http://kslu.karnataka.gov.in/

    ಸಹೋದ್ಯೋಗಿಗಳಿಂದ ಖಾಸಗಿ ಅಂಗಕ್ಕೆ ಏರ್‌ಪಂಪ್‌: ತಮಾಷೆಗಾಗಿ ಮಾಡಿದ ಕೆಲಸದಿಂದ ಯುವಕನ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts