More

    1 ರೂ.ಗೆ 100ಎಂಬಿ ಕೊಟ್ಟ ಜಿಯೋ ಗ್ರಾಹಕರಿಗೆ ಕೊಟ್ಟಿತು ಭಾರಿ ಶಾಕ್‌! ಒಂದೇ ದಿನದಲ್ಲಿ ಚೇಂಜ್‌ ಆಯ್ತು ಯೋಜನೆ

    ನವದೆಹಲಿ: ಒಂದು ರೂಪಾಯಿಗೆ 100 ಎಂಬಿ ಡೇಟಾವನ್ನು 30 ದಿನಗಳವರೆಗೆ ಆನಂದಿಸಿ ಎಂದು ನಿನ್ನೆಯಷ್ಟೇ (ಡಿ.15) ಜಿಯೋದಿಂದ ಭಾರಿ ಆಫರ್‌ ಬಿಡುಗಡೆಯಾಗಿತ್ತು. ಇದನ್ನು ಕೇಳಿದ ಗ್ರಾಹಕರು ಮುಗಿಬಿದ್ದು ಈ ಆಫರ್‌ ಪ್ರಯೋಜನ ಪಡೆದುಕೊಂಡರು. ಇನ್ನು ಕೆಲವರು ಇರಲಿ, ಇನ್ನೊಂದೆರಡು ದಿನಗಳಲ್ಲಿ ಚಾರ್ಜ‌ ಮಾಡಿಸಿದರಾಯಿತು ಎಂದು ಸುಮ್ಮನಾದರು.

    ಆದರೆ ಸುಮ್ಮನಾದವರಿಗೆ ಭಾರಿ ಆಘಾತ ನೀಡಿದೆ ಜಿಯೋ. ಏಕೆಂದರೆ ಒಂದು ರೂಪಾಯಿ ಯೋಜನೆಯೇನೋ ಇದೆ. ಆದರೆ 100 ಎಂಬಿ ಬದಲು ಅದು 10 ಎಂಬಿಗೆ ಇಳಿದಿದೆ. 30 ದಿನಗಳ ವ್ಯಾಲಿಡಿಟಿ ಒಂದು ದಿನಕ್ಕೆ ಇಳಿದಿದೆ. ಅಂದರೆ ಒಂದು ರೂಪಾಯಿ ರೀಚಾರ್ಜ್‌ ಮಾಡಿದರೆ ಒಂದು ದಿನ ನೀವು 10ಎಂಬಿ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಯಾವುದೇ ಕರೆ, ಎಸ್ಎಮ್ಎಸ್ ಪ್ರಯೋಜನ ಇಲ್ಲ.

    ಇದರ ಹೊರತಾಗಿ 119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಜಿಯೋ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಜತೆಗೆ ಪ್ರತಿದಿನ 300 ಎಸ್‌ಎಂಎಸ್‌, ಉಚಿತ ಕರೆಗಳು ಲಭ್ಯ ಇವೆ. ಆದರೆ ಈ ಯೋಜನೆಯು 14 ದಿನಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ.

    ಜಿಯೋದ 299 ರೂ. ಪ್ರಿಪೇಯ್ಡ್ ಯೋಜನೆಯೂ ಇದ್ದು, ಇದರಲ್ಲಿ ಪ್ರತಿದಿನ 2 ಜಿಬಿ ಡೇಟಾ, 100 ಉಚಿತ ಎಸ್‌ಎಂಎಸ್‌, ಉಚಿತ ಕರೆಗಳ ಜತೆಗೆ 28 ದಿನಗಳ ವ್ಯಾಲಿಡಿಟಿ ಪಡೆಯಬಹುದು.

    ಥೂ… ಇಂಥವರೂ ಇರ್ತಾರಾ? ಸರ್ಕಾರದ ಪ್ರಯೋಜನ ಪಡೆಯಲು ತಂಗಿಯನ್ನು ಮದ್ವೆಯಾದ ಅಣ್ಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts